Categories
Breaking News District State

ಯುವತಿಯ ಫೋಟೋ ತೆಗೆದು ಕಿರಿಕಿರಿ : ಕಾಂಟ್ರ್ಯಾಕ್ಟರ್‌ಗೆ ಬಿತ್ತು ಸಖತ್ ಗೂಸಾ

ರೋಡ್ ರೋಮಿಯೊ ಥರ ಯುವತಿಯ ಬೆನ್ನು ಹತ್ತಿದ್ ಗುತ್ತಿಗೆದಾರನಿಗೆ ಆಕೆಯ ಸಂಬಂಧಿಕರು ಹಿಗ್ಗಾಮುಗ್ಗಾ ಉರುಳಾಡಿಸಿ ಗೂಸಾ ನೀಡಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಬಳಿ ನಡೆದಿದೆ.

ಮೋತಿಸಾಬ್ ತಳೇವಾಡ ಎಂಬ ಕಟ್ಟಡ ನಿರ್ಮಿಸುವ ಗುತ್ತಿಗೆದಾರ ಮದುವೆಯಾಗಿದ್ದ. ಆದರೆ, ಮತ್ತೊಂದು ಯುವತಿಯ ಹಿಂದೆ ಬಿದ್ದಿದ್ದ. ಹಣ ಕೊಡ್ತಿನಿ, ಬರ್ತಿಯಾ ಎಂದು ಕಾಲೇಜು ಯುವತಿಗೆ ಕೇಳಿದ್ದ. ಈ ವಿಷಯ ತಿಳಿದ ಯುವತಿಯ ಸಂಬಂಧಿಕರು ನಿಡಗುಂದಿ ಪಟ್ಟಣದ ಹೊರ ವಲಯಕ್ಕೆ ಕರೆದೊಯ್ದು ಚಪ್ಪಲಿಯಿಂದ ಬಾರಿಸಿದ್ದಾರೆ.

ಈ ಯುವತಿ ಗುತ್ತಿಗೆದಾರ ಮೋತಿಸಾಬ್ ತಳೇವಾಡ್ ಗೆ ಪರಿಚಯವಿದ್ದರೂ ಆಕೆಯ ಹಿಂದೆ ಬಿದ್ದು ಚುಡಾಯಿಸುವುದನ್ನು ಮುಂದುವರೆಸಿದ್ದ. ಅಷ್ಟೇ ಅಲ್ಲ, ಯುವತಿಯಫೋಟೋ ತೆಗೆದು ಕಿರಿಕಿರಿ ಮಾಡುತ್ತಿದ್ದ. ಕೇಳಿದಷ್ಟು ಹಣ ಕೊಡುತ್ತೇನೆ. ಹಾಸಿಗೆಗೆ ಬಾ ಎಂದು ಕರೆಯುತ್ತಿದ್ದ. ಇದರಿಂದ ರೋಸಿ ಹೋದ ಯುವತಿ, ಈ ವಿಷಯವನ್ನು ತನ್ನ ಮನೆಯವರಿಗೆ ತಿಳಿಸಿದ್ದಾಳೆ.

ಈಗ ಸಿಟ್ಟಾದ ಯುವತಿಯ ಸಂಬಂಧಿಕರು ಕಟ್ಟಡ ಗುತ್ತಿಗೆದಾರ ಮೋತಿಸಾಬ್ ತಳೇವಾಡನನ್ನು ನಿಡಗುಂದಿ ಪಟ್ಟಣದ ಹೊರವಲಯಕ್ಕೆಕರೆದೊಯ್ದು ನೆಲದ ಮೇಲೆ ಉರುಳಾಡಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಝಾಡಿಸಿ ಒದ್ದಿದ್ದಾರೆ. ಅಷ್ಟೇ ಅಲ್ಲ, ಚಪ್ಪಲಿಯಿಂದ ಹೊಡೆಯುವ ಮೂಲಕ ಛಳಿ ಬಿಡಿಸಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Categories
Breaking News State

ನಿಯಮ ಉಲ್ಲಂಘನೆಗಾಗಿ ಇಂದಿರಾ ಕ್ಯಾಂಟೀನ್ ಆಹಾರ ಸರಬರಾಜು ಗುತ್ತಿಗೆದಾರರಿಗೆ ದಂಡ

ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರವನ್ನು ಸರಬರಾಜು ಮಾಡುವ ಎರಡು ಗುತ್ತಿಗೆದಾರರಿಗೆ 1.32 ಕೋಟಿ ರೂ ದಂಡ ವಿಧಿಸಲಾಗಿದೆ. ಆಹಾರದ ಗುಣಮಟ್ಟ, ಆಹಾರದ ಪ್ರಮಾಣ, ಸರಿಯಾದ ಸಮಯಕ್ಕೆ ಆಹಾರ ಒದಗಿಸದೇ ಇರುವುದು ಹಾಗೂ ಇನ್ನಿತರೆ ನಿಯಮಗಳನ್ನು ಪಾಲನೆ ಮಾಡದಿರುವ ಕಾರಣ ಎರಡು ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ.

ಬಿಬಿಎಂಪಿಯು ಈ ಎರಡು ಗುತ್ತಿಗೆದಾರರಿಗೆ 1,32,38,450 ಕೋಟಿ ರೂ ದಂಡ ವಿಧಿಸಿದೆ. ನವೆಂಬರ್ 2017ರಿಂದ 2018ರ ಡಿಸೆಂಬರ್ ವರೆಗಿನ ಅವರ ಕಾರ್ಯವನ್ನು ಗಮನದಲ್ಲಿಟ್ಟುಕೊಳ್ಳಲಾಗಿತ್ತು, ಮಾಜಿ ಸೈನಿಕರು ಇವರ ಕಾರ್ಯದ ಮೇಲೆ ನಿಗಾ ಇಡುತ್ತಿದ್ದರು. ಮಾಜಿ ಸೈನಿಕರು ನಗರದಲ್ಲಿರುವ ಎಲ್ಲಾ 198 ವಾರ್ಡ್‌ಗಳ ಇಂದಿರಾ ಕ್ಯಾಂಟೀನ್‌ ಮೇಲೆ ನಿಗಾ ಇಟ್ಟಿದ್ದಾರೆ.

ಕೇವಲ ಕಾರ್ಯವನ್ನು ಗಮನಿಸುವುದಷ್ಟೇ ಅಲ್ಲದೆ ಸಾರ್ವಜನಿಕರಿಂದ ಅಭಿಪ್ರಾಯವನ್ನೂ ಕೂಡ ಪಡೆಯುತ್ತಿದ್ದಾರೆ. ಸಿಬ್ಬಂದಿಗಳ ವಸ್ತ್ರ, ಆಹಾರ ಸರಬರಾಜಿನಲ್ಲಿ ವ್ಯತ್ಯಯ, ಸಿಬ್ಬಂದಿಗಳ ವರ್ತನೆ ಎಲ್ಲವನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಕಳೆದ ಕೆಲವು ತಿಂಗಳ ಹಿಂದೆ ಇಂದಿರಾ ಕ್ಯಾಂಟೀನ್ ಸಾಂಬಾರಿನಲ್ಲಿ ಇಲಿ ಪತ್ತೆಯಾಗಿತ್ತು, ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಏಕಾಏಕಿ ಇಂದಿರಾ ಕ್ಯಾಂಟೀನ್ ತಪಾಸಣೆಗೆಂದು ತೆರಳಿದಾಗ ಸ್ವಚ್ಛತೆ ಇಲ್ಲದಿರುವುದು ಗೋಚರವಾಗಿತ್ತು.

Categories
Breaking News State

ಈಜಿಪುರ ಕಟ್ಟದ ವಾಲಿದ ಪ್ರಕರಣ : ಮುಂದುವರಿದ ತೆರವು ಕಾರ್ಯ

ಬೆಂಗಳೂರು : ಈಜಿಪುರದಲ್ಲಿ ವಾಲಿದ ಕಟ್ಟಡದ ತೆರವು ಕಾರ್ಯಾಚರಣೆ ಆರಂಭವಾಗಿದೆ. ಬಿಬಿಎಂಪಿಯ ಖಾಸಗಿ ಕಂಟ್ರಾಕ್ಟರ್‌ ಎಂ.ಕೃಷ್ಣಮೂರ್ತಿ ನೇತೃತ್ವದಲ್ಲಿ ಆರು ಮಂದಿ ಕಾರ್ಮಿಕರಿಂದ ತೆರವು ಕಾರ್ಯ ನಡೆಯುತ್ತಿದೆ.

ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು, ಡೆಮಾಲಿಷನ್ ಖರ್ಚು ವೆಚ್ಚವನ್ನ ಕಟ್ಟಡದ ಮಾಲೀಕರಿಗೆ ವಹಿಸಲಾಗಿದೆ. ನಿನ್ನೆಗಿಂತ ಸುಮಾರು 1 ಅಡಿ ಎಡಭಾಗಕ್ಕೆ ಕಟ್ಟಡ ವಾಲಿದ್ದು, ಸ್ಥಳೀಯ ನಿವಾಸಿಗಳನ್ನು ಕೋರಮಂಗಲ ಎನ್‌ಜಿವಿ ಕ್ಲಬ್‌ ಗೆಸ್ಟ್ ಹೌಸ್ ಗೆ ಶಿಪ್ಟ್ ಮಾಡಿಸಲಾಗಿದೆ. ಇನ್ನು ಮೂರು ದಿನ ಕಟ್ಟಡ ತೆರವು ಕಾರ್ಯ ನಡೆಯಲಿದ್ದು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ವಾಲಿರುವ ಕಟ್ಟಡದ ಪಕ್ಕದ ಮನೆಯ ಕುಟುಂಬ ಬೀದಿಗೆ ಬಿದ್ದಿದೆ. ಕೇವಲ 5 ಕುಟುಂಬಗಳನ್ನು ಮಾತ್ರ ಸ್ಥಳಾಂತರ ಮಾಡಿ, ವಾಲಿರುವ ಕಟ್ಟಡದ ಪಕ್ಕದ ಮನೆಯವರನ್ನೇ ಸ್ಥಳಾಂತರ ಮಾಡಲು ಅಧಿಕಾರಿಗಳು ಮರೆತಿದ್ದಾರೆ. ಮೊನ್ನೆ ರಾತ್ರಿ ಕಟ್ಟಡ ವಾಲುತ್ತಿದ್ದಂತೆ ರಾತ್ರೋರಾತ್ರಿ ನೆರೆ ಮನೆಯವರು ಹೊರಗೆ ಬಂದಿದ್ದು, ಎರಡು ರಾತ್ರಿಯಿಂದ ಹೊರಗಡೆಯೇ ಕಳೆದಿದ್ದಾರೆ. ಬೇರೆ ಮನೆ ಮಾಡಲೂ ಹಣವಿಲ್ಲ, ಯಾವುದೇ ಸಾಮಾನುಗಳಿಲ್ಲ ಎಂದು ಗೋಗರೆಯುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಕುಟುಂಬಕ್ಕೆ ಯಾವುದೇ ಭರವಸೆ ನೀಡಿಲ್ಲ.