ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ಮುಂಬೈ ಪೊಲೀಸ್‌ ಅಧಿಕಾರಿ ಅಮಾನತು!

ಕಳೆದ ತಿಂಗಳು ಮುಖೇಶ್‌ ಅಂಬಾನಿ ಅವರ ನಿವಾಸದ ಬಳಿ ಸ್ಪೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿದಂತೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಚಿನ್‌ ವಾಜೆ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಈ ಬೆನ್ನಲ್ಲೇ ವಾಜೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಉಪ ಪೊಲೀಸ್‌ ಆಯುಕ್ತ  ಎನ್‌ ಚೈತನ್ಯ ತಿಳಿಸಿದ್ದಾರೆ.

ಅಂಬಾನಿ ನಿವಾಸದ ಬಳಿ ಸ್ಪೋಟಕ ತುಂಬಿದ ಸ್ಕಾರ್ಪಿಯೋ ಕಾರನ್ನು ನಿಲ್ಲಿಸಿದ ಆರೋಪದಲ್ಲಿ ವಾಜೆ ಅವರನ್ನು ಎನ್‌ಐಎ ಬಂಧಿಸಿದೆ. ಆ ಕಾರಣದಿಂದಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

’63 ಆಪಾದಿತ ಅಪರಾಧಿಗಳನ್ನು ಎನ್‌ಕೌಂಟರ್‌ ಮಾಡಿರುವ ಕೀರ್ತಿ 49 ವರ್ಷದ ವಾಜೆ ಅವರದ್ದಾಗಿದೆ.

ಮುಂಬೈ ನ್ಯಾಯಾಲಯವು ವಾಜ್ ಅವರನ್ನು ಮಾರ್ಚ್ 25 ರವರೆಗೆ ಎನ್ಐಎ ವಶಕ್ಕೆ ನೀಡಿದೆ.

ಐಪಿಸಿ ಸೆಕ್ಷನ್ 286 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ವರ್ತನೆ), 465 (ಖೋಟಾ ‘ಫೋರ್ಜರಿ’), 473 (ಫೋರ್ಜರಿ ಕೃತ್ಯ ಎಸಗುವ ಉದ್ದೇಶದಿಂದ ನಕಲಿ ಮುದ್ರೆಯನ್ನು ತಯಾರಿಸುವುದು ಅಥವಾ ಹೊಂದಿರುವುದು), 506 (2) (ಕ್ರಿಮಿನಲ್ ಬೆದರಿಕೆ), 120-ಬಿ (ಕ್ರಿಮಿನಲ್ ಪಿತೂರಿ) ಮತ್ತು ಸ್ಫೋಟಕ ಪದಾರ್ಥಗಳ ಕಾಯ್ದೆಗೆ ಸಂಬಂಧಿತ ನಿಬಂಧನೆಗಳ ಅನ್ವಯ ವಾಜೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ BJP ಎಂಥ ಪರಿಸ್ಥಿತಿ ತಲುಪಿದೆ; ಪಕ್ಷಾಂತರಿಗಳಿಗೆ ಟಿಕೆಟ್‌ ನೀಡಿದ್ದಕ್ಕೆ BJP ಮುಖಂಡ ಸುಬ್ರಮಣಿಯನ್‌ ಸ್ವಾಮಿ ವ್ಯಂಗ್ಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights