ದೆಹಲಿ ಗಡಿಯಲ್ಲಿ ಪೊಲೀಸರಿಂದ ಪತ್ರಕರ್ತರ ಮೇಲೆ ಹಲ್ಲೆ; ಇಬ್ಬರ ಬಂಧನ!
ದೆಹಲಿ ವ್ಯಾಪ್ತಿಗೆ ಒಳಪಡುವ ಸಿಂಘು ಗಡಿಯ ಒಂದು ಭಾಗದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಸ್ಥಳೀಯರ ಹೆಸರಿನಲ್ಲಿ ಹಿಂಸಾಚಾರ ನಡೆಸಿದ್ದು, ಬಿಜೆಪಿ ಕಾರ್ಯಕರ್ತರು ಎಂದು ಹಲವು ಫ್ಯಾಕ್ಟ್‌ಚೆಕ್‌ಗಳು ಸಾಬೀತು ಪಡಿಸಿವೆ.
ಅದಾನ ನಂತರ, ಶನಿವಾರವೂ ಅದೇ ಸ್ಥಳದಲ್ಲಿ ದಾಳಿ ನಡೆದಿದೆ. ಅಲ್ಲದೆ, ಈ ವಿಚಾರವಾಗಿ ಸ್ಥಳೀಯ ನಾಗರೀಕರೊಂದಿಗೆ ದೆಹಲಿ ಪೊಲೀಸರು ಮಾತುಕತೆ ನಡೆಸುತ್ತಿದ್ದರು. ಅದನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಪತ್ರಕರ್ತರ ಮೇಲೆ ಥಳಿಸಿದ್ದು, ಇಬ್ಬರು ಪತ್ರಕರ್ತರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಕಾರ್ಯಕರ್ತರು ಮತ್ತು ರೈತರ ಮೇಲೆ ಬಿಜೆಪಿ ಹಾಗೂ ಆರೆಸ್ಸೆಸ್ಸ್ ಕಾರ್ಯಕರ್ತರು ಕಲ್ಲುತೂರಾಟ ಹಾಗೂ ಘರ್ಷನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಸ್ಥಳದಲ್ಲಿ ಹೆಚ್ಚಿನ ಸಿಆರ್ಪಿಎಫ್ ಅನ್ನು ನಿಯೋಜಿಸಲಾಗಿದೆ. ಅಲ್ಲದೆ ಸ್ಥಳಕ್ಕೆ ಹೆಚ್ಚಿನ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ರೈತರು ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಮತ್ತು ಅಲ್ಲಿಂದ ನಿರ್ಗಮಿಸಲು ಬೇರೆಯೆ ದಾರಿಯನ್ನು ಹಿಡಿಯುವಂತಾಗಿದೆ.
ನಿನ್ನೆಯ ಅಹಿತಕರ ಘಟನೆಗಳು ಇಂದು ಕೂಡಾ ಪುನರಾವರ್ತನೆಯಾಗುತ್ತಿದ್ದು, ಆದರೆ ರೈತರನ್ನು ಅದು ಎದೆಗುಂದಿಸಿಲ್ಲ. ಘಟನೆಯು ಪ್ರತಿಭಟನಾ ಸ್ಥಳದ ಮೊದಲ ಹಂತವಾದ ದೆಹಲಿಯ ಭಾಗದಲ್ಲಿ ಮಾತ್ರ ನಡೆಯುತ್ತಿದೆ. ಆದರೆ 99.9% ಪ್ರತಿಭಟನಾ ನಿರತ ರೈತರಿರುವ ಗಡಿಯ ಹರಿಯಾಣದ ಭಾಗದಲ್ಲಿ ಪರಿಸ್ಥಿತಿ ಶಾಂತವಾಗಿದೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳು: ಗೆದ್ದು ಸೋಲುತ್ತಿರುವ ಮೋದಿ; ಸೋತು ಗೆಲ್ಲುತ್ತಿದ್ದಾರೆ ರೈತರು!