ಮೀರತ್ ವಿದ್ಯಾರ್ಥಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ : ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡು..!

ಪಶ್ಚಿಮ ಉತ್ತರ ಪ್ರದೇಶದ ಮೀರತ್‌ನಲ್ಲಿ 10 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪಿಗಳಲ್ಲಿ ಒಬ್ಬನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಪೊಲೀಸರು ಗುಂಡು ಹಾರಿಸಿದ್ದಾರೆ.

ಗುರುವಾರ ಟೂಷನ್ ನಿಂದ ಮನೆಗೆ ಹಿಂದಿರುಗುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆ ಬಾಲಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡು ಬರೆದಿಟ್ಟ ಡೆತ್ ನೋಟ್ ಆಧಾರದ ಮೇಲೆ ಆರೋಪಿಗಳಾದ ಲಖಾನ್ ಮತ್ತು ಆತನ ಸಹವರ್ತಿ ವಿಕಾಸ್ ಅವರನ್ನು ಬಂಧಿಸಲಾಗಿತ್ತು. ಇವರಿಬ್ಬರನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿರುವಾಗ ಕಪ್ಸಾದ್ ಗ್ರಾಮದ ಬಳಿ ಪೊಲೀಸರೊಬ್ಬರಿಂದ ಪಿಸ್ತೂಲ್ ಕಸಿದುಕೊಂಡ ಆರೋಪಿ ಲಖನ್ ಗುಂಡು ಹಾರಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.

ಮೀರತ್ ಪೊಲೀಸರ ಕಣ್ಗಾವಲು ವಿಭಾಗದ ತಂಡ ಮತ್ತು ಸರ್ದಾನ ಪೊಲೀಸ್ ಠಾಣೆಯ ಅಧಿಕಾರಿಗಳು ಎನ್‌ಕೌಂಟರ್ ನಡೆಸಿ ಕಾಲಿಗೆ ಗುಂಡು ಹಾರಿಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆರೋಪಿ ಲಖನ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಟುಂಬ ಸದಸ್ಯರೊಬ್ಬರು ಸಲ್ಲಿಸಿದ ಎಫ್‌ಐಆರ್ (ಮೊದಲ ಮಾಹಿತಿ ವರದಿ) ನಲ್ಲಿ ಬಾಲಕಿ ಮಧ್ಯಾಹ್ನ 3.30 ರ ಸುಮಾರಿಗೆ ಮನೆಯಿಂದ ಹೊರಟು ಸಂಜೆ 5.15 ರ ವೇಳೆಗೆ ಹಿಂದಿರುಗಿದಳು. ಮನೆಗೆ  ಮರಳಿದ ಬಳಿಕ ಅತ್ಯಾಚಾರ ಮತ್ತು ಹಲ್ಲೆಯ ಬಗ್ಗೆ ಆಕೆಯ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಆತ್ಮಹತ್ಯೆ ಮಾಡಿಕೋಮಡಿದ್ದಾಳೆ. ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಚಿಕಿತ್ಸೆಯ ಸಮಯದಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಎಫ್‌ಐಆರ್ ತಿಳಿಸಿದೆ. ಬಾಲಕಿ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ನಾಲ್ವರ ಹೆಸರನ್ನು ದಾಖಲಿಸಿದ್ದಾಳೆ.

ಮೀರತ್ ಪೊಲೀಸರು ನಾಲ್ವರ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ.

“ನಮಗೆ ದೂರು ಬಂದ ಕೂಡಲೇ ನಾವು ಪ್ರಕರಣ ದಾಖಲಿಸಿಕೊಂಡು ಅದನ್ನು ಪರಿಶೀಲಿಸಲು ಸ್ಥಳಕ್ಕೆ ಹೋದೆವು. ಬಾಲಕಿಯ ಮನೆಯಲ್ಲಿ ಲಖನ್ ಮತ್ತು ಇತರರ ಮೇಲೆ ಆರೋಪ ಹೊರಿಸುವ ಆತ್ಮಹತ್ಯೆ ಪತ್ರವನ್ನು ನಾವು ಕಂಡುಕೊಂಡಿದ್ದೇವೆ. ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿ ಲಖಾನ್. ಇನ್ನಿಬ್ಬರಿಗಾಗಿ ಪತ್ತೆ ಕಾರ್ಯ ನಡೆದಿದೆ ”ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಕೇಶವ್ ಕುಮಾರ್ ಹೇಳಿದ್ದಾರೆ.

 

Spread the love

Leave a Reply

Your email address will not be published. Required fields are marked *