ನ್ಯಾಯಾಧೀಶರ ಪತ್ನಿಯರಿಗೆ ಅತ್ಯಾಚಾರ ಬೆದರಿಕೆ; ನಿವೃತ್ತ ನ್ಯಾಯಮೂರ್ತಿ ಕರ್ಣನ್ ಬಂಧನ

ಮಹಿಳಾ ನ್ಯಾಯಧೀಶರು ಮತ್ತು ನ್ಯಾಯಾಧೀಶರ ಪತ್ನಿಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದ ಮಾಜಿ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್. ಕರ್ಣನ್ ಅವರನ್ನು ಚೈನೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕರ್ಣನ್‌ ಅವರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು ಹಾಗೂ ನ್ಯಾಯಾಧೀಶರ ಪತ್ನಿಯರ ವಿರುದ್ಧ ಮಾನಹಾನಿಕರ ಮತ್ತು ಆಕ್ರಮಣಕಾರಿ ಟೀಕೆಗಳನ್ನು ಮಾಡಿದ್ದರು. ಅಲ್ಲದೆ, ಅದನ್ನು ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು.

ಕರ್ಣನ್‌ ಅವರ ವಿರುದ್ಧ ದೂರು ದಾಖಲಾದ ಒಂದು ತಿಂಗಳ ನಂತರ ಚೆನೈ ಸೈಬರ್‌ ಪೋಲೀಸರು ಅವರನ್ನು ಬಂಧಿಸಿದ್ದಾರೆ.

ಕರ್ಣನ್‌ ವಿರುದ್ಧ ದೂರು ನೀಡಿ ಒಂದು ತಿಂಗಳಾದರೂ ಅವರನ್ನು ಬಂಧಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುದುಚೇರಿ ಬಾರ್‌ ಕೌನ್ಸಿಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ.ಸತ್ಯನಾರಾಯಣನ್ ಮತ್ತು ಆರ್.ಹೇಮಲತಾ ಅವರ ಪೀಠವು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. ಇದಾದ ಬಳಿಕ ಪೊಲೀಸರು ಕರ್ಣನ್‌ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಸಹಿಷ್ಣುತೆ-ಸಾಮರಸ್ಯ ನಾಶ: ಸರ್ಕಾರ ಮತ್ತು ಮಾಧ್ಯಮಕ್ಕೆ ಬಳಕೆಯಾದ ಕೊರೊನಾ

2017ರಲ್ಲಿ ಕೋಲ್ಕತಾ ಹೈಕೋರ್ಟ್​ನ ನ್ಯಾಯಮೂರ್ತಿಯಾಗಿದ್ದಾಗ ನ್ಯಾಯಾಲಯಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ವಿವಾದ ಸೃಷ್ಟಿಸಿದ್ದ ನ್ಯಾ.ಕರ್ಣನ್​ ಅವರಿಗೆ ನ್ಯಾಯಾಂಗ ನಿಂಧನೆ ಆರೋಪದಡಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅವರ ಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ತಿರಸ್ಕರಿಸಿದ್ದ ಸುಪ್ರೀಂ, ಕರ್ಣನ್‌ ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿತ್ತು. ಇದರಿಂದ ಜೈಲು ಶಿಕ್ಷೆ ಅನುಭವಿಸಿದ ಮೊದಲ ಸಿಟ್ಟಿಂಗ್‌ ಹೈಕೋರ್ಟ್‌ ನ್ಯಾಯಾಧೀಶ ಎನ್ನಿಸಿಕೊಂಡಿದ್ದರು.

ಕರ್ಣನ್‌ ಅವರು 2009ರಲ್ಲಿ ಮೊದಲ ಬಾರಿಗೆ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ನಂತರ, ಅವರನ್ನು 2016 ರಲ್ಲಿ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಹಿರಿಯ ನ್ಯಾಯಾಧೀಶರು ಭ್ರಷ್ಟಾಚಾರದ ಆರೋಪ ಹೊರಿಸಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ನಂತರ ಅಧ್ಯಕ್ಷ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದರು.

ನಿವೃತ್ತರಾದ ನಂತರ,  ಅವರು 2018 ರಲ್ಲಿ ಎಸಿಡಿಪಿ (Anti-Corruption Dynamic Party) ಪಕ್ಷದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.


ಇದನ್ನೂ ಓದಿ: ಸೂಟು-ಬೂಟು ಸರ್ಕಾರದಿಂದ ರೈತರ ಆದಾಯ ಅರ್ಧದಷ್ಟಾಗಿದೆ; ಸ್ನೇಹಿತರ ಆದಾಯ ದುಪ್ಪಟ್ಟಾಗಿದೆ: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights