ಫ್ಯಾಕ್ಟ್‌ಚೆಕ್: ರಾಜಸ್ಥಾನದ ಝಲಾವರ್ ವಾಟರ್ ಪಾರ್ಕ್‌ನಲ್ಲಿ ತಲೆಗೆ ಪೆಟ್ಟಾದ ಯುವಕ ಸತ್ತಿಲ್ಲ!

ರಾಜಸ್ಥಾನದ ಝಲಾವರ್ ಜಿಲ್ಲೆಯ ವಾಟರ್ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ಹೇಳುವ ಪೋಸ್ಟ್ ಮೂಲಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಬ್ಲೂ ವರ್ಡ್ ಥೀಮ್ ಪಾರ್ಕ್‌ನಲ್ಲಿ ಮೇಲಿನಿಂದ ಜಾರಿಬರುವ ಮಹಿಳೆ ಯುವಕನಿಗೆ ಡಿಕ್ಕಿ ಹೊಡೆದಿದ್ದಾಳೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ಕಲಿಯಬಹುದಾದ ಪಾಠವೆಂದರೆ ವಾಟರ್ ಪಾರ್ಕ್‌ನಲ್ಲಿ ಮೋಜು ಮಾಡುವಾಗ ಎಲ್ಲರೂ ಜಾಗರೂಕರಾಗಿರಬೇಕು. ಅಜಾಗರೂಕರಾದರೆ ಇದೇ ಸ್ಥಿತಿ ನಿಮಗೂ ಬರಬಹುದು ಎಂದು ಫೇಸ್‌ಬುಕ್ ಪೋಸ್ಟ್ ಜೊತೆಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಿಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ದೈನಿಕ್ ಭಾಸ್ಕರ್ ಅಪ್‌ಲೋಡ್ ಮಾಡಿದ ದೃಶ್ಯಗಳೊಂದಿಗೆ ವೀಡಿಯೊ ವರದಿ ಕಂಡುಬಂದಿದೆ. ಮೇಲಿನಿಂದ ಇಳಿಜಾರಿನಲ್ಲಿ ವೇಗವಾಗಿ ಬಂದ ರಭಸಕ್ಕೆ ಯುವಕನ ತಲೆಗೆ ತೀವ್ರತರನಾಗಿ ಪೆಟ್ಟಾಗಿ ಪ್ರಜ್ಞೆ ತಪ್ಪಿದ್ದಾನೆ, ತಕ್ಷಣವೇ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಬಳಿಕ ಯುವಕ ಪ್ರಾಣಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ, ಮತ್ತು ಘಟನೆಗೆ ಸಂಬಂಧಿಸಿದಂತೆ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎಂದು ವಿಡಿಯೋ ವರದಿಯಲ್ಲಿ ತಿಳಿಸಲಾಗಿದೆ.

ವರದಿಗಳ ಪ್ರಕಾರ, ಈ ಘಟನೆ ಇತ್ತೀಚೆಗೆ ರಾಜಸ್ಥಾನದ ಝಲಾವರ್ ಜಿಲ್ಲೆಯ ಮುಕುಂದ್ರ ವಾಟರ್ ಪಾರ್ಕ್‌ನಲ್ಲಿ ನಡೆದಿದೆ. ಈ ವೇಳೆ ನೀರಿನ ಕೊಳದಲ್ಲಿ ನಿಂತಿದ್ದ ರಾಮಗಂಜಮಂಡಿಯ ಯುವಕ ತನ್ನದೇ ಕುಟುಂಬದ ಸದಸ್ಯೆ ಮೇಲಿನಿಂದ  ಜಾರುತ್ತಿದ್ದ ಮಹಿಳೆಗೆ ಪರಸ್ಪರ ಡಿಕ್ಕಿ ಹೊಡೆಡುಕೊಂಡಿದ್ದಾರೆ. ತಲೆಗೆ ಗಂಭೀರ ಗಾಯವಾದಾಗ ತಕ್ಷಣ ಯುವಕ ಮೂರ್ಛೆ ಹೋಗುತ್ತಾನೆ ಮತ್ತು ಹತ್ತಿರದಲ್ಲಿದ್ದ ಜನರು ಅವನನ್ನು ಕೊಳದಿಂದ ಹೊರ ತಂದು, ಚಿಕಿತ್ಸೆಗಾಗಿ ಎಸ್‌ಆರ್‌ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಗೂಗಲ್ ಮ್ಯಾಪ್‌ನಲ್ಲಿರುವ ‘ಮುಕುಂದ್ರ ಹೋಟೆಲ್ಸ್ & ರೆಸಾರ್ಟ್ಸ್’ ಫೋಟೋಗಳು ವೀಡಿಯೊದಲ್ಲಿರುವಂತೆಯೇ ಇದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಜಸ್ಥಾನದ ಝಲಾವರ್ ಜಿಲ್ಲೆಯ ಮುಕುಂದ್ರ ವಾಟರ್ ಪಾರ್ಕ್‌ನಲ್ಲಿ ನಡೆದಿರುವ ಘಟನೆಯ ವೀಡಿಯೊದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಪ್ರಜ್ಞಾಹೀನನಾಗುತ್ತಾನೆ ಕೂಡಲೇ ಎಸ್‌ಆರ್‌ಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್  ಮಾಡಲಾಗಿದೆ. ಹಾಗಾಗಿ ಈ ಘಟನೆಯಲ್ಲಿ ಯುವಕ ಸಾವನಪ್ಪಿದ್ದಾನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪೋಸ್ಟ್‌ನ ಪ್ರತಿಪಾದನೆ ಸುಳ್ಳು. ಇಂತಹ ಸ್ಥಳಗಳಲ್ಲಿ ಆಟವಾಡುವಾಗ ಎಷ್ಟೆ ಎಚ್ಚರವಹಿಸಿದರೂ ಸಾಲದು, ಒಂದು ಸಣ್ಣ ಅಜಾಗರೂಕತೆಯೂ ದೊಡ್ಡ ಅನಾಹುತಕ್ಕೆ ಕಾರಣವಾಗಿ ಸಾವು ಸಂಭವಿಸಬಹುದು, ಇಂತಹ ಜಾಗಕ್ಕೆ ನೀವು ಹೋದಾಗ ಎಚ್ಚರದಿಂದಿರಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಇಸ್ಲಾಂ ಧರ್ಮವನ್ನು ರಷ್ಯಾದ 2ನೇ ರಾಜ್ಯ ಧರ್ಮ ಎಂದು ಅಧ್ಯಕ್ಷ ಪುಟಿನ್ ಘೋಷಿಸಿದ್ದು ನಿಜವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights