ಫ್ಯಾಕ್ಟ್‌ಚೆಕ್: ಒಂದು ಮರ ಉಳಿಸಲು ಗುತ್ತಿಗೆದಾರ ರಸ್ತೆಯನ್ನೆ ತಿರುಗಿಸಿದ ಘಟನೆ! ವಾಸ್ತವವೇನು?

ನಾವು ವಾಸಿಸುವ ಪ್ರದೇಶದಲ್ಲಿ ಒಂದು ಚಿಕ್ಕ ರಸ್ತೆ ನಿರ್ಮಾಣ ಆಗುತ್ತಿದೆ ಎಂದಿಟ್ಟುಕೊಳ್ಳಿ. ಅದಕ್ಕಾಗಿ ಎಷ್ಟೊಂದು ಮರಗಳ ಮಾರಣ ಹೋಮ ನಡೆದುಹೋಗಿರುತ್ತದೆ. ಅಗತ್ಯ ಇಲ್ಲದಿದ್ದರೂ ಮರಗಳನ್ನು ಧರೆಗುರುಳಿಸಿ ರಸ್ತೆ ನಿರ್ಮಿಸುವವರ ನಡುವೆ ಒಂದು ಮರ ಉಳಿಸಲು ರಸ್ತೆಯನ್ನೆ ತಿರುಗಿಸಿದ ಗುತ್ತಿಗೆದಾರ ಎಂಬ ಸಂದೇಶ ಮತ್ತು ಫೋಟೊ ಇರುವ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಕೂಡ ಆಗಿದೆ.

ಮರವನ್ನು ಉಳಿಸಲು ಗುತ್ತಿಗೆದಾರರೊಬ್ಬರು ನೇರವಾದ ರಸ್ತೆಯನ್ನು ತಿರುಗಿಸಿದ್ದಾರೆ ಎಂಬ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪರಿಸರದ ಬಗ್ಗೆ ಕಿವಿ ಮಾತನ್ನು ಹೇಳುವಾಗಲೂ ಈ ಫೋಟೋವನ್ನು ಉದಾಹರಣೆಯಾಗಿ ತೆಗೆದುಕೊಂಡ ನಿದರ್ಶನಗಳು ಉಂಟು. ಹಾಗಿದ್ದರೆ ಪೋಸ್ಟ್‌ನಲ್ಲಿ ಹೇಳಿರುವಂತೆ ರಸ್ತೆ ಕಾಂಟ್ರ್ಯಾಕ್ಟರ್ ನಿಜವಾಗಿಯೂ ಮರವನ್ನು ಉಳಿಸುವ ಉದ್ದೇಶದಿಂದ ರಸ್ತೆಯ ರಚನೆಯನ್ನೆ ಬದಲಾಯಿಸಿದ್ದಾರಾ?  ಇದರ ವಾಸ್ತವಾಂಶ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಅದೇ ಫೋಟೋ ಇಂಟರ್ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿರುವುದು ಕಂಡುಬಂದಿದೆ. ಅಲ್ಲದೆ, 2020 ರಲ್ಲಿ, ಅದೇ ಫೋಟೋವನ್ನು ಡಿಬಂಕ್ ಮಾಡುವ ‘ಸ್ಟಾಕ್ ಎಕ್ಸ್ಚೇಂಜ್’ ವೆಬ್‌ಸೈಟ್‌ನಲ್ಲಿ ಕಾಣಬಹುದು. ಈ ಪೋಟೋ ಅತೀ ಹೇಚ್ಚು ಭಾರಿ ಪೋಸ್ಟ್‌ ಆಗಿರುವ ಪೋಸ್ಟ್‌ ಮತ್ತು ಶೇರ್ ಆಗಿರುವ ಫೋಟೋ ಎಂದು ಹೇಳಲಾಗಿದೆ.

ಅದೇ ವಾಹನಗಳು ಮತ್ತು ಅದೇ ರೀತಿಯ ಬಂಡೆಗಳೊಂದಿಗೆ ಮೂಲ ಫೋಟೋವನ್ನು ‘ಗೆಟ್ಟಿ ಇಮೇಜಸ್’ ವೆಬ್‌ಸೈಟ್‌ನಲ್ಲಿ ಕಾಣಬಹುದು. ಅದೇ ವಾಹನಗಳೊಂದಿಗೆ ಅದೇ ಸ್ಥಳದ ಮತ್ತೊಂದು ಫೋಟೋವನ್ನು ಇಲ್ಲಿ ನೋಡಬಹುದು.

 

ಒಟ್ಟಾರೆಯಾಗಿ ಹೇಳುವುದಾದರೆ  ಮರವನ್ನು ಉಳಿಸಲು ಗುತ್ತಿಗೆದಾರ ನೇರವಾದ ರಸ್ತೆಯನ್ನು ತಿರುವು ಮಾಡಿಕೊಂಡು ನಿರ್ಮಿಸಿದ್ದಾನೆ ಎಂದು ಎಡಿಟ್ ಮಾಡಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದು ಎಡಿಟ್ ಮಾಡಿದ ಫೋಟೋ, ಮೂಲ ಫೋಟೋದಲ್ಲಿ ಮಧ್ಯದಲ್ಲಿ ಮರವೂ ಇಲ್ಲ ರಸ್ತೆಯನ್ನು ಆ ರೀತಿ ತಿರುಗಿಸಿಲ್ಲ.ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಯುವತಿಯನ್ನು ಕೊಂದು ಸೂಟ್ ಕೇಸ್‌ನಲ್ಲಿ ತುಂಬಿದ ಭಗ್ನ ಪ್ರೇಮಿ ಪ್ರಕರಣ ಲವ್ ಜಿಹಾದ್ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights