ಕಿಡ್ನಾಪ್‌ ಆಗಿದ್ದ 11ರ ಬಾಲಕನನ್ನು 24 ಗಂಟೆಗಳಲ್ಲಿ ರಕ್ಷಿಸಿದ ಬೆಂಗಳೂರು ಪೊಲೀಸರು

ಬೆಂಗಳೂರಿನ ಶಿವಾಜಿನಗರದ ಮೊಹಮ್ಮದ್ ಉಮರ್ ಎಂಬ 11 ವರ್ಷದ ಬಾಲಕನನ್ನು ಅಪಹರಿಸಿದ ಆರೋಪಿಗಳ ಗುಂಪನ್ನು  24 ಗಂಟೆಗಳ ಒಳಗೆ ಹಿಡಿದು ಬಾಲಕನನ್ನು ಪೊಲೀಸರು ರಕ್ಷಿಸಿದ್ದಾರೆ.

ಮನೆಯ ಹೊರಗಿದ್ದ ಬಾಲಕನನ್ನು ಗಾಳಿಪಟ ಕೊಡಿಸುವುದಾಗಿ ಹೇಳಿ ಕರೆದೊಯ್ದು ಅಪಹರಿಸಿದ ಗ್ಯಾಂಗ್ ಆತನನ್ನು ತುಮಕೂರಿಗೆ ಹೋಗಿದ್ದರು. ನಂತರ, ಬಾಲಕನ ತಂದೆಗೆ 2ರೂ ನೀಡುವಂತೆ ಕರೆಮಾಡಿ ಕೇಳಿದ್ದರು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗಾರರಿಗೆ ತಿಳಿಸಿದರು.

ಉಮರ್ ಗಾಳಿಪಟದ ಮೇಲೆ ಹೆಚ್ಚು ಒಲವುಹೊಂದಿದ್ದರಿಂದ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಗ್ಯಾಂಗ್ಸ್ಟರ್‌ಗೆ ಪರಿಚಿತನಾಗಿದ್ದ, ಆತನಿಗೆ ಗಾಳಿಪಟ ಕೊಡಿಸುವುದಾಗಿ ಬೈಕ್‌ನಲ್ಲಿ ಕರೆದೊಯ್ದ ಗ್ಯಾಂಗ್‌ಸ್ಟರ್ ತನ್ನ ಸಹಚರರೊಡನೆ ಕಾರಿನಲ್ಲಿ ತುಮಕೂರಿಗೆ ಕರೆದೊಯ್ದಿದ್ದಾರೆ ಎಂದು ಅವರು ಹೇಳಿದ್ದಾರೆ.

ನಂತರ ಬಾಲಕ ತಂದೆಗೆ ಕರೆ ಮಾಡಿದ್ದ ಗ್ಯಾಂಗ್‌ಸ್ಟರ್ಸ್‌ ‘ನಿಮ್ಮ ಮಗ ಜೀವಂತವಾಗಿ ಬೇಕೆಂದರೆ ಪೊಲೀಸರಿಗೆ ದೂರು ನೀಡಬಾರದು ಎಂದು ಬೆದರಿಕೆ ಹಾಕಿದ್ದರು. ಆದರೂ, ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು.

“ಉಮರ್‌ನ ತಂದೆ ನೀಡಿದ ದೂರು ಮತ್ತು ವಿವರಗಳ ಆಧಾರದ ಮೇಲೆ, ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಎಸ್ ಮುರುಗನ್ ಅವರು ಗ್ಯಾಂಗ್ ಪತ್ತೆಗಾಗಿ ತಂಡಗಳನ್ನು ರಚಿಸಿದರು. ಕಣ್ಗಾವಲು ಬಳಸಿ, ತಂಡಗಳು ಉಮರ್ ಅನ್ನು ಅಪಹರಿಸಿಟ್ಟಿದ್ದ ಸ್ಥಳವನ್ನು ಪತ್ತೆಹಚ್ಚಿ ತುಮಕುರಿನಲ್ಲಿ ಸ್ಥಳದ ಮೇಲೆ ದಾಳಿ ನಡೆಸಿ. ಆರೋಪಿಗಳನ್ನು ಬಂಧಿಸಿದ್ದು, ಬಾಲಕನನ್ನು ರಕ್ಷಿಸಲಾಗಿದೆ” ಎಂದು ಪಂತ್ ಹೇಳಿದರು.


ಇದನ್ನೂ ಓದಿ: ಮಾಜಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಕೊರೊನಾ ಸೋಂಕು: ಆಸ್ಪತ್ರೆಗೆ ದಾಖಲು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights