ಫ್ಯಾಕ್ಟ್ಚೆಕ್: T-20 ವಿಶ್ವಕಪ್ನಲ್ಲಿ ಪಾಕ್ ತಂಡದ ವಿರುದ್ದ ಜಿಂಬಾಬ್ವೆ ಗೆಲುವು ಸಾಧಿಸಿದ್ದಕ್ಕೆ ಟಿವಿ ನಿರೂಪಕನ ಗಹಗಹಿಸಿ ನಕ್ಕಿದ್ದು ನಿಜವೇ?
2022 ರ ಟಿ 20 ವಿಶ್ವಕಪ್ ಕ್ರಿಕೆಟ್ನಲ್ಲಿ ಪಾಕಿಸ್ತಾನದ ವಿರುದ್ದ ಜಿಂಬಾಬ್ವೆ ಜಯಗಳಿಸಿದ್ದ ಸುದ್ದಿಯನ್ನು ಕೇಳಿದ ಜಿಂಬಾಬ್ವೆಯ ಟಿವಿ ನಿರೂಪಕನ ಪ್ರತಿಕ್ರಿಯೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಅಕ್ಟೋಬರ್ 27 ರಂದು ನಡೆದ ಟಿ 20 ವಿಶ್ವಕಪ್ನಲ್ಲಿ ಜಿಂಬಾಬ್ವೆ ತಂಡವು ಪಾಕ್ ವಿರುದ್ದ ಜಯಸಾಧಿಸಿದ್ದಕ್ಕೆ ಸುದ್ದಿ ನಿರೂಪಕರೊಬ್ಬರು ಸಂತಸ ತಾಳಲಾರದೆ ನಗುತ್ತಿದ್ದಾರೆ ಎಂದು ಪ್ರತಿಪಾದಿ ವೀಡಿಯೊ ಪೋಸ್ಟ್ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಗೆಲುವು ಸಾಧಿಸಲು ಕೊನೇ ಓವರ್ನಲ್ಲಿ 11 ರನ್ ಬಾರಿಸಲು ವಿಫಲವಾದ ಪಾಕಿಸ್ತಾನ ತಂಡ 1 ರನ್ಗಳ ಸೋಲು ಕಂಡಿತ್ತು. ಜಿಂಬಾಬ್ವೆ ಪರವಾಗಿ ಬೌಲಿಂಗ್ನಲ್ಲಿ ಮಿಂಚಿದ ಸಿಕಂದರ್ ರಾಜಾ 25 ರನ್ ನೀಡಿ ಮೂರು ಪ್ರಮುಖ ವಿಕೆಟ್ ಉರುಳಿಸಿದರೆ, ಬ್ರಾಡ್ ಇವಾನ್ಸ್ 25 ರನ್ ನೀಡಿ 2 ವಿಕೆಟ್ ಉರುಳಿಸಿ ಪಾಕಿಸ್ತಾನ ತಂಡದ ಸೋಲಿಗೆ ಕಾರಣರಾದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 8 ವಿಕೆಟ್ಗೆ 130 ರನ್ಗಳ ಸಾಧಾರಣ ಮೊತ್ತ ಪೇರಿಸಿತ್ತು. ಈ ಮೊತ್ತವನ್ನು ಸುಲಭವಾಗಿ ಪೇರಿಸಬಹುದು ಎನ್ನುವ ಕಾರಣಕ್ಕೆ ಅಸಡ್ಡೆ ತೋರಿದ ಪಾಕಿಸ್ತಾನದ ಬ್ಯಾಟ್ಸ್ಮನ್ಗಳಿಗೆ ಜಿಂಬಾಬ್ವೆ ಬೌಲರ್ಗಳು ದಿಗಿಲು ಮೂಡಿಸಿದರು. 20 ಓವರ್ಗಳಲ್ಲಿ ಪಾಕಿಸ್ತಾನ ತಂಡ 8 ವಿಕೆಟ್ಗೆ 129 ರನ್ ಪೇರಿಸಲಷ್ಟೇ ಯಶಸ್ವಿಯಾಗಿ 1 ರನ್ನಿಂದ ಸೋಲು ಕಂಡಿತು.
2022 ರ T20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಜಿಂಬಾಬ್ವೆ ಕ್ರಿಕೆಟ್ ತಂಡ ಗೆದ್ದ ನಂತರ ಜಿಂಬಾಬ್ವೆಯ ಸುದ್ದಿ ನಿರೂಪಕ ನಗುತ್ತಿರುವ ವೀಡಿಯೊ. ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್ ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಗೂಗಲ್ನಲ್ಲಿ ಕೀವರ್ಡ್ ಸಹಾದಿಂದ ಸರ್ಚ್ ಮಾಡಿದಾಗ ವೈರಲ್ ವೀಡಿಯೊದ ವಿಸ್ತೃತ ಆವೃತ್ತಿ ಲಭ್ಯವಾಗಿದ್ದು. ‘Akrobeto ‘Massacres’ ’ ಹೆಸರಿನ ಈ ಯೂಟ್ಯೂಬ್ ವೀಡಿಯೋವನ್ನು 31 ಅಕ್ಟೋಬರ್ 2020 ರಂದು UTV ಘಾನಾ ಆನ್ಲೈನ್ ಅಪ್ಲೋಡ್ ಮಾಡಿದ್ದು, ಬುಂಡೆಸ್ಲಿಗಾದಿಂದ ಇಟಾಲಿಯನ್ ಸೀರಿ A ವರೆಗೆ ಫಿಕ್ಚರ್ಗಳನ್ನು ನೀಡುವಂತೆ ವಿದೇಶಿ ಕ್ಲಬ್ಗಳ ಹೆಸರುಗಳ ಪಟ್ಟಿಗಳನ್ನು ಓದಲಾಗಿದೆ.

ಯುನೈಟೆಡ್ ಟೆಲಿವಿಷನ್ ಘಾನಾ (UTV ಘಾನಾ) ಘಾನಾದಲ್ಲಿ ದೂರದರ್ಶನ ಪ್ರಸಾರವಾಗಿದೆ. ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಸುದ್ದಿ ನಿರೂಪಕ ಅಕ್ರೊಬೆಟೊ, ಯುಟಿವಿ ಘಾನಾದಲ್ಲಿ ‘ದಿ ರಿಯಲ್ ನ್ಯೂಸ್‘ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಈ ವೀಡಿಯೊದಲ್ಲಿ, Acrobeto ಫುಟ್ಬಾಲ್ ಕ್ಲಬ್ಗಳ ಹೆಸರನ್ನು ಓದುವುದನ್ನು ಮತ್ತು ಅವುಗಳನ್ನು ತಪ್ಪಾಗಿ ಉಚ್ಚರಿಸುವುದನ್ನು ಕಾಣಬಹುದು. ವೀಡಿಯೊದ ಒಂದು ಹಂತದಲ್ಲಿ, ಅವರು ‘ಐನ್ಟ್ರಾಕ್ಟ್ ಫ್ರಾಂಕ್ಫರ್ಟ್’ ಹೆಸರನ್ನು ಓದುವಾಗ ನಗುತ್ತಾರೆ. ಇದು ವೀಡಿಯೊದಲ್ಲಿ 0:50 ಮಾರ್ಕ್ನಲ್ಲಿ ಕಾಣಬಹುದಾಗಿದೆ ಮತ್ತು ವೈರಲ್ ವೀಡಿಯೊದಲ್ಲಿ ಕಂಡುಬರುವುದು ಇದೇ ವಿಡಿಯೋ ಎಂಬುದು ಸ್ಪಷ್ಟವಾಗಿದ. ಈ ಹಳೆಯ ವಿಡಿಯೋವನ್ನು ಟಿ 20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಜಿಂಬಾಬ್ವೆ ಜಯಗಳಿಸಿದ ನಂತರ ಜಿಂಬಾಬ್ವೆಯ ಸುದ್ದಿ ನಿರೂಪಕನ ಪ್ರತಿಕ್ರಿಯೆಯಾಗಿ ಅಕ್ರೊಬೆಟೊದ ಈ ಹಳೆಯ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವೀಡಿಯೊ ಅಕ್ಟೋಬರ್ 2020 ರದ್ದು, ಮತ್ತು ವೀಡಿಯೊದಲ್ಲಿರುವ ವ್ಯಕ್ತಿ ಅಕ್ರೊಬೆಟೊ, ಘಾನಾದ ಟಿವಿ ನಿರೂಪಕ, ಅವರು ಯುಟಿವಿ ಘಾನಾದಲ್ಲಿ ‘ದಿ ರಿಯಲ್ ನ್ಯೂಸ್’ ಎಂಬ ಸುದ್ದಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಮೂಲ ವೀಡಿಯೊದಲ್ಲಿ, ಅವರು ತಮ್ಮ ಸುದ್ದಿ ಕಾರ್ಯಕ್ರಮದ ಸಮಯದಲ್ಲಿ ಫುಟ್ಬಾಲ್ ಕ್ಲಬ್ಗಳ ಹೆಸರನ್ನು ಓದುವಾಗ ನಗುತ್ತಾರೆ. 2020 ರ ಹಳೆಯ ವೀಡಿಯೊದ ದೃಶ್ಯವನ್ನು ತಿರುಚಿ ಘಾನಾದ ಟಿವಿ ನಿರೂಪಕ, ಪಾಕಿಸ್ತಾನದ ವಿರುದ್ಧ ಜಿಂಬಾಬ್ವೆ ಕ್ರಿಕೆಟ್ ತಂಡ ಜಯಗಳಿಸಿದ ನಂತರ ಸುದ್ದಿ ನಿರೂಪಕ ನಗುತ್ತಿರುವ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಪಾಕಿಸ್ತಾನದ ಈ ಅಜ್ಜಿಗೆ 250 ವರ್ಷ ವಯಸ್ಸಾಗಿದೆ ಎಂಬುದು ನಿಜವೇ?

