ಕರ್ನಾಟಕದ ಚೆನ್ನಪಟ್ಟಣದ ಆಟಿಕೆಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯಬೇಕು: ಮನ್‌ ಕಿ ಬಾತ್‌ನಲ್ಲಿ ಮೋದಿ

ಕೊರೊನಾ ಸೋಂಕಿನ ವಿರುದ್ದದ ಹೋರಾಟದಲ್ಲಿ ದೇಶವು ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆ. ಕೊರೊನಾಗೆ ಲಸಿಕೆ ಕಂಡುಹಿಡಿಯುವಲ್ಲಿ ಭಾರತ ಯಶಸ್ಸು ಸಾಧಿಸಲಿದೆ ಎಂದು ಪ್ರಧಾನಿ ಮೋದಿ ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರದಲ್ಲಿ ಹೇಳಿದ್ದಾರೆ.

ಇಂದು ಮನ್‌ ಕೀ ಬಾತ್‌ನ 68ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ಕರ್ನಾಟಕದ ಚೆನ್ನಪಟ್ಟಣ, ಆಂಧ್ರದ ಕೊಂಡಪಲ್ಲಿ, ತಮಿಳುಣಾಡಿನ ತಂಜಾವೂರು ಆಟಿಕೆ ಸಾಮಾನುಗಳು ಜಗತ್ಪ್ರಸಿದ್ಧವಾಗಿದ್ದು, ಇವುಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯಬೇಕಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು:

  • ಕೊರೊನಾ ವೈರಸ್ ಹಾವಳಿಯ ವಿರುದ್ಧ ನಾವು ಸರಿಯಾದ ಮಾರ್ಗದಲ್ಲಿ ಹೋರಾಟ ನಡೆಸುತ್ತಿದ್ದೇವೆ.
  • ಈ ಹೋರಾಟದಲ್ಲಿ ದೇಶ ತೋರುತ್ತಿರುವ ಸಂಯಮ ನಿಜಕ್ಕೂ ಶ್ಲಾಘನೀಯ.
  • ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಭವಿಷ್ಯದ ಪೀಳಿಗೆಗೆ ಉತ್ತಮ ಹವಾಮಾನ ಒದಗಿಸುವುದು ನಮ್ಮ ಜವಾಬ್ದಾರಿಯೂ ಹೌದು.
  • ಕೃಷಿ ಉತ್ಪನ್ನಗಳ ಶೇಕಡಾವಾರು ವೃದ್ಧಿ ನಿಜಕ್ಕೂ ಸಂತಸದ ಸಂಗತಿ ಎಂದ ಪ್ರಧಾನಿ ಮೋದಿ.
  • ಭಾರತೀಯ ಮಕ್ಕಳಿಗೆ ದೇಶೀಯವಾಗಿ ಉತ್ಪಾದಿಸಿದ ಆಟಿಕೆಗಳನ್ನು ಒದಗಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ.
  • ಜಾಗತಿಕ ಆಟಿಕೆ ವ್ಯವಹಾರ ಸುಮಾರು 7 ಲಕ್ಷ ಕೋಟಿ ರೂ.ಗಳಾಗಿದ್ದು, ಇದರಲ್ಲಿ ಭಾರತದ ಪಾಲು ತುಂಬ ಕಡಿಮೆ ಇದೆ.
  • ಹೀಗಾಗಿ ಆಟಿಕೆ ಉದ್ಯಮಕ್ಕೆ ಹೊಸ ರೂಪ ನೀಡಲು ನಮ್ಮ ಸರ್ಕಾರ ಯೋಜನೆ ರೂಪಿಸಲಿದೆ.
  • ಪ್ರಕೃತಿ ಪೂರಕ ಆಟಿಕೆ ಸಾಮಾನುಗಳನ್ನು ತಯಾರಿಸುವುದು ನಮ್ಮ ಗುರಿಯಾಗಬೇಕು ಎಂದ ಪ್ರಧಾನಿ.
  • ಕರ್ನಾಟಕದ ಚೆನ್ನಪಟ್ಟಣ, ಆಂಧ್ರದ ಕೊಂಡಪಲ್ಲಿ, ತಮಿಳುಣಾಡಿನ ತಂಜಾವೂರು ಆಟಿಕೆ ಸಾಮಾನುಗಳು ಜಗತ್ಪ್ರಸಿದ್ಧವಾಗಿದ್ದು, ಇವುಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯಬೇಕಿದೆ.
  • ಕಂಪ್ಯೂಟರ್‌ ಗೇಮ್‌ಗಳನ್ನೂ ದೇಶೀಯವಾಗಿಯೇ ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ.
  • ದೇಶದ ಎಲ್ಲಾ ಕ್ಷೇತ್ರಗಳನ್ನೂ ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ ತರಲು ಪ್ರಯತ್ನ ಆರಂಭವಾಗಿದೆ.
  • ಭಾರತದ ಸುರಕ್ಷತೆಯಲ್ಲಿ ಶ್ವಾನದಳದ ಪಾತ್ರ ಅತ್ಯಂತ ಮಹತ್ವವಾಗಿದ್ದು, ಶ್ವಾನದಳದ ಸೇವೆಯನ್ನು ಸದಾ ಸ್ಮರಿಸಿಕೊಳ್ಳಲಾಗುವುದು.
  • ಕರ್ನಾಟಕದ ಮುಧೋಳ ಶ್ವಾನ ತಳಿಯೂ ಸೇರಿದಂತೆ ಹಲವು ಉನ್ನತ ಶ್ವಾನ ತಳಿಗಳು ಈ ದೇಶದ ರಕ್ಷಣೆಗೆ ಟೊಂಕ ಕಟ್ಟಿ ನಿಂತಿವೆ.
  • ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಬಾರೀ ಬದಲಾವಣೆಯಾಗಲಿದೆ.
  • ಇದೇ ಸೆ.05ರಂದು ಶಿಕ್ಷಕರ ದಿನಾಚರಣೆಯಿದ್ದು, ಎನ್‌ಇಪಿಯ ಯಶಸ್ವಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಾಧಾನಿ ನುಡಿದರು.
  • ಮಾರಕ ಕೊರೊನಾ ವೈರಸ್ ಹಾವಳಿ ತಡೆಗಟ್ಟಲು ಕೇಂದ್ರ ಸರ್ಕಾರದ ಮಶರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮಾರಕ ವೈರಾಣುವನ್ನು ಸೋಲಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

Read Also: ಹಿಂದುಳಿದ ವರ್ಗದವರೇ ಆಗಿರುವ ಪ್ರಧಾನಿ ಮೋದಿಯವರು ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಿ; ಒಳ ಮೀಸಲಾತಿ ಜಾರಿಮಾಡಿ!


Read Also: ರೋರೋ ರೈಲು ಸೇವೆಗೆ ಬಿಎಸ್‌ವೈ ಹಸಿರು ನಿಶಾನೆ! ಏನಿದು ರೋರೋ ರೈಲು?


Read Also: ಪ್ರಶಾಂತ್‌ ಭೂಷಣ್‌ ನ್ಯಾಯಾಂಗ ನಿಂದನೆ ಪ್ರಕರಣ: ನಾಳೆ ಶಿಕ್ಷೆ ಪ್ರಕಟ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights