ಮುಗಿಯದ ಖಾತೆ ಖ್ಯಾತೆ : ಚಿತ್ರದುರ್ಗದ ನಾಲ್ವರು ಶಾಸಕರೂ ಮಂತ್ರಿಗಿರಿಗಾಗಿ ಫೈಟ್..

ರಾಜ್ಯದಲ್ಲಿ ಉಪ ಚುನಾವಣೆ ಕದನ ಮುಗಿಯುತ್ತಿದ್ದಂತೆ ಸಚಿವ ಸ್ಥಾನದ ಪಟ್ಟಕ್ಕೇರಲು, ಆಕಾಂಕ್ಷಿಗಳ ದಂಡು ತೆರೆಮರೆಯ ಕಸರತ್ತು ನಡೆಸುತ್ತಿದೆ.ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಐವರು ಬಿಜೆಪಿ ಶಾಸಕರರಲ್ಲಿ ಶ್ರೀರಾಮುಲುರನ್ನು ಬಿಟ್ಟರೆ ಉಳಿದ ನಾಲ್ಕೂ ಜನ ಶಾಸಕರು ಸಚಿವ‌ ಸ್ಥಾನದ ರೇಸ್ನಲ್ಲಿ ಮಂತ್ರಿಗಿರಿಗಾಗಿ ಬಾರಿ ಲಾಬಿ ಆರಂಭಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ರಾಜಕಾರಾಣ ಅಂದ್ರೆ ಕಾಂಗ್ರೇಸ್ನ ಭದ್ರ ಕೋಟೆಯಾಗಿತ್ತು.ಕಾಂಗ್ರೇಸನ್ನ ಹೊರೆತುಪಡಿಸಿದ್ರೆ ಉಳಿದ ಬೇರೆ ಪಕ್ಷದಿಂದ ಯಾರೇ ಚುನಾವಣೆಗೆ ಬಂದ್ರೂ ಗೆದ್ದು ಪಟ್ಟಕ್ಕೇರೋದು ಸುಲಭವಾಗಿರಲಿಲ್ಲ.ಆದ್ರೆ ಕಾಲ ಹೀಗೆ ಇರೋದಿಲ್ಲ ಅನ್ನೋ ಹಾಗೆ ಕಳೆದ 2018 ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಚಳ್ಳಕೆರೆ ಹೊರತುಪಡಿಸಿ, ಚಿತ್ರದುರ್ಗ, ಹೊಳಲ್ಕೆರೆ,ಮೊಳಕಾಲ್ಮೂರು,ಹಿರಿಯೂರು, ಹೊಸದುರ್ಗ ಕ್ಷೇತ್ರಗಳಲ್ಲಿ ಕಾಂಗ್ರೇಸ್ನ ಭದ್ರಕೋಟೆಯನ್ನ ಛಿದ್ರಗೊಳಿಸಿ ಐವರು ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ.ಶಾಸಕರಾದ ಐವರು ಶಾಸಕರೂ ಕೂಡಾ ಮೊದಲ ಸಂಪುಟ ರಚನೆಯ ವೇಳೆಯೇ ಸಚಿವಸ್ಥಾನಕ್ಕಾಗಿ ಭಾರಿ ಪೋಪೋಟಿ ಮಾಡಿ ಕಸರತ್ತು ನಡೆಸಿದ್ರು.ಈ ಐವರಲ್ಲಿ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಸಚಿವ ಸ್ಥಾನಕ್ಕೆರುವಲ್ಲಿ ಯಶಸ್ವಿಯಾಗಿದ್ರೂ.

ಆದ್ರೆ ಈ ಭಾರಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಅಂತ ಚಿತ್ರದುರ್ಗ BJP ಹಿರಿಯ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಖುಷಿಯಾಗಿದ್ದರು.ಆದರೆ ಕೊನೇ ಕ್ಷಣದಲ್ಲಿ ಶಾಸಕ ತಿಪ್ಪಾರೆಡ್ಡಿಗೆ ಸಚಿವಸ್ಥಾನ ಕೈ ತಪ್ಪಿತ್ತು.ಬಳಿಕ ತಣ್ಣಗಾಗಿದ್ದ ಸಚಿವಸ್ಥಾನದ ಆಕಾಂಕ್ಷಿಗಳು , ಇದೀಗ ಉಪ ಚುನಾವಣೆ ಮುಗಿದು ಬಿಜೆಪಿ ಬಹುಮತ ಗಳಿಸಿದ ಬಳಿಕ ಮತ್ತೆ ಸಂಪುಟ ವಿಸ್ತರಣೆ ಮಾಡಲಾಗ್ತಿದೆ.ಕಳೆದ ಬಾರಿ ಸಚಿವಸ್ಥಾನದಿಂದ ವಂಚಿತರಾಗಿದ್ದ ತಿಪ್ಪಾರೆಡ್ಡಿ ಹೈಕಮಾಂಡ್ ಮಟ್ಟದಲ್ಲಿ ಮಂತ್ರಿಗಿರಿಗಾಗಿ ಬಾರಿ ಕಸರತ್ತು ಆರಂಭಿಸಿದ್ದಾರೆ. ಆರು ಬಾರಿ ಶಾಸಕರಾಗಿರುವ ಜಿಹೆಚ್ ತಿಪ್ಪಾರೆಡ್ಡಿ ಹಿರಿಯ ಶಾಸಕನಾಗಿದ್ದೇನೆ.

ಹೈಕಮಾಂಡ್ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದೆ, ಈ ಬಾರಿ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದೇನೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಇನ್ನೂ ಜಿಲ್ಲೆಯ ಹಿರಿಯೂರು ಕ್ಷೇತ್ರದ ಯಾದವ ಸಮುದಾಯದ ಏಕೈಕ ಮಹಿಳಾ ಶಾಸಕಿ ಕೂಡಾ ಮಂತ್ರಿ ಪದವಿ ಗಿಟ್ಟಿಸಿಕೊಳ್ಳಲು ಲಾಬಿ ಆರಂಭಿಸಿದ್ದಾರೆ. ಯಾವದನಂದ ಶ್ರೀಗಳ ಮೂಲಕ ಸಿಎಂ ಯಡಿಯೂರಪ್ಪ ಮೇಲೆ ಬಾರಿ ಒತ್ತಡ ಹಾಕಿಸ್ತಿದ್ದಾರೆ. ಅಲ್ಲದೆ ಈ ಕುರಿತು ಮಾತ್ನಾಡಿರೋ ಯಾವದನಂದ ಶ್ರೀಗಳು ಮುಖ್ಯಮಂತ್ರಿಗಳು ಯಾದವ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕೊಟ್ಟ ಮಾತನ್ನ ಉಳಿಸಿಕೊಳ್ಳಲಿ ಎನ್ನುತ್ತಿದ್ದಾರೆ. ಅಷ್ಠೇ ಅಲ್ಲದೆ ಬೋವಿ ಕೋಟಾದಲ್ಲಿ ಸಿಎಂ ಯಡಿಯೂರಪ್ಪ ಅವ್ರ ಆಪ್ತ ಶಾಸಕರಾದ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ , ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಕೂಡಾ ಮಂತ್ರಿ ಸ್ಥಾನದ ರೇಸ್ ನಲ್ಲಿದ್ದು, ಹೈಕಮಾಂಡ್ ಹಂತದಲ್ಲಿ ಲಾಭಿ ಆರಂಭಿಸಿದ್ದಾರೆ. ಒಟ್ಟಾರೆ ಕೋಟೆನಾಡು ಚಿತ್ರದುರ್ಗ ಆರು ಕ್ಷೇತ್ರಗಳ ಪೈಕಿ, ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದು, ಇದೀಗ ಸಚಿವಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಬಾರಿ ಕಸರತ್ತು ನಡೆಸ್ತಿದ್ದಾರೆ. ಆದ್ರೆ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಅನ್ನೋದನ್ನ ಕಾದು ನೋಡ್ಬೇಕೊದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights