ಫ್ಯಾಕ್ಟ್‌ಚೆಕ್: ಹತ್ಯೆಯಾದ ಗಾಯಕ ಸಿಧು ಮೂಸ್ ವಾಲಾ ಅವರ ಫೋಟೊವನ್ನು ಪ್ರಧಾನಿ ಮೋದಿ ಪ್ರದರ್ಶಿಸಿದ್ದು ನಿಜವೇ ?

ಪಂಜಾಬಿ ಗಾಯಕ ದಿವಂಗತ ಸಿಧು ಮೂಸ್ ವಾಲಾ ಅವರ ಚಿತ್ರವಿರುವ ಫೋಟೋ ಫ್ರೇಮ್ ಅನ್ನು ಪ್ರಧಾನಿ ನರೇಂದ್ರ ಮೋದಿ ಹಿಡಿದಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಜಾಧವ್ ಎಂಬಾತನನ್ನು ಮಹಾರಾಷ್ಟ್ರದ ಪುಣೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. ಈಗ ಪೋಸ್ಟ್‌ನಲ್ಲಿ ಗಾಯಕ ಸಿಧು ಮೂಸ್ ವಾಲಾ ಅವರ ಫೋಟೊವನ್ನು King Of Punjabi Industry ಎಂಬ ಬಿರುದಿನೊಂದಿಗೆ ಪ್ರಧಾನಿ ಮೋದಿ ಪ್ರದರ್ಶಿಸುತ್ತಿದ್ದಾರೆ  ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಸರ್ಚ್‌ ಮಾಡಿದಾಗ, 05 ನವೆಂಬರ್ 2015 ರಂದು ಭಾರತದ ಪ್ರಧಾನ ಮಂತ್ರಿಯವರ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮೂಲ ಚಿತ್ರವನ್ನು ಕಂಡುಕೊಂಡಿದ್ದೇವೆ. ಮೂಲ ಫೋಟೋದಲ್ಲಿ ಅಂದಿನ ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್ ಮತ್ತು  ಪ್ರಧಾನಿ ಮೋದಿಯವರನ್ನೂ ಸಹ ನೋಡಬಹುದಾಗಿದೆ. ವರದಿಯ ಪ್ರಕಾರ, 05 ನವೆಂಬರ್ 2015 ರಂದು ನವದೆಹಲಿಯಲ್ಲಿ ನಡೆದ ಈ ಸಮಾರಂಭದಲ್ಲಿ ಕೇಂದ್ರ ಸರ್ಕಾರ ಕೆಲವು ಯೋಜನೆಗಳನ್ನು ಘೋಷಿಸುವ ಉದ್ದೇಶಗಳನ್ನು ಹೊಂದಿತ್ತು ಎಂದು ಉಲ್ಲೇಖಿಸಲಾಗಿದೆ.


ಅದೇ ಚಿತ್ರವನ್ನು ಮೋದಿಯವರು ಅದೇ ದಿನ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಅಶೋಕ ಚಕ್ರವನ್ನು ಹೊಂದಿರುವ ಭಾರತೀಯ ಚಿನ್ನದ ನಾಣ್ಯಗಳ ಬಿಡುಗಡೆ” ಒಂದು ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ. ಈ ಘಟನೆಯ ಲೈವ್ ಸ್ಟ್ರೀಮ್ ವೀಡಿಯೊವನ್ನು ಇಲ್ಲಿ ನೋಡಬಹುದು.

ಫೋರ್ಬ್ಸ್ ಇಂಡಿಯಾ ತನ್ನ ಲೇಖನದಲ್ಲಿ, “ಆಮದು ಹೊರೆಗಳನ್ನು ಕಡಿಮೆ ಮಾಡಲು ಸರ್ಕಾರವು ಚಿನ್ನದ ಯೋಜನೆಗಳನ್ನು ಪ್ರಾರಂಭಿಸುತ್ತಿದೆ, ಇದರ ಉಪಯುಕ್ತತೆ ?” ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಮಾಡಿದೆ. “ಪ್ರಧಾನಿ ನರೇಂದ್ರ ಮೋದಿ ಅವರು ನವ ದೆಹಲಿಯಲ್ಲಿ 5 ನವೆಂಬರ್ 2105 ರಂದು ಚಿನ್ನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಪ್ರಾರಂಭಿಸಿದರು ಮತ್ತು ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಚಿನ್ನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಮಹಿಳೆಯರನ್ನು ಪ್ರೇರೇಪಿಸುವ ಆಲೋಚನೆಯಾಗಿದೆ” ಎಂದು ಹೇಳಿದರು. ಎಂದು ವರದಿಯಾಗಿದೆ.

ಚೌಕಟ್ಟನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ವಿವಿಧ ಭಾರತೀಯ ಚಿನ್ನದ ನಾಣ್ಯಗಳನ್ನು ತೋರಿಸುತ್ತದೆ. ಇದಲ್ಲದೆ, ಸಿಧು ಮೂಸ್ ವಾಲಾ ಅವರು 29 ಮೇ 2022 ರಂದು ನಿಧನರಾದರು, ಆದರೆ ಮೋದಿಯವರ ಈ ಚಿತ್ರವನ್ನು 2015 ರಲ್ಲಿ ತೆಗೆದುಕೊಳ್ಳಲಾಗಿದೆ.


ಒಟ್ಟಾರೆಯಾಗಿ ಹೇಳುವುದಾದರೆ, ಸಿಧು ಮೂಸ್ ವಾಲಾ ಅವರ ಫೋಟೋ ಫ್ರೇಮ್ ಅನ್ನು ಪ್ರಧಾನಿ ಮೋದಿಯ ಹಿಡಿದಿದ್ದಾರೆ ಎನ್ನುವಂತೆ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರ ರೂಪಿಸಿದ್ದ ಕೆಲವು ಚಿನ್ನದ ಯೋಜನೆಗಳನ್ನು ಉದ್ಘಾಟಿಸಿದ ಫೋಟೋವನ್ನು ತಪ್ಪಾಗಿ ಹಂಚಿಕೊಂಡಿದ್ದಾರೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: Google Pay ಬಳಸದಂತೆ RBI ಸೂಚನೆ ನೀಡಿದಿಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights