ಬೆಂಗಳೂರಲ್ಲೂ ಟ್ರ್ಯಾಕ್ಟರ್ ರ್ಯಾಲಿ : ದೆಹಲಿ ರೈತರ ಬೆಂಬಲಕ್ಕೆ ನಿಂತ ಕರುನಾಡ ಅನ್ನದಾತರು!

ನವದೆಹಲಿಯ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆಗೆ ಬೆಂಬಲ ನೀಡಲು ರಾಜ್ಯದ ರೈತರು ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲೂ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯನ್ನು ಮಾಡಲಿದ್ದಾರೆ.

ಜನವರಿ 26 ರಂದು ನಡೆಯುವ ರ್ಯಾಲಿಯಲ್ಲಿ 10,000 ಕ್ಕೂ ಹೆಚ್ಚು ಟ್ರಾಕ್ಟರುಗಳು ಭಾಗವಹಿಸಲಿವೆ ಎಂದು ರಾಜ್ಯ ರೈತ ಸಂಘ (ಕೆಆರ್‌ಆರ್‌ಎಸ್) ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. “ಸುಮಾರು 25 ಸಾವಿರ ರೈತರು ಬೆಂಗಳೂರಿಗೆ ಪ್ರವೇಶಿಸಿ ಸ್ವಾತಂತ್ರ್ಯ ಉದ್ಯಾನವನವನ್ನು ತಲುಪಲಿದ್ದಾರೆ. ನಗರದ ಯಶವಂತಪುರ ಮತ್ತು ಮಲ್ಲೇಶ್ವರಂ, ನೆಲಮಂಗಲದಿಂದ ಬೆಂಗಳೂರಿಗೆ ಮೆರವಣಿಗೆ ನಡೆಯಲಿದ್ದು, ರೈತರು 10,000 ಕ್ಕೂ ಹೆಚ್ಚು ಟ್ರಾಕ್ಟರುಗಳು ಮತ್ತು ಇತರ ವಾಹನಗಳಲ್ಲಿ ಆಗಮಿಸಲಿದ್ದಾರೆ. ಮೆರವಣಿಗೆಯನ್ನು ಮುಖ್ಯಮಂತ್ರಿ ರಾಷ್ಟ್ರಧ್ವಜವನ್ನು ಹಾರಿಸಿದ ಕೂಡಲೇ ಪ್ರಾರಂಭಿಸಲು ಯೋಜಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ರ್ಯಾಲಿಯಲ್ಲಿ ಮೈಸೂರು ಮತ್ತು ಇತರ ಜಿಲ್ಲೆಗಳ ರೈತರು ಸಹ ಭಾಗವಹಿಸಲಿದ್ದಾರೆ. “ಪ್ರತಿಭಟನಾಕಾರರು ಹಿಂಸಾಚಾರದಿಂದ ದೂರವಿರುತ್ತಾರೆ ಹೀಗಾಗಿ ಪೊಲೀಸರು ಮತ್ತು ಅಧಿಕಾರಿಗಳು ನಮಗೆ ಅನುಮತಿಯನ್ನು ನಿರಾಕರಿಸಲು ಯಾವುದೇ ಕಾರಣವಿಲ್ಲ” ಎಂದು ಅವರು ಹೇಳಿದ್ದಾರೆ. ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ರೈತರು ಯೋಜಿಸಿರುವ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾಗವಹಿಸಲು ಮೈಸೂರು, ಚಾಮರಾಜನಗರ ಮತ್ತು ಹಾಸನದ ಸುಮಾರು 100 ರೈತರು ರಾಜ್ಯವನ್ನು ತೊರೆದಿದ್ದಾರೆ.

ರೈತರ ಮುಖಂಡ ಮಂಜೆ ಗೌಡ ನೇತೃತ್ವದ ನಿಯೋಗದಲ್ಲಿ ಇನ್ನೂ 100 ರಿಂದ 200 ಜನರು ಸೇರಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕಬ್ಬಿನ ರೈತ ಸಂಘದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ. “ಮೊದಲ ಗುಂಪು ನಾಲ್ಕು ವಾಹನಗಳಲ್ಲಿ 50 ಕೆಜಿ ಅಕ್ಕಿ, 40 ಕೆಜಿ ತರಕಾರಿಗಳು, ತೆಂಗಿನಕಾಯಿ ಮತ್ತು ಔಷಧಿಗಳೊಂದಿಗೆ ಹೊರಟಿದ್ದರೆ, ಎರಡನೇ ಗುಂಪು ರೈಲಿನಲ್ಲಿ ರಾಜ್ಯವನ್ನು ತೊರೆಯುವ ನಿರೀಕ್ಷೆಯಿದೆ” ಎಂದು ಅವರು ಹೇಳಿದರು.

ಹಿಂದಿನ ಬುಧವಾರ, ನೂರಾರು ರೈತರು ಬೆಂಗಳೂರಿನಾದ್ಯಂತ ರ್ಯಾಲಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿಕೊಂಡರು, ದೆಹಲಿಯ ಅಂಚಿನಲ್ಲಿ ತಮ್ಮ ಸಹವರ್ತಿಗಳಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಅವರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಅವರೊಂದಿಗೆ ಕೈ ಜೋಡಿಸಲಿದ್ದೇವೆ ಎಂದು ರೈತ ಮುಂಕಡರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights