ರೋರೋ ರೈಲು ಸೇವೆಗೆ ಬಿಎಸ್‌ವೈ ಹಸಿರು ನಿಶಾನೆ! ಏನಿದು ರೋರೋ ರೈಲು?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬಾಳೆ ನಡುವೆ ಸಂಚರಿಸಲಿರುವ ‘ರೋಲ್ ಆನ್ ರೋಲ್ ಆಫ್’ (ರೋರೋ) ಎಂಬ ಸರಕು ತುಂಬಿದ ಟ್ರಕ್ ಅಥವಾ ಲಾರಿಗಳ ಸಾಗಣೆಯ ರೈಲು ಸೇವೆಯ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ಕಾರ್ಯಕ್ರಮದ ಮೂಲಕ ರೋರೋ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.
ಸರಕು ತುಂಬಿದ ಟ್ರಕ್ ಅಥವಾ ಲಾರಿಗಳನ್ನು ತೆರೆದ ರೈಲಿನ ವ್ಯಾಗನ್‌ಗಳ ಮೇಲೆ ನಿಲುಗಡೆ ಮಾಡಿ ನಿಗದಿತ ಸ್ಥಳಕ್ಕೆ ಸಾಗಿಸುವುದಕ್ಕೆ ‘ರೋಲ್ ಆನ್ ರೋಲ್ ಆಫ್’ ರೈಲು ಎಂದು ಹೆಸರಿಡಲಾಗಿದೆ. ಇಂದು ಸೇವೆ ಆರಂಭಿಸಿರುವ ರೈಲು 43 ತೆರೆದ ವ್ಯಾಗನ್ ಹೊಂದಿದ್ದು, 42ಕ್ಕೂ ಅಧಿಕ ಸರಕು ತುಂಬಿದ ಟ್ರಕ್ ಅಥವಾ ಲಾರಿಗಳನ್ನು ಸಾಗಿಸಲಿದೆ.
ಬೆಂಗಳೂರಿನ ನೆಲಮಂಗಲ ರೈಲ್ವೆ ನಿಲ್ದಾಣದಿಂದ ಸೋಲಾಪುರದ ಬಾಲೆ ರೈಲ್ವೆ ನಿಲ್ದಾಣದ ನಡುವೆ ಸಂಚರಿಸುವ ರೋಲ್ಆನ್-ರೋಲ್ಆಫ್ ರೈಲು ಸೇವೆಗೆ ಮುಖ್ಯಮಂತ್ರಿ ಶ್ರೀ @BSYBJP ರವರು ಹಸಿರು ನಿಶಾನೆ ತೋರುವ ಮೂಲಕ ಇಂದು ಚಾಲನೆ ನೀಡಿದರು. (1/2)@PMOIndia @PiyushGoyal pic.twitter.com/Epwm7a5uqW
— CM of Karnataka (@CMofKarnataka) August 30, 2020
Read Also: ವಾಟ್ಸಾಪ್ ಮೇಲೆ ಬಿಜೆಪಿ ಪ್ರಭಾವವಿದೆ: ಸುಳ್ಳು ಸುದ್ದಿ ಹರಡಲು ಬಳಸಿಕೊಳ್ಳುತ್ತಿದೆ: ಕಾಂಗ್ರೆಸ್