ಮಹಾ ಕುಂಭಮೇಳ ಎಫೆಕ್ಟ್: ಉತ್ತರಾಖಂಡದಲ್ಲಿ ಕೊರೊನಾ ಪ್ರಕರಣಗಳು 89 ಪಟ್ಟು ಹೆಚ್ಚಳ!

ಕುಂಭಮೇಳ ನಡೆಯುತ್ತಿರುವ ಉತ್ತರಾಖಂಡ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಕಳೆದ ಫೆಬ್ರವರಿ 14 ರಿಂದ 30ರವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಏಪ್ರಿಲ್‌ 1ರಿಂದ 15ರವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ 89 ಪಟ್ಟು ಹೆಚ್ಚಾಗಿದೆ.

ಫೆಬ್ರವರಿ 14 ರಿಂದ 28 ರವರೆಗೆ ರಾಜ್ಯದಲ್ಲಿ 172 ಪ್ರಕರಣಗಳು ದಾಖಲಾಗಿದ್ದವು. ಆದರೆ, ಏಪ್ರಿಲ್ 1-14ರ ನಡುವೆ 15,333 ಪ್ರಕರಣಗಳು ದಾಖಲಾಗಿವೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ, ಈ ಸಂಖ್ಯೆ ಇನ್ನೂ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ.

ಏಪ್ರಿಲ್ 12 ಮತ್ತು 14 ರ ಎರಡು ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಒಟ್ಟುಗೂಡಿದ್ದಾರೆ. ಕಳೆದ 16 ದಿನಗಳಲ್ಲಿ ರಾಜ್ಯವು ಒಟ್ಟು 3,22,404 ಪರೀಕ್ಷೆಗಳನ್ನಷ್ಟೇ ನಡೆಸಿದೆ. ಈ ಪೈಕಿ ಹರಿದ್ವಾರದಲ್ಲಿ 50,000 ಪರೀಕ್ಷೆಗಳು ನಡೆದಿವೆ. ಇದು ಕಠೋರ ಪರಿಸ್ಥಿತಿಯನ್ನು ಸೂಚಿಸುತ್ತದೆ ಎಂದು ಸೋಷಿಯಲ್ ಡೆವಲಪ್‌ಮೆಂಟ್ ಫಾರ್ ಕಮ್ಯುನಿಟೀಸ್ ಫೌಂಡೇಶನ್‌ನ ಅನೂಪ್ ನೌತಿಯಾಲ್ ತಿಳಿಸಿದ್ದಾರೆ.,

ಫೆಬ್ರವರಿಯಲ್ಲಿ ಪ್ರತಿದಿನ 30 ರಿಂದ60 ಪ್ರಕರಣಗಳು ದಾಖಲಾಗುತ್ತಿದ್ದವು. ಆ ಸಂಖ್ಯೆಗೆ ಹೋಲಿಸಿದರೆ ಏಪ್ರಿಲ್ 1 ರಿಂದ ಹರಿದ್ವಾರದಲ್ಲಿ ಮಹಾಕುಂಭ ಪ್ರಾರಂಭವಾದ ನಂತರ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ದಿನಕ್ಕೆ 2000-2500ಕ್ಕೆ ತಲುಪಿದೆ.

ಉತ್ತರಾಖಂಡದಲ್ಲಿ ಶುಕ್ರವಾರ ಒಟ್ಟು 2,402 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 13,546 ಕ್ಕೆ ತಲುಪಿದೆ.

ಏತನ್ಮಧ್ಯೆ, ರಾಜ್ಯವು ಒಟ್ಟು 12,85,993 ಜನರಿಗೆ ಲಸಿಕೆ ನೀಡಿದೆ, ಅದರಲ್ಲಿ 2,25,005 ಜನರು ಲಸಿಕೆಯ ಎರಡನೇ ಡೋಸ್‌ ಪಡೆದಿದ್ದಾರೆ.

ಇದನ್ನೂ ಓದಿ: ಮೋದಿ ತವರು ಗುಜರಾತ್‌ನಲ್ಲಿ ಕೊರೊನಾ ಆಕ್ರಮಣ: ಒಂದೇ ದಿನ 8,920 ಪ್ರಕರಣ – 94 ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights