ಫ್ಯಾಕ್ಟ್‌ಚೆಕ್: ಶಿವಸೇನಾ- NCP ನಡುವೆ ಮಾರಾಮಾರಿ ನಡೆದಿದ್ದು ನಿಜವೇ?

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು ಈ ಚದುರಂಗದಾಟದಲ್ಲಿ ಯಾರು ಯಾವ ದಾಳ ಉರುಳಿಸುತ್ತಾರೊ ತಿಳಿಯುತ್ತಿಲ್ಲ. ಇದರ ಮಧ್ಯೆ  ಮೈತ್ರಿ ಸರ್ಕಾರದ ಉಭಯ ಪಕ್ಷಗಳ ನಡುವೆ ಮಾರಾಮಾರಿ ನಡೆದಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೊವೊಂದು ವೈರಲ್ ಆಗಿದೆ.

ಉದ್ಘಾಟನಾ ಸಮಾರಂಭವೊಂದರಲ್ಲಿ ರಾಜಕೀಯ ನಾಯಕರ ಎರಡು ಗುಂಪು ಹೊಡೆದಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಶಿವಸೇನಾ ಮತ್ತು ಎನ್‌ಸಿಪಿ ನಾಯಕರು ಪರಸ್ಪರ ಹೊಡೆದಾಡುತ್ತಿದ್ದಾರೆ. ಎರಡೂ ಪಕ್ಷಗಳು ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿವೆ. ಎರಡೂ ಪಕ್ಷಗಳ ನಡುವೆ ಎಂದೋ ಹೊಡೆದಾಟ ನಡೆಯಬೇಕಿತ್ತು. ಈಗ ನಡೆಯುತ್ತಿದೆ ಅಷ್ಟೆ’ ಎಂಬ ವಿವರಣೆಯನ್ನು ಈ ವಿಡಿಯೊಗೆ ನೀಡಲಾಗಿದೆ. ಶಿವಸೇನಾದ ಕೆಲವು ಶಾಸಕರು ಮೈತ್ರಿಕೂಟ ತೊರೆಯುವಂತೆ ಪಕ್ಷದ ಮುಖ್ಯಸ್ಥರ ಮೇಲೆ ಬಂಡಾಯ ಎದ್ದಿರುವ ಸಂದರ್ಭದಲ್ಲಿ ಈ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಿಡಿಯೊವನ್ನು ಗೂಗಲ್ ರಿವರ್ಸ್‌ ಇಮೇಜ್‌ ಸರ್ಚ್‌ನಲ್ಲಿ ವಿಡಿಯೊವನ್ನು ರನ್ ಮಾಡಿದಾಗ ವೈರಲ್ ವಿಡಿಯೊದಲ್ಲಿರುವ ಘಟನೆಯು 2019ರಲ್ಲಿ ನಡೆದಿದೆ ಎಂದು ತಿಳೀದುಬಂದಿದೆ. ‘ಈ ವಿಡಿಯೊಗೂ, ಮಹಾರಾಷ್ಟ್ರ ಸರ್ಕಾರದ ಪ್ರಸ್ತುತ ಬಿಕ್ಕಟ್ಟಿಗೂ ಯಾವುದೇ ಸಂಬಂಧವಿಲ್ಲ.

ಬೃಹನ್ ಮುಂಬೈ ನಗರ ಪಾಲಿಕೆ ನಿರ್ಮಿಸಿದ್ದ ಸಮುದಾಯ ಭವನ ಒಂದರ ಉದ್ಘಾಟನೆ ಸಮಾರಂಭದಲ್ಲಿ ದೀಪ ಬೆಳಗಿಸುವ ವಿಚಾರಕ್ಕಾಗಿ ಎನ್‌ಸಿಪಿ ಮತ್ತು ಶಿವಸೇನಾ ನಾಯಕರ ಮಧ್ಯೆ ಹೊಡೆದಾಟ ನಡೆದಿತ್ತು. 2019ರ ಮಾರ್ಚ್‌ನಲ್ಲಿ ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿಕೂಟದ ಎಂವಿಎ ಸರ್ಕಾರ ಅಸ್ತಿತ್ವಕ್ಕೇ ಬಂದಿರಲಿಲ್ಲ. ಹಳೆಯ ವಿಡಿಯೊವನ್ನು ತಪ್ಪು ಮಾಹಿತಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ’ ಎಂದು ‘ದಿ ಲಾಜಿಕಲ್ ಇಂಡಿಯನ್’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ 2019ರ ವಿಡಿಯೊವನ್ನು ಇತ್ತಿಚೆಗೆ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟಿಗೆ ಸಮೀಕರಿಸಿ ವಿಡಿಯೋವನ್ನು ವೈರಲ್ ಮಾಡಲಾಗಿದೆ. ಹಾಗಾಗಿ ವೈರಲ್ ವಿಡಿಯೊಗೂ ಮಹಾರಾಷ್ಟ್ರ ಸರ್ಕಾರದ ಪ್ರಸ್ತುತ ಬಿಕ್ಕಟ್ಟಿಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸ್ಮಾರ್ಟ್‌ವಾಚ್ ಬಳಸಿ ಪೇಟಿಎಂ ಫಾಸ್ಟ್‌ಟ್ಯಾಗ್ ಹಣ ಲೂಟಿ ಮಾಡಬಹುದೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights