ಫ್ಯಾಕ್ಟ್‌ಚೆಕ್: Google Pay ಬಳಸದಂತೆ RBI ಸೂಚನೆ ನೀಡಿದಿಯೇ?

Google Pay ಎಂಬ ಡಿಜಿಟಲ್  ಪಾವತಿ ನಡೆಸುವ ಆಪ್ RBI ನಿಂದ ಮಾನ್ಯತೆ ಪಡೆದ ‘ಪೇಮೆಂಟ್ ಸಿಸ್ಟಮ್ ಆಪರೇಟರ್’ ಅಲ್ಲ ಎಂದು ಹೇಳುವ ಮೂಲಕ ಇನ್ನು ಮುಂದೆ Google Pay ಬಳಸದಂತೆ ಎಚ್ಚರಿಸಬೇಕು ಎಂಬ ಸಂದೇಶವಿರುವ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

 

ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ವೈರಲ್ ಆಗುತ್ತಿದೆ, ಅದರಲ್ಲಿ ನಿಮ್ಮ Google Pay ಪಾವತಿಯಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸಿದರೆ, ನೀವು ಅದರ ಬಗ್ಗೆ ದೂರು ನೀಡಲು ಸಹ ಸಾಧ್ಯವಿಲ್ಲ, ಏಕೆಂದರೆ ಗೂಗಲ್ ಪೇಗೆ ಆರ್‌ಬಿಐನಿಂದ ಪಾವತಿ ಅಪ್ಲಿಕೇಶನ್‌ನ ಪರವಾನಗಿ ಲಭ್ಯವಾಗಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಿದ್ದರೆ ಈ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಡಿಯಲ್ಲಿ ಪಾವತಿ ವ್ಯವಸ್ಥೆಯಾಗಿ ಆರ್‌ಬಿಐನಿಂದ ಗೂಗಲ್ ಪೇ ಅನ್ನು ಅಧಿಕೃತಗೊಳಿಸಲಾಗಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಅಂದರೆ Google Pay ಮೂಲಕ ಪಾವತಿ ಮಾಡುವಾಗ ನೀವು ಯಾವುದೇ ಸಮಸ್ಯೆಯನ್ನು ಎದುರಿಸಿದರೆ, ನೀವು ಅದರ ಬಗ್ಗೆ ದೂರು ನೀಡಲು ಸಹ ಸಾಧ್ಯವಿಲ್ಲ ಎಂದು ಈ ಸಂದೇಶದಲ್ಲಿ ಎಚ್ಚರಿಸಲಾಗಿದೆ. ಅಷ್ಟೇ ಅಲ್ಲದೇ, ಈ ವೈರಲ್ ಸಂದೇಶದಲ್ಲಿ, ದೆಹಲಿ ಹೈಕೋರ್ಟ್‌ನಲ್ಲಿ ಆರ್‌ಬಿಐ ಈ ಮಾಹಿತಿಯನ್ನು ನೀಡಿದೆ ಎಂದು ಹೇಳಲಾಗಿದೆ. ಇದರಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಚಿತ್ರವನ್ನೂ ಬಳಸಲಾಗಿದೆ.

ಗೂಗಲ್‌ ಪೇ ಬಳಸಿ ಮಾಡಲಾಗುವ ಯಾವುದೇ ಹಣ ವರ್ಗಾವಣೆಯಲ್ಲಿ ತೊಂದರೆ ಉಂಟಾದಲ್ಲಿ ಅದಕ್ಕೆ ಪರಿಹಾರ ಸಿಗುವುದಿಲ್ಲ ಎಂಬ ಅರ್ಥದಲ್ಲಿ ಆಗುತ್ತಿರುವ ಚರ್ಚೆಗಳ ಬಗ್ಗೆ ಕೇಂದ್ರ ಸರ್ಕಾರದ PIB ಸ್ಪಷ್ಟನೆ ನೀಡಿದೆ. ಗೂಗಲ್‌ ಪೇ ಬಳಸದಂತೆ RBI ಯಾವುದೇ ಸೂಚನೆ ನೀಡಿಲ್ಲ. ಎನ್‌ಪಿಸಿಐ ಪ್ರಕಾರ, ಗೂಗಲ್‌ ಪೇ ಭಾರತದಲ್ಲಿ ಅಧಿಕೃತ ಪಾವತಿ ವ್ಯವಸ್ಥೆಯಾಗಿದೆ ಎಂದು ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಗೂಗಲ್ 24 ಜೂನ್ 2020 ರಂದು ಟ್ವೀಟ್ ಥ್ರೆಡ್‌ನಲ್ಲಿ ಹೇಳಿಕೆಯನ್ನು ಹಂಚಿಕೊಂಡಿದೆ.

ಒಟ್ಟಾರೆಯಾಗಿ ಹೇಳುವುದಾರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ಗೆ ಸಂಬಂಧಿಸಿದಂತೆ, ಎನ್‌ಪಿಸಿಐ ಕೂಡ ಈ ಸಂದೇಶವು ಸಂಪೂರ್ಣವಾಗಿ ನಕಲಿ ಎಂದು ಹೇಳಿಕೆ ನೀಡಿದೆ. Google Pay ಅನ್ನು ಥರ್ಡ್ ಪಾರ್ಟಿ ಆಪ್ ಪ್ರೊವೈಡರ್ (TPAP) ಎಂದು ವರ್ಗೀಕರಿಸಲಾಗಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು NPCI ಹೇಳಿದೆ. ಇದು ಇತರ ಹಲವು ಪಾರ್ಟಿಗಳಂತೆ, ಬ್ಯಾಂಕಿಂಗ್ ಪಾಲುದಾರರ ಭಾಗವಾಗಿರುವ UPI ಪಾವತಿ ಸೇವೆಗಳನ್ನು ಸಹ ಒದಗಿಸುತ್ತದೆ ಮತ್ತು UPI ಚೌಕಟ್ಟಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು NPCI ತಿಳಿಸಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗುಂಡಿನ ದಾಳಿಗೆ ಒಳಗಾಗಿದ್ದ ಇಮ್ರಾನ್ ಖಾನ್ ಮೂರೇ ದಿನದಲ್ಲಿ ಗುಣಮುಖರಾದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights