ಫ್ಯಾಕ್ಟ್‌ಚೆಕ್: ಇದು ಕಠ್ಮಂಡುವಿನ ಪಶುಪತಿನಾಥ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ನಡೆದ ಅಭಿಷೇಕವಲ್ಲ !

ಸಾಧುಗಳು ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುವ ವೀಡಿಯೊ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು ಈ ದೃಶ್ಯಗಳು ಕಠ್ಮಂಡುವಿನ ಪಶುಪತಿನಾಥ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ನೇಪಾಳದ ಕಠ್ಮಂಡುವಿನ ಪಶುಪತಿನಾಥ ದೇವಾಲಯದ ಶಿವಲಿಂಗಕ್ಕೆ ವೈಭವದ ಅಭೀಷೇಕವನ್ನು ಮಾಡಲಾಗಿದೆಯೇ ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ದೃಶ್ಯಗಳು ನಾಲ್ಕು ವರ್ಷಗಳಿಗಿಂತಲೂ ಹಳೆಯದಾಗಿದ್ದು ಮತ್ತು ಕಠ್ಮಂಡು ಪಶುಪತಿ ನಾಥ್ ದೇವಸ್ಥಾನಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿದು ಬಂದಿದೆ.  2017 ರಲ್ಲಿ ಗುಂಟೂರಿನಲ್ಲಿ ಮಹಾ ರುದ್ರಾಭಿಷೇಕವನ್ನು ನೆರೆವೇರಿಸುವ ಸಂದರ್ಭದಲ್ಲಿ ಸೆರೆಹಿಡಿದಿರುವ ಫೋಟೋಗಳು ಎಂದು ತೆಲುಗು ಸ್ಥಳಿಯ ಸುದ್ದಿ ವಾಹಿನಿಯು ಅಪ್‌ಲೋಡ್ ಮಾಡಿರುವ ವೀಡಿಯೊ ಲಭ್ಯವಾಗಿದೆ.

ಇದಲ್ಲದೆ, ತೆಲುಗು ರಾಜ್ಯಗಳ ವಿವಿಧ ಭಾಗಗಳಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಇದೇ ರೀತಿಯ ಆಚರಣೆಗಳು ನಡೆಯುತ್ತಿರುವ ವರದಿಗಳಿವೆ. ಈ ಘಟನೆಗಳ ದೃಶ್ಯಗಳು ಸಹ ವೈರಲ್ ವಿಡಿಯೊವನ್ನು ಹೋಲುತ್ತವೆ. ಇದೇ ರೀತಿ ಸಾಧುಗಳು ಮಹಾ ರುದ್ರಾಭಿಷೇಕವನ್ನು ಮಾಡುತ್ತಾರೆ. ಈ ಎಲ್ಲಾ ವರದಿಗಳಿಂದ ವೈರಲ್ ದೃಶ್ಯಗಳು ಕಠ್ಮಂಡುವಿನಿಂದ ಅಲ್ಲ ಎಂಬುದು ಸ್ಪಷ್ಟವಾಗಿದೆ. 2017ರಲ್ಲಿ ಆಂದ್ರಪ್ರದೇಶದ ಗುಂಟೂರಿನಲ್ಲಿ ಮಹಾ ರುದ್ರಾಭಿಷೇಕ ನಡೆದ ಸಂದರ್ಭದಲ್ಲಿ ದೃಶ್ಯಗಳಾಗಿವೆ. ವೀಡಿಯೊದ ಶೀರ್ಷಿಕೆಯಲ್ಲಿ ‘ಮಹಾ ರುದ್ರಾಭಿಷೇಕಂ  ಅಮ್ಮಾ ಆಶ್ರಮಮ್’ ಎಂದು ಬರೆದಿದೆ.

ತೆಲುಗು ರಾಜ್ಯಗಳ ವಿವಿಧ ಭಾಗಗಳಲ್ಲಿ ಇದೇ ರೀತಿಯ ಆಚರಣೆಗಳು ನಡೆಯುತ್ತಿವೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ. ಇದಲ್ಲದೆ, ಈ ದೃಶ್ಯವು ಕಠ್ಮಂಡುವಿನ ಪಶುಪತಿ ನಾಥ ದೇವಾಲಯಕ್ಕೆ ಸಂಬಂಧಿಸಿದೆ ಎಂದು ನಿರೂಪಿಸುವಂತಹ ಯಾವುದೇ ವರದಿಗಳು  ಕಂಡುಬಂದಿಲ್ಲ. ಪಶುಪತಿ ನಾಥ ದೇವಾಲಯದ ದೃಶ್ಯಗಳನ್ನು ಇಲ್ಲಿ ನೋಡಬಹುದು.

ಕಠ್ಮಂಡುವಿನ ಪಶುಪತಿನಾಥ ದೇವಾಲಯದಲ್ಲಿ ಕಂಡುಬರುವ ಶಿವಲಿಂಗಗಳು
ಕಠ್ಮಂಡುವಿನ ಪಶುಪತಿನಾಥ ದೇವಾಲಯದಲ್ಲಿ ಕಂಡುಬರುವ ಶಿವಲಿಂಗಗಳು

ಒಟ್ಟಾರೆಯಾಗಿ ಹೇಳುವುದಾದರೆ, ಆಂಧ್ರಪ್ರದೇಶದ ಶಿವಲಿಂಗಕ್ಕೆ ಮಾಡಲಾದ ಮಹಾ ರುದ್ರಾಭಿಷೇಕದ 2017 ಹಳೆಯ ದೃಶ್ಯಗಳನ್ನು ಕಠ್ಮಂಡುವಿನ ಪಶುಪತಿ ನಾಥ ದೇವಾಲಯದಲ್ಲಿ ಪೂಜೆ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಜ್ಞಾನವಾಪಿ ಮಸೀದಿ ವಿಡಿಯೊ ಸಮೀಕ್ಷೆ ವಿರೋದಿಸಿದವರ ಮೇಲೆ ಲಾಠಿ ಚಾರ್ಜ್! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights