ಯಾರದ್ದೋ ಕವಿತೆಯನ್ನು ತನ್ನ ಪತ್ನಿ ಬರೆದಿದ್ದಾರೆಂದು ಹೇಳಿ ಟ್ರೋಲ್ ಆದ ಮಧ್ಯಪ್ರದೇಶ ಸಿಎಂ
ಬೇರೆಯವರೊಬ್ಬರು ಬರೆದಿರುವ ಕವಿತೆಯನ್ನು ತನ್ನ ಪತ್ನಿ ಬರೆದಿದ್ದಾರೆಂದು ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಟ್ರೋಲ್ ಮಾಡಲಾಗುತ್ತಿದ್ದು, ವಿರೋಧ ಪಕ್ಷಗಳು ಚೌಹಾಣ್ ವಿರುದ್ದ “ಕೃತಿಚೌರ್ಯ” ಆರೋಪ ಹೊರಿಸಿದ್ದಾರೆ.
ಶಿವರಾಜ್ ಸಿಂಗ್ ಚೌಹಾನ್ ಅವರ ಮಾವ ನವೆಂಬರ್ 18 ರಂದು ನಿಧನರಾಗಿದ್ದರು, ಇದಾಗಿ ನಾಲ್ಕು ದಿನಗಳ ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ’ಬಾವುಜಿ’ ಎಂಬ ಹಿಂದಿ ಕವಿತೆಯ ಕೆಲವು ಸಾಲುಗಳನ್ನು ಹಂಚಿಕೊಂಡು ಇದನ್ನು ತಮ್ಮ ಪತ್ನಿ ಸಾಧನಾ ಸಿಂಗ್ ಬರೆದಿದ್ದಾರೆ ಎಂದು ಹೇಳಿಕೊಂಡಿದ್ದರು.
ಆದರೆ, ಮಧ್ಯಪ್ರದೇಶ ಮೂಲದ ಬರಹಗಾರ್ತಿ ಭೂಮಿಕಾ ಬಿರ್ಥಾರೆ, “ಇದು ನನ್ನ ಕವಿತೆ” ಎಂದು ಹೇಳಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ವಿವಾದವೇರ್ಪಟ್ಟಿದೆ. ಅವರು “ನಾನು ನಿಮ್ಮ ಸೋದರ ಸೊಸೆಯಂತೆ ಇದ್ದೇನೆ. ನನ್ನ ಕವನವನ್ನು ಕದಿಯುವ ಮೂಲಕ ನೀವು ಏನು ಪಡೆಯುತ್ತೀರಿ? ಈ ಕವಿತೆಯನ್ನು ನಾನು ಬರೆದಿದ್ದೇನೆ. ನನ್ನ ಹಕ್ಕುಗಳನ್ನು ನೀವು ಉಲ್ಲಂಘಿಸುವುದಿಲ್ಲ ಎಂದು ಭಾವಿಸುತ್ತೇವೆ. ಸೋದರ ಮಾವ ಇರುವುದು ಹಕ್ಕುಗಳನ್ನು ರಕ್ಷಿಸಲು ತಾನೆ” ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
पिता और पुत्री का रिश्ता दुनिया में सबसे अनमोल रिश्ता होता है। यह ऐसा रिश्ता है, जिसमें कोई शर्त नहीं होती, यह बिल्कुल निस्वार्थ होता है।
पुत्री, पिता के सबसे करीब और पिता का अभिमान भी होती है। एक बेटी को सबसे ज्यादा प्यार और गर्व अपने पिता पर होता है। pic.twitter.com/AH1nd53eLz
— Shivraj Singh Chouhan (@ChouhanShivraj) November 22, 2020
“ದಯವಿಟ್ಟು ನನಗೆ ಮನ್ನಣೆ ನೀಡಿ ಸರ್. ಈ ಕವಿತೆಯನ್ನು ನಾನು ಬರೆದಿದ್ದೇನೆ ಮತ್ತು ಅದರ ಶೀರ್ಷಿಕೆ ’ಡ್ಯಾಡಿ’ ಎಂದಾಗಿದೆ. ’ಬಾವುಜಿ’ ಅಲ್ಲ. ನನ್ನ ತಂದೆಯ ಮೇಲಿನ ನನ್ನ ಭಾವನೆಗಳಿಗೆ ಅನ್ಯಾಯ ಮಾಡಬೇಡಿ” ಎಂದು ಅವರು ಸರಣಿ ಟ್ವೀಟ್ ಮಾಡಿದ್ದಾರೆ.
“ನಾನು ನನ್ನ ತಂದೆಯ ಕೊನೆಯ ವಿಧಿಗಳನ್ನು ನಿರ್ವಹಿಸುತ್ತಿದ್ದಾಗ, ನನ್ನ ಫೋನ್‌ನ ನೋಟ್‌ಪ್ಯಾಡ್ ಅನ್ನು ಬಳಸಿ ಇದನ್ನು ಬರೆದಿದ್ದೇನೆ. ಬರೆದಾಗ ದಿನಾಂಕ ಮತ್ತು ಸಮಯವನ್ನು ಉಲ್ಲೇಖಿಸಿದ್ದೇನೆ. ನಂತರ ಅದನ್ನು ನನ್ನ ಕುಟುಂಬದ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದೇನೆ” ಎಂದು ಭೂಮಿಕಾ ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.
“ನವೆಂಬರ್ 21 ರಂದು ನಾನು ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದೇನೆ. ಮುಖ್ಯಮಂತ್ರಿಯ ಪತ್ನಿ ಸಾಧನಾ ಸಿಂಗ್ ಅವರು ವಾಟ್ಸಾಪ್ ಗುಂಪಿನಲ್ಲಿ ಕವಿತೆಯನ್ನು ಹಂಚಿಕೊಂಡಿದ್ದಾರೆ ಎಂದು ನನ್ನ ಸ್ನೇಹಿತ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದ. ಆದರೆ ಅದರ ನಂತರ ಮುಖ್ಯಮಂತ್ರಿಯವರು ತಮ್ಮ ಹೆಂಡತಿಗೆ ಮನ್ನಣೆ ನೀಡಿ ಕವಿತೆಯನ್ನು ಟ್ವೀಟ್ ಮಾಡಿದ್ದಾರೆ. ಇದಕ್ಕೆ ನನಗೆ ತೀವ್ರ ಆಕ್ಷೇಪವಿದೆ… ನೀವು ನನ್ನ ಸೋದರ ಮಾವ ಇದ್ದಂತೆ, ನನ್ನ ನೆಚ್ಚಿನವರು. ಇದನ್ನು ರಾಜಕೀಯಗೊಳಿಸಲು ನಾನು ಬಯಸುವುದಿಲ್ಲ. ನನಗೆ ಬೇಕಾಗಿರುವುದು ನಾನು ಬರೆದದ್ದಕ್ಕೆ ಮನ್ನಣೆ ಮಾತ್ರ” ಎಂದು ಅವರು ಹೇಳಿದ್ದಾರೆ.
मेरी धर्मपत्नी ने स्व. बाबू जी के पुण्य स्मरण और जीवटता को कुछ पंक्तियों में पिरोया है-
जिसके कंधे पर बैठकर घूमा करती थी, उसे कंधा देकर आयी हूँ।
उसके माथे को चूमकर, ज़िंदगी की नसीहतें लेकर आयी हूँ।— Shivraj Singh Chouhan (@ChouhanShivraj) November 22, 2020
ಶಿವರಾಜ್ ಸಿಂಗ್ ಅವರು ಈ ಕೃತ್ಯವನ್ನು ಕಾಂಗ್ರೆಸ್ ಹಿರಿಯ ನಾಯಕ ಅರುಣ್ ಯಾದವ್ ಅವರು ಟೀಕಿಸಿದ್ದು, “ಬಿಜೆಪಿಗರು ಹೆಸರುಗಳನ್ನು ಬದಲಾಯಿಸುವಲ್ಲಿ ಪರಿಣಿತರು. ಈ ಹಿಂದೆ ಅವರು ಕಾಂಗ್ರೆಸ್ ಆಡಳಿತವು ಪರಿಚಯಿಸಿದ ಯೋಜನೆಗಳ ಹೆಸರನ್ನು ಬದಲಾಯಿಸುತ್ತಿದ್ದರು, ಆದರೆ ಈಗ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಬೇರೊಬ್ಬರು ಬರೆದ ಕವಿತೆಯನ್ನು ಅವರ ಹೆಂಡತಿ ಬರೆದಿದ್ದು ಎಂದು ಹೇಳುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
https://twitter.com/bhumikabirthare/status/1333363326189912064?s=20
ವಿವಾದದ ಬಗ್ಗೆ ಪ್ರತಿಕ್ರಿಯಿಸಲು ರಾಜ್ಯ ಬಿಜೆಪಿ ಘಟಕ ನಿರಾಕರಿಸಿದ್ದು, ಇದು ಅವರ ವೈಯಕ್ತಿಕ ವಿಷಯ ಎಂದು ಹೇಳಿದೆ ಎಂದು ಓಆಖಿಗಿ ವರದಿ ಮಾಡಿದೆ.
ಇದನ್ನೂ ಓದಿ: ಕೇಂದ್ರದಿಂದ ನಮ್ಮೆದೆಗೆ ಗುಂಡು ಅಥವಾ ನ್ಯಾಯ ದೊರೆಯಲಿದೆ: ರೈತ ಹೋರಾಟಗಾರ

