ಕೊರೊನಾ ಸೋಂಕಿತರ ಶವಗಳನ್ನು ಕಸದ ರೀತಿಯಲ್ಲಿ ಹೂಳಿದ ಆರೋಗ್ಯ ಇಲಾಖೆ: ಅಮಾನವೀಯ ವಿಡಿಯೋ ವೈರಲ್‌!

ಕೊರೊನಾ ಸೋಂಕಿತರು ಸಾವನ್ನಪ್ಪಿದರೆ, ಅವರ ಶವವನ್ನು ಕುಟುಂಬಸ್ಥರಿಗೆ ಮುಟ್ಟಲು ಬಿಡದೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳೇ ಸಂಸ್ಕಾರ ಮಾಡುತ್ತಾರೆ. ಆದರೆ, ಸೋಂಕಿತರ ಕುಟುಂಬಸ್ಥರು ಸೂಚಿಸಿದ ಜಾಗದಲ್ಲಿ ಶವ ಸಂಸ್ಕಾರವನ್ನು ಮಾಡುವಷ್ಟು ಮಾನವೀಯತೆ ಇದೆ ಎಂದು ಹೇಳಲಾಗುತ್ತಿತ್ತು.

ಆದರೆ, ನಿನ್ನೆ ಬಳ್ಳಾರಿಯಲ್ಲಿ ಸಾವನ್ನಪ್ಪಿದ 09 ಜನ ಕೊರೊನಾ ಸೋಂಕಿತರ ಶವವನ್ನು ಒಂದೇ ಜಾಗದಲ್ಲಿ ಕಸದ ರಾಶಿಯನ್ನು ಎಸೆಯುವ ಹಾಗೆ ಎಸೆದು ಹೂಳಲಾಗಿದೆ. ಸೋಂಕಿತರ ಕುಟುಂಬಸ್ಥರ ಮಾತಿಗೆ ಮಣೆ ಹಾಕದ ಬಳ್ಳಾರಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಸದಂತೆ ಎಸೆದು ಹೂಳುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ.

ಸೋಂಕಿತರ ಶವಗಳನ್ನು ಬಳ್ಳಾರಿಯಿಂದ ನಗರದ ಹೊರ ವಲಯಕ್ಕೆ ಕೊಂಡೊಯ್ದ ಆರೋಗ್ಯ ಸಿಬ್ಬಂದಿ, ಶವಗಳನ್ನು ಒಂದೇ ಗುಂಡಿಯಲ್ಲಿ ಎಸೆದು ಮಣ್ಣು ಮುಚ್ಚಿದ್ದಾರೆ. ಶವಗಳನ್ನು ಒಟ್ಟಿಗೆ ಸಂಸ್ಕಾರ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ.

ವಿಡಿಯೋ ನೋಡಿ: 

ಕೊರೊನಾ ಸೋಂಕಿನಿಂದ ಸತ್ತೆರೆ, ಅವರ ಶವಗಳನ್ನು ಹೇಗೆ ಸವ ಸಂಸ್ಕಾರ ಮಾಡುತ್ತಾರೆ ಎನ್ನುವುದುಕ್ಕೆ ಇದೊಂದು ವಿಡಿಯೋ ಸಾಕ್ಷಿಯಾಗಿದೆ. ವಿಡಿಯೋ ನೋಡಿದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಅಮಾನವಿಯವಾಗಿ ಹೆಣೆಗಳನ್ನು ಬಿಸಾಕಿದ ಆರೋಗ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಬಳ್ಳಾರಿ ಜಿಲ್ಲೆಯಲ್ಲಿಯೇ ಇಂದೂ ಸಹ ಮತ್ತೆ ಐವರು ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ಬಳ್ಳಾರಿ ಜಿಲ್ಲಾಧಿಕಾರಿ ಅಧಿಕೃತವಾಗಿ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಇಂದಿಗೆ  ಸಾವಿನ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights