ಕುಡುಕ ಗಂಡನಿಂದ ಹೆಂಡತಿ ಕೊಲೆ : ಪತ್ನಿ ಮೈಮೇಲಿತ್ತು ಬೆಲ್ಟ್ ಬಾರುಗಳು..!

ಕಂಠಪೂರ್ತಿ ಕುಡಿದು ಬಂದ ಗಂಡ ಹೆಂಡತಿಯನ್ನು ಲೆದರ್ ಬೆಲ್ಟ್ ನಿಂದ ಹೊಡೆದು ಸಾಯಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಪೋಲಿ ಗ್ರಾಮದ ನಿವಾಸಿ ರಾಕೇಶ್ ಮೀನಾ(35) ತನ್ನ ಪತ್ನಿ ವಿಮ್ಲಾಬಾಯಿ (31) ಳನ್ನು ಹೊಡೆದು ಕೊಂದಿದ್ದಾನೆ. ರಾಕೇಶ್ ಮದ್ಯವೆಸನಿಯಾಗಿದ್ದ. ಪದೇ ಪದೇ ಕುಡಿದು ಹೆಂಡತಿ ಜೊತೆ ಜಗಳವಾಡುತ್ತಿದ್ದನು. ಆದರೆ ಈ ಜಗಳ ವಿಕೋಪಕ್ಕೆ ಹೋಗಿ ಬೆಲ್ಟ್ ನಿಂದ ಪಾಪಿ ಪತಿ ಪತ್ನಿಯನ್ನು ಥಳಿಸಿದ್ದಾನೆ. ಆಗ ಪತ್ನಿ ಪ್ರಜ್ಞೆ ತಪ್ಪಿದ್ದಾಳೆ.

ಗಂಭೀರ ಸ್ಥಿತಿಯಲ್ಲಿ ಗಾಯಗೊಂಡ ಪತ್ನಿಯನ್ನು ಹಲಾವರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಕೆಗೆ ಚಿಕಿತ್ಸೆ ಫಲಕಾರಿಯಾಗಿದೆ ಭಾನುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ನಿಧನಳಾಗಿದ್ದಾಳೆ.

ಮಹಿಳೆಯ ಪೋಷಕರು ಎಕ್ಲೆರಾ ಪೊಲೀಸ್ ಠಾಣೆಯಲ್ಲಿ ರಾಕೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಹೆಂಡತಿಯನ್ನು ಹೊಡೆದು ಸಾಯಿಸಿದ ಆರೋಪದ ಮೇಲೆ ಹಲಾವರ್ ಪೊಲೀಸರು ರಾಕೇಶ್ ನನ್ನು ಭಾನುವಾರ ರಾತ್ರಿ ಬಂಧಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights