ಉದ್ದವ್ ಠಾಕ್ರೆ ಸರ್ಕಾರದ ವಿರುದ್ಧ ‘ನನ್ನ ಮನೆ-ನನ್ನಯುದ್ಧಭೂಮಿ’ ಬಿಜೆಪಿ ಪ್ರತಿಭಟನೆ 

ಕೊರೊನಾ ವೈರಸ್ ಬಿಕ್ಕಟ್ಟನ್ನು ನಿಭಾಯಿಸಲು ಉದ್ದವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಅಸಮರ್ಥವಾಗಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಮಹಾರಾಷ್ಟ್ರ ರಾಜ್ಯದಲ್ಲಿ 41,642 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರವು ದೇಶದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದೆ, ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಪಕ್ಷಗಳ ಮೈತ್ರಿ ಸರ್ಕಾರವು ಕೊರೊನಾ ಬಿಕ್ಕಟ್ಟನ್ನು ಎದುರಿಸಲು ಅಸಮರ್ಥವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಇಂದು, ಮಹಾರಾಷ್ಟ್ರದ ನಿವಾಸಿಗಳು ತಮ್ಮ ಮನೆಯಿಂದ ಹೊರಬಂದು ಬಾಲ್ಕನಿಯಲ್ಲಿ ನಿಂತು, ಕಪ್ಪು ಬಟ್ಟೆ ಧರಿಸಿ ಹಾಗೂ ಸರ್ಕಾರದ ವಿರುದ್ಧ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಲು ಬಿಜೆಪಿ ಇಂದು ಕರೆಕೊಟ್ಟಿತ್ತು.

ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ ಇಂದು ಸರ್ಕಾರದ ವಿರುದ್ಧ ‘ಮೆರಾ ಅಂಗನ್, ಮೆರಾ ರಣಂಗನ್ (ನನ್ನ ಮನೆ, ನನ್ನ ಯುದ್ಧಭೂಮಿ) – ಮಹಾರಾಷ್ಟ್ರವನ್ನು ಉಳಿಸಿ’ ಎಂಬ ಘೋಷಣೆಯೊಂದಿಗೆ ಜನರು ಕಪ್ಪು ಬಟ್ಟೆ ಅಥವಾ ದುಪ್ಪಟ್ಟಾ ಧರಿಸಿ, ಠಾಕ್ರೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಕರೆ ಕೊಟ್ಟಿದ್ದರು.

ಬಿಜೆಪಿಯ ಕರೆಗೆ ಬೆಂಬಲ ವ್ಯಕ್ತ ಪಡಿಸಿರುವ ಜನರು ತಮ್ಮ ನಿವಾಸದಲ್ಲಿಯೇ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಬಿಜೆಪಿಯ ಪ್ರತಿಭಟನೆಗೆ ಮಹಾರಾಷ್ಟ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ತಮಾಷೆಯಾಗಿದೆ ಎಂದು ಶಿವಸೇನಾ ವಕ್ತಾರ ಮನೀಶ್‌ ಕಾಯಾಂಡೆ ಹೇಳಿದ್ದಾರೆ.

ಬಿಜೆಪಿಯ ನಡೆಯನ್ನು ಟೀಕಿಸಿರುವ ಆಡಳಿತ ಪಕ್ಷ, ಉದ್ದವ್ ಠಾಕ್ರೆಯವರು ಹಿಂದಿನ ಸರ್ಕಾರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಈ ಬಾರಿ ಮೈತ್ರಿಯನ್ನು ಮುರಿದಿದ್ದಾರೆ. ಹಾಗಾಗಿ ಠಾಕ್ರೆ ನೇತೃತ್ವದ ಸರ್ಕಾರವನ್ನು ಕೆಡವಲು ಹವಣಿಸುತ್ತಿರುವ ಬಿಜೆಪಿ ಇಂತಹ ತಮಾಶೆ ಮಾಡಲು ಮುಂದಾಗಿದೆ ಎಂದು ಟೀಕಿದ್ದಾರೆ.

ಮಹಾರಾಷ್ಟ್ರದಲ್ಲಿ 41,641 ಕೊರೊನಾ ಪ್ರಕರಣಗಳಿದ್ದು, ಈ ಪೈಕಿ 11,726 ರೋಗಿಗಳು ಚೇತರಿಸಿಕೊಂಡಿದ್ದರೆ 1,454 ಮಂದಿ ಸಾವನ್ನಪ್ಪಿದ್ದಾರೆ. .

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights