ಫ್ಯಾಕ್ಟ್‌ಚೆಕ್: ಆನೆಗೆ ಮಾಂಸ ನೀಡಲು ಹೋದಾಗ ನಡೆದ ಘಟನೆ! ವಾಸ್ತವೇನು?

ಕೇರಳದಲ್ಲಿ ಆನೆಗೆ ಮಾಂಸ ತಿನ್ನಿಸಲು ಯತ್ನಿಸಿದ ಮುಸ್ಲಿಂ ವ್ಯಕ್ತಿ ಹಾಗೂ ಬಾಲಕನ ಮೇಲೆ ಆನೆಯೊಂದು ದಾಳಿ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  “ಏನು ಹೇಳಬೇಕು ಇವರ ಮೂರ್ಖತನಕ್ಕೆ, ಅವರು ಪ್ರಾಣಿಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು  ಯತ್ನಿಸುತ್ತಿದ್ದಾರೆ” ಎಂದು ರವೀಂದ್ರ ತಿವಾರಿ ಎನ್ನುವ ವ್ಯಕ್ತಿಯು ಬರೆದಿದ್ದಾರೆ.

ಅನೇಕರು ಇದೇ ರೀತಿಯ ಪ್ರತಿಪಾದನೆಯೊಂದಿಗೆ ವೀಡಿಯೊವನ್ನು ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ( Yogi BhaktKirti MishraJago BharatJago, Ritesh Kumar Mishra) ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾನೆಯನ್ನು ಪರಿಶೀಲಿಸೋಣ.

https://twitter.com/DextrousNinja/status/1512855499510845443?ref_src=twsrc%5Etfw%7Ctwcamp%5Etweetembed%7Ctwterm%5E1512855499510845443%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fno-this-kerala-man-is-not-feeding-meat-to-an-elephant%2F

ಫ್ಯಾಕ್ಟ್‌ಚೆಕ್:

ಸೋಶಿಯಲ್ ಮೀಡಿಯಾದಲ್ಲಿ ಪ್ರತಿಪಾದಿಸಿದ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು ವೈರಲ್ ವಿಡಿಯೊದ ಕುರಿತು ಕೆಲವು ಸುದ್ದಿವಾಹಿನಿಗಳು ಘಟನೆಯ ಕುರಿತು ವರದಿ ಮಾಡಿರುವುದು ಕಂಡುಬಂದಿದೆ. ಆನೆ ದಾಳಿಯಿಂದ ನಾಲ್ಕು ವರ್ಷದ ಮಗವನ್ನು ಧೈರ್ಯದಿಂದ  ರಕ್ಷಿಸಿದ ತಂದೆ ಎಂದು ಈಟಿವಿ ಭಾರತ್ ವರದಿ ಮಾಡಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಮಾತೃಭೂಮಿ ವರದಿ ಮಾಡಿದೆ.

ಮಲಪ್ಪುರಂ ಜಿಲ್ಲೆಯ ಕೀಜುಪರ್ಮಪ್ಪ ಪೋಸ್ಟ್‌ನ ವ್ಯಾಪ್ತಿಗೆ ಬರುವ ಪಜಂಪರಂಪಾ ಗ್ರಾಮದಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಆಲ್ಟ್ ನ್ಯೂಸ್ ಕಂಡುಹಿಡಿದಿದೆ. ಕೀಜುಪರ್ಮಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಕ್ಕಿಯಾ ನಿಸಾರ್ ವೈಪಿ ಅವರು ಈ ವಿಷಯವನ್ನು ಆಲ್ಟ್‌ನ್ಯೂಸ್‌ ಗೆ ಖಚಿತಪಡಿಸಿದ್ದು, “ಮಗುವಿನ ಮೇಲೆ ದಾಳಿ ಮಾಡುವ ಆನೆಯು ಅಬ್ದುಲ್ ನಾಸರ್ ಎಂಬುವವರಿಗೆ  ಸೇರಿದ್ದು,  ಆನೆಯ ಹೆಸರು ಮಿನಿ” ಎಂದಿದ್ದಾರೆ.

ಆಲ್ಟ್ ನ್ಯೂಸ್ ಜೊತೆಗೆ ಅಬ್ದುಲ್ ನಾಸರ್ ಅವರು ಮಾತನಾಡಿದ್ದು. ಸ್ಕರ್ವಿ ಎಂಬ ಉಬ್ಬುಗಳನ್ನು ಗುಣಪಡಿಸಲು ಕೇರಳದಲ್ಲಿ ಆನೆಗಳಿಗೆ ತೆಂಗಿನಕಾಯಿ ತಿನ್ನಿಸುವ ಪದ್ಧತಿ ಇದೆ. 4 ವರ್ಷದ ಮಗು ತನ್ನ ತಂದೆಯೊಂದಿಗೆ ಮಿನಿಗೆ (ಆನೆಗೆ) ತೆಂಗಿನಕಾಯಿ ತಿನ್ನಿಸಲು ಹೋದಾಗ ಈ ಘಟನೆ ನಡೆದಿದೆ ಎಂದಿದ್ದಾರೆ “. ನಬೀಲ್ ಕುನ್ಹಪ್ಪು ನಮ್ಮ ಪಕ್ಕದ ಮನೆಯವರು ಅವರ ಕುಟುಂಬ ಸೌದಿ ಅರೇಬಿಯಾದಲ್ಲಿದೆ, ಕಳೆದ 6 ತಿಂಗಳ ಹಿಂದೆ ರಜೆಯ ಸಮಯದಲ್ಲಿ ಮನೆಗೆ ಬಂದಿದ್ದರು ಅವರ ಮಗುವಿನೊಂದಿಗೆ ಆನೆಗೆ ತೆಂಗಿನಕಾಯಿ ನೀಡುವ ವೇಳೆ ಈ ಘಟನೆ ನಡೆದಿದೆ ಎಂದರು.

ಕುನ್ಹಪ್ಪು ಕುಟುಂಬ ಸದಸ್ಯರೊಂದಿಗೆ ಆನೆಗೆ ಆಹಾರ ನೀಡಲು ಬಯಸಿದ್ದರು, ಕುನ್ಹಪ್ಪು ಆನೆಗೆ ತೆಂಗಿನಕಾಯಿ ನೀಡಿದರು. ತೆಂಗಿನಕಾಯಿ ಗಟ್ಟಿಯಾಗಿದ್ದು ಆನೆಗೆ ಇಷ್ಟವಾಗಲಿಲ್ಲ ಎಂದು ನಾಸರ್ ಹೇಳಿದರು. ಕುನ್ಹಪ್ಪು ಮಿನಿಗೆ ಆಹಾರ ನೀಡುತ್ತಿರುವ ವಿಡಿಯೋವನ್ನು ಕೆಳಗೆ ನೋಡಬಹುದು  ನಂತರ ಕುನ್ಹಪ್ಪು ಅವರ ಮಗ ಆನೆಗೆ ತಾನು ಆಹಾರ ನೀಡಬೇಕೆಂದು ಹಟಹಿಡಿದ,  ಆನೆಗೆ ತೆಂಗಿನಕಾಯಿ ನೀಡಲು ಬಾಲಕ ಕೈ ಎತ್ತಿದಾಗ ಆನೆ ಅತನನ್ನು ತನ್ನ ಸೊಂಡಿಲಿನಿಂದ ತಳ್ಳಿತ್ತು. ಕುನ್ಹಪ್ಪು ಹುಡುಗನನ್ನು ಎಳೆದುಕೊಂಡು ಹೋದರು,” ಎಂದು ನಾಸರ್ ಸೇರಿಸಿದರು.

ಕೆಲವು ತಿಂಗಳ ಹಿಂದೆ ಈ ಘಟನೆ ನಡೆದಿದ್ದರೂ ಇತ್ತೀಚೆಗೆ ಸೌದಿ ಅರೇಬಿಯಾಕ್ಕೆ ವಾಪಸಾದ ಕುನ್ಹಪ್ಪು ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್‌ ಮಾಡಿದ ನಂತರ ವೈರಲ್ ಆಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಕುನ್ಹಪ್ಪು ಅವರು ತಮ್ಮ 4ವರ್ಷದ ಮಗನೊಂದಿಗೆ ಆನೆಗೆ ತೆಂಗಿನ ಕಾಯಿ ನೀಡಲು ಹೋದಾಗ ನಡೆದ ಘಟನೆಯನ್ನ, ತಿರುಚಿ ಸುಳ್ಳು ಹೇಳಿಕೆಯೊಂದಿಗೆ ಮಾಂಸ ನೀಡಲು ಹೋದಾಗ ನಡೆದ ಘಟನೆ ಎಂದು ಕೋಮು ವೈಷಮ್ಯದ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್‌


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನಟಿಸಿದ ವಿಡಿಯೊವನ್ನು ‘ಲವ್ ಜಿಹಾದ್’ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights