ಭಾರತ-ಚೀನಾ-ರಷ್ಯಾ ಕೊಳಕು ರಾಷ್ಟ್ರಗಳು: ಪುನರುಚ್ಚರಿಸಿದ ಟ್ರಂಪ್‌

ಅಮೆರಿಕಾವು ಅತ್ಯಂತ ಸ್ವಚ್ಚವಾಗಿದೆ. ರಷ್ಯಾ, ಚೀನಾ ಮತ್ತು ಭಾರತದಂತಹ ರಾಷ್ಟ್ರಗಳು ಸ್ವಚ್ಚವಾಗಿಲ್ಲ. ಅದರೆ, ಬೈಡೆನ್‌ ಆಡಳಿತವು ಪ್ಯಾರೀಸ್‌ ಒಪ್ಪಂದಕ್ಕೆ ಪುನರ್‌ ಸೇರ್ಪಡೆಯಾಗಿದ್ದು, ಅಮೆರಿಕಾವನ್ನು ಹಾಳು ಮಾಡುತ್ತಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಜನವರಿ 20 ರಂದು ಶ್ವೇತಭವನದಿಂದ ಹೊರಬಂದ ನಂತರ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಟ್ರಂಪ್‌, “ಬೈಡೆನ್ ಅವರ ಒಂದು ತಿಂಗಳ‌ ಆಡಳಿತವು ಯುನೈಟೆಡ್ ಸ್ಟೇಟ್ಸ್ ಅನ್ನು ಅತ್ಯಂತ ಅನ್ಯಾಯಕ್ಕೆ ದೂಡಿದೆ. ಅಲ್ಲದೆ, ಪ್ಯಾರೀಸ್‌ ಒಪ್ಪಂದಕ್ಕೆ ಮರಳಿದೆ. ಇದು ಅತ್ಯಂತ ಅಪಾಯಕಾರಿಯಾದದ್ದು” ಎಂದು ಅವರು ನೂತನ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ನಮ್ಮಲ್ಲಿ ಸ್ವಚ್ಛವಾದ ಗಾಳಿ ಮತ್ತು ಸ್ವಚ್ಛವಾದ ನೀರು ಇದೆ… ಮತ್ತು ನಾವು ಸ್ವಚ್ಚವಾಗಿರುವಾಗ ಪ್ಯಾರೀಸ್‌ ಒಪ್ಪಂದವು ನಮಗೆ ಏನು ಮಾಡುತ್ತದೆ. ಆದರೆ ಚೀನಾ ಸ್ವಚ್ಚವಾಗಿಲ್ಲ ಮತ್ತು ರಷ್ಯಾ ಸ್ವಚ್ಚವಾಗಿಲ್ಲ ಮತ್ತು ಭಾರತವೂ ಸ್ವಚ್ಚವಾಗಿಲ್ಲ. ಆದ್ದರಿಂದ ಅವರು ಹೊಗೆಯನ್ನು ಸುರಿಯುತ್ತಿದ್ದಾರೆ. ಜಗತ್ತು ಒಂದು ಸಣ್ಣದು. ಅದು ಬ್ರಹ್ಮಾಂಡದ ಒಂದು ತುಣುಕು ಎಂದು ನಿಮಗೆ ತಿಳಿದಿದೆ. ನಾವು ಎಲ್ಲವನ್ನೂ ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ”ಎಂದು ಟ್ರಂಪ್ ಹೇಳಿದ್ದಾರೆ.

ಈ ಹಿಂದೆ ಚೀನಾ, ಭಾರತ ಮತ್ತು ರಷ್ಯಾವನ್ನು ಮಾಲಿನ್ಯದ ವಿಚಾರವಾಗಿ ಟ್ರಂಪ್ ಟೀಕಿಸಿದ್ದರು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬೈಡೆನ್‌ ವಿರುದ್ದದ ಚರ್ಚೆಯಲ್ಲಿ ಮಾತನಾಡಿದ್ದ ಅವರು, “ಚೀನಾ ನೋಡಿ, ರಷ್ಯಾವನ್ನು ನೋಡಿ. ಭಾರತವನ್ನು ನೋಡಿ ಅವೆಲ್ಲವೂ ಹೊಸಲು. ಅಲ್ಲಿನ ಗಾಳಿಯೂ ಕೊಳಕಾಗಿದೆ”ಎಂದು ಹೇಳಿದ್ದರು.

ಕೆಲವು ದಿನಗಳ ಹಿಂದೆ ಉತ್ತರ ಕೆರೊಲಿನಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಅವರು, ಚೀನಾ, ರಷ್ಯಾ ಮತ್ತು ಭಾರತದಂತಹ ದೇಶಗಳು ಜಾಗತಿಕ ವಾಯುಮಾಲಿನ್ಯಕ್ಕೆ ಕಾರಣವೆಂದು ದೂಷಿಸಿದ್ದರು ಮತ್ತು ತಮ್ಮ ದೇಶವು ಅತ್ಯುತ್ತಮ ಪರಿಸರವನ್ನು ಹೊಂದಿದೆ ಎಂದು ಹೇಳಿಕೊಂಡಿದ್ದರು.

ಚೀನಾ ವಿಶ್ವದ ಅತಿದೊಡ್ಡ ಇಂಗಾಲ ಹೊರಸೂಸುವಿಕೆಯನ್ನು ಹೊಂದಿದೆ. ಯುಎಸ್, ಭಾರತ ಮತ್ತು ಇಯು ನಂತರದ ಸ್ಥಾನದಲ್ಲಿವೆ.

ಇದನ್ನೂ ಓದಿ: ‘ಭಾರತವನ್ನು ನೋಡಿ, ಅದು ಹೊಲಸು, ಅಲ್ಲಿನ ಗಾಳಿಯು ಹೊಲಸು’: ಡೊನಾಲ್ಡ್‌ ಟ್ರಂಪ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಭಾರತ-ಚೀನಾ-ರಷ್ಯಾ ಕೊಳಕು ರಾಷ್ಟ್ರಗಳು: ಪುನರುಚ್ಚರಿಸಿದ ಟ್ರಂಪ್‌

  • March 4, 2021 at 7:18 pm
    Permalink

    howdy mulaka yivane huchchanagirabekaste; allave matte!

    Reply

Leave a Reply

Your email address will not be published.

Verified by MonsterInsights