ರೈಲಿನಲ್ಲಿ ಯುವತಿಯ ಬರ್ಬರ ಹತ್ಯೆ; ಅಣ್ಣನನ್ನು ನೋಡ ಹೊರಟವಳ ಉಸಿರೇ ಅಂತ್ಯ!
ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ತಂದೆಗೆ ಜಾಮೀನು ಕೊಡಿಸಿ, ಜೈಲಿನಿಂದ ಕರೆತರಲು ಪರದಾಡುತ್ತಿದ್ದ ಯುವತಿಯೊಬ್ಬಳನ್ನು ರೈಲಿನಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ತನ್ನ ತಂದೆಯ ಜಾಮೀಜು ವಿಚಾರವಾಗಿ ತನ್ನ ಅಣ್ಣನನ್ನು ನೋಡಲು ಮಧ್ಯಪ್ರದೇಶದ ಇಂಧೋರ್‌ನಿಂದ ಬಿಹಾರಕ್ಕೆ ಪ್ರಯಾಣಿಸುದ್ದ 21 ವರ್ಷದ ಯುವತಿಯನ್ನು ನರ್ಮದಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳವಾರ ರಾತ್ರಿ ಹತ್ಯೆ ಮಾಡಲಾಗಿದೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಯುವತಿ ರೈಲು ಹತ್ತಿದಾಗಿನಿಂದ ಅಣ್ಣನ ಜೊತೆ ಫೋನ್ ಸಂಪರ್ಕದಲ್ಲಿದ್ದಳು. ರೈಲಿನಲ್ಲಿ ಯಾರೋ ತನಗೆ ಹಿಂಸೆ ಕೊಡುತ್ತಿರುವುದಾಗಿಯೂ ಆಕೆ ಅಣ್ಣನಿಗೆ ತಿಳಿಸಿದ್ದಳು. ಈ ಬಗ್ಗೆ ಆಕೆಯ ಅಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅದನ್ನು ಪರಿಶೀಲನೆ ಮಾಡಲು ಬಂದ ಪೊಲೀಸರಿಗೆ ಯುವತಿಯ ಹೆಣ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಹೋರ್ ರೈಲ್ವೆ ನಿಲ್ದಾಣಕ್ಕೆ ತಲುಪಲು ಕೆಲ ನಿಮಿಷಗಳ ಮೊದಲು ಕೊಲೆ ನಡೆದಿರುವುದಾಗಿ ಹೇಳಲಾಗಿದೆ. ಬೋಗಿಯಲ್ಲಿ ಸೀಟಿನ ವಿಚಾರಕ್ಕೆ ಯಾರೋ ಜಗಳ ಮಾಡಿಕೊಳ್ಳುತ್ತಿದ್ದರು ಎಂದು ಅದೇ ಬೋಗಿಯಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ. ಚೂಪಾದ ವಸ್ತುವಿನಿಂದ ಯುವತಿಗೆ ಚುಚ್ಚಿರುವ ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಓರ್ವನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾವುದೋ ಪ್ರಕರಣದಲ್ಲಿ ಯುವತಿಯ ತಂದೆ ಜೈಲು ಸೇರಿದ್ದರು. ಆತನಿಗೆ ಬೇಲ್ ಕೊಡಿಸುವುದಕ್ಕಾಗಿ ಆಕೆ ಪ್ರಯತ್ನಿಸುತ್ತಿದ್ದಳು. ಜಿಲ್ಲಾ ನ್ಯಾಯಾಲದಯಲ್ಲಿ ಜಾಮೀನು ಅರ್ಜಿಯನ್ನೂ ಸಲ್ಲಿಸಲಾಗಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಲಾಕ್‌ಡೌನ್ ಎಫೆಕ್ಟ್: ಮಗನ ಚಿಕಿತ್ಸೆಗಾಗಿ 400 ಕಿ.ಮೀ ಸೈಕಲ್ ತುಳಿಯುತ್ತಿರುವ ಕಾರ್ಮಿಕ!

