FACT CHECK | ಬೈಕ್ ಸವಾರನೊಬ್ಬ ಮುಸ್ಲಿಂ ಅಂಗವಿಕಲ ವೃದ್ದನಿಗೆ ಧಳಿಸಿದ್ದಾನೆ ಎನ್ನಲಾದ ವಿಡಿಯೋದ ವಾಸ್ತವವೇನು?

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಕ್ರಿಪ್ಟ್ ಮಾಡಿದ ವಿಡಿಯೋ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ಈ ವಿಡಿಯೋಗಳು ನೈಜವಾಗಿ ಕಾಣುತ್ತವೆ, ಆದರೆ ವಾಸ್ತವದಲ್ಲಿ ಅವು ನಕಲಿ. ಅನೇಕ ಬಾರಿ ಈ ವಿಡಿಯೋಗಳನ್ನು ಎಷ್ಟು ಚೆನ್ನಾಗಿ ಕ್ರಿಯೇಟೀವ್ ಆಗಿ ರಚಿಸಲಾಗಿರುತ್ತದೆ ಎಂದರೆ, ಅದು ಅಸಲಿ ಮತ್ತು ನಕಲಿ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟಕರವಾಗುತ್ತದೆ. ಇಂತಹದೊಂದು ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಶೇರ್ ಮಾಡುವ ಮೂಲಕ ಜಾರ್ಖಂಡ್‌ನಲ್ಲಿ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಅಂಗವಿಕಲ ಮುಸಲ್ಮಾನನಿಗೆ ಥಳಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪೂಜಾ ಮಾಥುರ್ ಎಂಬ ಮಹಿಳೆ ಹೀಗೆ ಬರೆದಿದ್ದಾರೆ, ‘ಈ ಸಂಘಿ ಬೈಕ್ ಸವಾರಿ ಪ್ರಾಣಿಯು ವಯಸ್ಸಾದ ಮುಸ್ಲಿಂ ಅಂಗವಿಕಲ ವ್ಯಕ್ತಿಯನ್ನು ರಸ್ತೆಯಲ್ಲಿ ಥಳಿಸಿ ರಿಕ್ಷಾವನ್ನು ಒಡೆಯಲು ಪ್ರಯತ್ನಿಸುತ್ತಿದೆ. ಜಾರ್ಖಂಡ್ ಪೊಲೀಸರು ದಯವಿಟ್ಟು ತಕ್ಷಣ ಕ್ರಮ ಕೈಗೊಂಡು ಈ ರಕ್ತಪಿಶಾಚಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಎಂದು ಹಂಚಿಕೊಂಡಿದ್ದಾರೆ.

ಅಶ್ವಿನಿ ಸೋನಿ ಎಂಬ ಮತ್ತೊಬ್ಬ ಎಕ್ಸ್‌ ಬಳಕೆದಾರು ಹೀಗೆ ಬರೆದುಕೊಂಡಿದ್ದು ‘ಎಷ್ಟು ದ್ವೇಷ, ಈ ಅಂಗವಿಕಲ ವೃದ್ದನನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋ ಜಾರ್ಖಂಡ್‌ನದ್ದು ಎಂದು ಹೇಳಲಾಗುತ್ತಿದೆ. ಜಾರ್ಖಂಡ್ ಪೊಲೀಸರು ದಯವಿಟ್ಟು ವಿಡಿಯೋ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಹಂಚಿಕೊಂಡಿದ್ದಾರೆ.

ಇವುಗಳಲ್ಲದೆ, ಈ ವಿಡಿಯೋವನ್ನು ಬಿಟ್ಟು ಶರ್ಮಾ, ಓಟಿಸ್, ಮೊಹಮ್ಮದ್ ಇಲ್ಯಾಸ್ ಖಾನ್, ಮೊಹಮ್ಮದ್ ಫೈಜಾನ್, ಸರ್ಫರಾಜ್ ಆದಿಲ್, ಶಕೀಲ್ ಖಾನ್ ಮೇವಾಟಿ ಮತ್ತು ಮಿಸ್ಟರ್ ಕೂಲ್ ಎಂಬ X ಹ್ಯಾಂಡಲ್‌ಗಳು ಇದೇ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವವರು ಇದನ್ನು ಜಾರ್ಖಂಡ್‌ನಲ್ಲಿ ನಡೆದ ಘಟನೆ ಎಂದು ಹೇಳುತ್ತಿರುವುದರಿಂದ, ಘಟನೆ ಬಗ್ಗೆ ವಿಚಾರಿಸಲು ಜಾರ್ಖಂಡ್ ವಿಭಾಗದ ಉಸ್ತುವಾರಿ ಅಭಿಷೇಕ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಇತ್ತೀಚೆಗೆ ಜಾರ್ಖಂಡ್‌ನಲ್ಲಿ ಅಂತಹ ಯಾವುದೇ ಘಟನೆಯ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಹೇಳಿದರು.

ಮತ್ತಷ್ಟು ಮಾಹಿತಿಗಾಗಿ Google ಲೆನ್ಸ್‌ನ ಸಹಾಯದಿಂದ ಸರ್ಚ್ ಮಾಡಿದಾಗ, ಮುಕ್ಲೇಸೂರ್ ಭಾಯಿಜಾನ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವಿಡಿಯೋ ಲಭ್ಯವಾಗಿದೆ. ಈ ಯೂಟ್ಯೂಬ್ ಚಾನೆಲ್ ಅನ್ನು ತನಿಖೆಗೆ ಒಳಪಡಿಸಿದಾಗ, ಇದು ಸ್ಕ್ರಿಪ್ಟ್ ವೀಡಿಯೊ ಎಂದು ಕಂಡುಬಂದಿದೆ. ಚಾನೆಲ್ ಇಂತಹ ಹಲವು ವಿಡಿಯೋಗಳನ್ನು ಮಾಡಿ ಇಲ್ಲಿ ಅಪ್ಲೋಡ್ ಮಾಡಿದೆ.

https://www.youtube.com/watch?v=mfphRtIZTpc&t=34s

‘ಈ ಚಾನಲ್ ಅನ್ನು 2018 ರಲ್ಲಿ ಪ್ರಾರಂಭಿಸಲಾಯಿತು. ಬ್ಲಾಗಿಂಗ್ ಮತ್ತು ರೈಡಿಂಗ್ ವೀಡಿಯೊಗಳನ್ನು ಹೆಚ್ಚಾಗಿ ಈ ಚಾನಲ್‌ನಲ್ಲಿ ಮಾಡಲಾಗುತ್ತದೆ. ಸ್ಕ್ರಿಪ್ಟೆಡ್ ಮತ್ತು ಟ್ಯಾಲೆಂಟ್ ವೀಡಿಯೊಗಳು ಎರಡನೇ ಸ್ಥಾನದಲ್ಲಿವೆ. ನಮ್ಮ ಎಲ್ಲಾ ವೀಡಿಯೊಗಳನ್ನು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ ಎಂದು ಬಯೋದಲ್ಲಿ ಬರೆಯಲಾಗಿದೆ. ವೈರಲ್ ಆಗಿರುವ ವಿಡಿಯೋಗೂ ವಾಸ್ತವಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜಾರ್ಖಂಡ್‌ನಲ್ಲಿ ವಿಕಲಚೇತನ ಮುಸ್ಲಿಂ ವೃದ್ಧನ ಮೇಲೆ ಬೈಕ್ ಸವಾರನೊಬ್ಬ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಈ ವಿಡಿಯೋ ನೈಜ ಘಟನೆಯಲ್ಲ. ಈ ವಿಡಿಯೋವನ್ನು ಸ್ಕ್ರಿಪ್ಟ್‌ ಮಾಡಲಾಗಿದ್ದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಹಿಳೆಯೊಬ್ಬರು ಹಾವನ್ನು ಕುತ್ತಿಗೆಗೆ ಹಾರದಂತೆ ಹಾಕಿಕೊಂಡ ವಿಡಿಯೋದ ಅಸಲೀಯತ್ತೇನು ಗೊತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights