FACT CHECK | ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಜನವರಿ 6ರಿಂದ ಪ್ರಾರಂಭ ಆಗಲಿದೆಯೇ?
ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದೊಂದಿಗೆ ಪೋಸ್ಟ್ವೊಂದು ಪ್ರಸಾರವಾಗುತ್ತಿದ್ದು, ಇದರಲ್ಲಿ ‘ಜನವರಿ 6ರಂದು ಬೆಂಗಳೂರು ಮೆಟ್ರೋ ಯೆಲ್ಲೋ ಲೈನ್ ಕಾರ್ಯಾರಂಭ ಮಾಡಲಿದೆ : 18 ನಿಲ್ದಾಣಗಳು ಪ್ರಮುಖ ಐಟಿ ಹಬ್ಗಳನ್ನು ಸಂಪರ್ಕಿಸಲಿದೆ’ ಎಂದು ಬರೆಯಲಾಗಿದೆ. ಎಕನಾಮಿಕ್ ಟೈಮ್ಸ್ ಸೇರಿ ಪ್ರಮುಖ ಪತ್ರಿಕೆಗಳೂ ಈ ಬಗ್ಗೆ ವರದಿ ಮಾಡಿವೆ. ಈ ರೀತಿಯ ವರದಿಗಳನ್ನು ಇಲ್ಲಿಯೂ ಕಾಣಬಹುದು.

‘ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋದ ಯೆಲ್ಲೋ ಲೈನ್ ಜನವರಿ 6, 2025ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇದು ನಗರದ ಮೆಟ್ರೋ ಸಂಪರ್ಕಕ್ಕೆ ಅಗತ್ಯವಿರುವ ಉತ್ತೇಜನವನ್ನು ನೀಡುತ್ತದೆ’ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಬರೆಯಲಾಗಿದೆ.
ನಗರದ ನಮ್ಮ ಮೆಟ್ರೋದ ಮೂರನೇ ಮಾರ್ಗವಾದ ಹಳದಿ ಮಾರ್ಗವು ಇದೇ ಜನವರಿ 6ರಿಂದ ಕಾರ್ಯಾಚರಣೆ ಆರಂಭಿಸಲಿದೆ ಎಂದು ಸುದ್ದಿಯಾಗಿದೆ. ಈ ಸಂಬಂಧ ಹಲವರು ಸಾಮಾಜಿಕ ಮಾಧ್ಯ,ಮಗಳಲ್ಲಿ ಬರೆದುಕೊಂಡಿದ್ದು, ಕೆಲವು ಮಾಧ್ಯಮ ಸಂಸ್ಥೆಗಳೂ ಈ ಬಗ್ಗೆ ವರದಿ ಮಾಡಿವೆ. ಹಾಗಾದರೆ ಯೆಲ್ಲೋ ಲೈನ್ ಮೆಟ್ರೋ ಜನವರಿ 6ರಿಂದ ಆರಂಭವಾಗಲಿದೆಯೇ? ಪೋಸ್ಟ್ನಲ್ಲಿ ಂಆಡಿದ ಪ್ರತಿಪಾದನೆ ಮತ್ತು ಮಾಧ್ಯಮಗಳು ಹಂಚಿಕೊಂಡ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಸೋಷಿಯಲ್ ಮೀಡಿಯಾ ಬಳಕೆದಾರರು ನಗರದ ನಮ್ಮ ಮೆಟ್ರೋದ ಮೂರನೇ ಮಾರ್ಗವಾದ ಹಳದಿ ಮಾರ್ಗವು ಇದೇ ಜನವರಿ 6ರಿಂದ ಕಾರ್ಯಾಚರಣೆ ಆರಂಭಿಸಲಿದೆ ಎಂದು ಹಂಚಿಕೊಳ್ಳಲು ಕಾರಣವಾಗಿದ್ದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾಡಿರುವ ಟ್ವೀಟ್.
Important update on Yellow Line :
As you all are aware, the start of the Namma Metro Yellow Line operations has failed to meet all the deadlines given by BMRCL, frustrating all of us.
The main reason for the delay in start of operations is the unavailability of the trains.…
— Tejasvi Surya (@Tejasvi_Surya) January 2, 2025
ಸಂಸದ ತೇಜಸ್ವಿ ಸೂರ್ಯ ಮಾಡಿದ ಟ್ವೀಟ್ನಲ್ಲಿ ಏನಿದೆ?
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾಡಿರುವ ಟ್ವೀಟ್ ಅನ್ನೇ ಇಟ್ಟುಕೊಂಡು ಎಕನಾಮಿಕ್ ಟೈಮ್ಸ್ ಈ ವರದಿ ಮಾಡಿದೆ. “ಜನವರಿ 6 ರಂದು ಬೆಂಗಳೂರಿಗೆ ಕಳುಹಿಸಲು ಮೊದಲ ರೈಲು ಸಿದ್ಧವಾಗಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲು ಹಾಗೂ ಏಪ್ರಿಲ್ನಲ್ಲಿ ಮೂರನೇ ರೈಲನ್ನು ತಲುಪಿಸಲು ತಿತಾಘರ್ ಬದ್ಧವಾಗಿದೆ. ನಂತರ ಸಂಸ್ಥೆಯು ತಿಂಗಳಿಗೆ ಒಂದು ರೈಲನ್ನು ತಲುಪಿಸಲಿದ್ದು, ಸೆಪ್ಟೆಂಬರ್ ವೇಳೆಗೆ ತಿಂಗಳಿಗೆ ಎರಡು ರೈಲುಗಳನ್ನು ನೀಡಲಿದೆ,” ಎಂದು ಗುರುವಾರ ಅವರು ಟ್ವೀಟ್ ಮಾಡಿದ್ದರು.
ಇದನ್ನೇ ತಪ್ಪಾಗಿ ಭಾವಿಸಿ ಜನವರಿ 6ರಿಂದಲೇ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. . ಜನರು ಇದನ್ನೇ ಪೋಸ್ಟ್ಗಳಲ್ಲೂ ಹಂಚಿಕೊಂಡಿದ್ದಾರೆ. ತಮ್ಮ ಟ್ವೀಟ್ ಅನ್ನು ಮಾಧ್ಯಮಗಳು ಜನರು ತಪ್ಪಾಗಿ ಭಾವಿಸಿರುವುದು ಅರಿವಾದ ಹಿನ್ನೆಲೆಯಲ್ಲಿ ಶುಕ್ರವಾರ ಸ್ವತಃ ತೇಜಸ್ವಿ ಸೂರ್ಯ ಅವರ ಕಚೇರಿಯೇ ಮಾಧ್ಯಮಗಳಿಗೆ ಸ್ಪಷ್ಟನೆಯನ್ನು ನೀಡಿದೆ.
ತೇಜಸ್ವಿ ಸೂರ್ಯ ಸ್ಪಷ್ಟನೆ :
ಇದರಲ್ಲಿ, “ಹಲವು ಸುದ್ದಿ ಸಂಸ್ಥೆಗಳು, ಜನವರಿ 6ರಿಂದ ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾರಂಭದ ಕುರಿತಾಗಿ ನೀಡಿರುವ ಪ್ರಕಟಣೆಗಳು ಸುಳ್ಳು. ತೇಜಸ್ವಿ ಸೂರ್ಯ ಅವರು ಜನವರಿ 6 ರಂದು ಬೆಂಗಳೂರಿಗೆ ಟೀಟಾಘರ್ನಿಂದ ಮೆಟ್ರೋ ಬೋಗಿಗಳ ಆಗಮನದ ಕುರಿತಾಗಿ ಟ್ವೀಟ್ ಮಾಡಿದ್ದು, ಮೆಟ್ರೋ ಹಳದಿ ಮಾರ್ಗದ ಪ್ರಾರಂಭದ ಕುರಿತಾಗಿ ಅಲ್ಲ,” ಎಂದು ಅವರ ಕಚೇರಿ ಸ್ಪಷ್ಟೀಕರಣ ನೀಡಿದೆ.
ಜನವರಿ 6ರಂದು ನಮ್ಮ ಮೆಟ್ರೋ ಯೆಲ್ಲೋ ಲೈನ್ನಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂಬ ಸುದ್ದಿ ಸುಳ್ಳಾಗಿದೆ. ಅಂದು ಟಿಟಾಘರ್ನಿಂದ ಬೆಂಗಳೂರಿಗೆ ರೈಲನ್ನು ಕಳುಹಿಸಲಾಗುತ್ತದೆ. ಇದು ಎರಡನೇ ರೈಲು. ಮೂರನೇ ರೈಲು ಬರಬೇಕಿದ್ದು, ನಂತರವಷ್ಟೇ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಹಾಗಾಗಿ ಜನವರಿ 6ರಿಂದ ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭಎಂಬುದು ನಿಜವಲ್ಲ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಉಗ್ರಗಾಮಿಗಳು ಟರ್ಕಿ ಸೇನೆಯ ಹೆಲಿಕಾಪ್ಟರ್ಅನ್ನು ಹೊಡೆದುರುಳಿಸಿದ ದೃಶ್ಯವನ್ನು ಪಾಕಿಸ್ತಾನದ್ದು ಎಂದು ತಪ್ಪಾಗಿ ಹಂಚಿಕೆ

