ಜೋ ಬೈಡನ್, ಕಮಲಾ ಹ್ಯಾರಿಸ್ ‘ವರ್ಷದ ವ್ಯಕ್ತಿ’: ಟೈಮ್ ನಿಯತಕಾಲಿಕೆ ಘೋಷಣೆಯಲ್ಲಿ ಜಿನ್‌ಪಿಂಗ್ ಹೆಸರಿತ್ತಾ?

ಕಳೆದ ವಾರ ಟೈಮ್ ಮ್ಯಾಗಝೀನ್ 2020ರ ‘ವರ್ಷದ ವ್ಯಕ್ತಿ’ ಯನ್ನು ಘೋಷಿಸಿತು. ಈ ಮ್ಯಾಗಝೀನ್ ಮುಖಪುಟದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಕೂಡ ಮಾಡಲಾಗಿದೆ. ಈ ಮುಖಪುಟದಲ್ಲಿ ಚೀನಾದ ಪ್ರೀಮಿಯರ್ ಕ್ಸಿ ಜಿನ್‌ಪಿಂಗ್, ಅಮೇರಿಕಾದ ಅಧ್ಯಕ್ಷ-ಚುನಾಯಿತ ಜೋ ಬಿಡನ್ ಮತ್ತು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಚಿತ್ರಗಳಿವೆ.

ವೈರಲ್ ಟೈಮ್ ಮ್ಯಾಗಝೀನ್ ಮುಖಪುಟದಲ್ಲಿ “ಕ್ಸಿ ಜಿನ್‌ಪಿಂಗ್, ಜೋ ಬಿಡನ್ ಮತ್ತು ಕಮಲಾ ಹ್ಯಾರಿಸ್ – ಚೇಂಜಿಂಗ್ ಅಮೆರಿಕಾಸ್ ಸ್ಟೋರಿ” ಎಂದು ಬರೆಯಲಾಗಿದೆ. ಹಲವಾರು ಫೇಸ್‌ಬುಕ್ ಬಳಕೆದಾರರು ಚಿತ್ರವನ್ನು ನಿಜವೆಂದು ನಂಬಿ ಪೋಸ್ಟ್ ಮಾಡಿದ್ದಾರೆ.

ಆದರೆ ಟೈಮ್ ಮ್ಯಾಗಝೀನ್ 2020 ರ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ಬಿಡೆನ್ ಮತ್ತು ಹ್ಯಾರಿಸ್ ಅವರಿಗೆ ಮಾತ್ರ ನೀಡಿದೆ. ಜಿನ್‌ಪಿಂಗ್ ನೀಡಿಲ್ಲ.

ಹೌದು… ಡಿಸೆಂಬರ್ 11 ರಂದು ಟೈಮ್ ಮ್ಯಾಗಝೀನ್ ಬಿಡೆನ್ ಮತ್ತು ಹ್ಯಾರಿಸ್ 2020 ರ ‘ವರ್ಷದ ವ್ಯಕ್ತಿ’ ಎಂದು ಟ್ವೀಟ್ ಮಾಡಿದೆ. ಅವರ ಚಿತ್ರಗಳನ್ನು ಒಳಗೊಂಡ ಪತ್ರಿಕೆಯ ಮುಖಪುಟದ ಚಿತ್ರವನ್ನೂ ಪೋಸ್ಟ್ ಮಾಡಿದೆ. ಮ್ಯಾಗಜೀನ್ ಮುಖಪುಟದಲ್ಲಿ  “ಜೋ ಬಿಡನ್ ಮತ್ತು ಕಮಲಾ ಹ್ಯಾರಿಸ್ – ಚೇಂಜಿಂಗ್ ಅಮೆರಿಕಾಸ್ ಸ್ಟೋರಿ” ಎಂದು ಹೇಳುತ್ತದೆ.

ಟೈಮ್‌ನ ಪ್ರಧಾನ ಸಂಪಾದಕ ಎಡ್ವರ್ಡ್ ಫೆಲ್ಸೆಂಥಾಲ್, ” ಪತ್ರಿಕೆಯಲ್ಲಿ ಯುಎಸ್ ಉಪಾಧ್ಯಕ್ಷರನ್ನು ಸೇರಿಸಿಕೊಳ್ಳುವುದು ಇದೇ ಮೊದಲು. ಜೋ ಬಿಡನ್ ಮತ್ತು ಕಮಲಾ ಹ್ಯಾರಿಸ್ TIME ನ 2020 ವರ್ಷದ ವ್ಯಕ್ತಿ “ಯಾಗಿದ್ದಾರೆ ಜಿನ್‌ಪಿಂಗ್ ಇದರಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ವೈರಲ್ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ. ಆದ್ದರಿಂದ 2020 ರ ಬಿಡೆನ್, ಹ್ಯಾರಿಸ್ ಮತ್ತು ಜಿನ್‌ಪಿಂಗ್‌ರನ್ನು ಟೈಮ್‌ನ ‘ವರ್ಷದ ವ್ಯಕ್ತಿ’ ಎಂದು ತೋರಿಸುವ ವೈರಲ್ ಚಿತ್ರ ಬದಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights