ನಾಡದ್ರೋಹಿ ಘೋಷಣೆ ಕೂಗಿ ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರಿಂದ ಪುಂಡಾಟ!
ನಾಡದ್ರೋಹಿ ಘೋಷಣೆ ಕೂಗೂವ ಮೂಲಕ ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ನಿನ್ನೆ ಹುತಾತ್ಮ ದಿನಾಚರಣೆ ವೇಳೆ ನೂರಾರು ಜನರು ನೆರೆದಿದ್ದರು. ಈ ವೇಳೆ ‘ ಬೆಳಗಾವಿ ಮಹಾರಾಷ್ಟ್ರ ಸೇರಲೇಬೇಕು’ ಎಂಬ ಘೋಷಣೆಗಳು ಕೇಳಿ ಬಂದಿವೆ.
ಇಂತಹ ನಾಡದ್ರೋಹಿ ಘೋಷಣೆಗಳ ವಿರುದ್ಧ ಕನ್ನಡಪರ ಸಂಘಟನೆಗಳು ಕಿಡಿಕಾರಿದ್ದು ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಇದಕ್ಕೆ ಪುಷ್ಠಿ ನೀಡುವಂತ ಸಂದೇಶವನ್ನು ಟ್ವೀಟ್ ಮಾಡಿದ್ದು ಕನ್ನಡಿಕರನ್ನು ಕೆಣಕಿಸಿದೆ. ಬೆಳಗಾವಿಯಲ್ಲಿರುವ ನಾಡ ದ್ರೋಹಿಗಳು ಖಾಕಿ ಎದುರು ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ದೇಶದ್ರೋಹಿ ಘೋಷಣೆ ಕೂಗಿದ್ದು ಮತ್ತೊಂದು ಕಡೆ ಉದ್ದವ್ ಠಾಕ್ರೆ ಉದ್ದಟನದ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಸಿದ ಸಿಎಂ ಯಡಿಯೂರಪ್ಪ, “ಕರ್ನಾಟಕದಲ್ಲಿ ಇರುವ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ.ಬಿಎಸ್ ವೈ ಟ್ವೀಟ್ ಮಾಡಿದ್ದು, ಶಾಂತವಾಗಿದ್ದ ಕರ್ನಾಟಕದಲ್ಲಿ ಗಡಿ ವಿಚಾರವನ್ನು ಮತ್ತೆ ತೆಗೆದಿದ್ದಾರೆ. ಇದು ಭಾರತೀಯರ ಸಂಪ್ರದಾಯವಲ್ಲ. ಸೌಹಾರ್ದಯುತ ವಾತಾವರಣವನ್ನು ಕೆಡಿಸುವಂತ ಕೆಲಸ ಉದ್ಧವ್ ಠಾಕ್ರೆ ಮಾಡಬಾರದು. ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಈರೀತಿ ಮಾಡಬಾರದು. ದೇಶದ ಒಕ್ಕೂಟದ ವ್ಯವಸ್ಥೆ ವಿರುದ್ಧ ಈ ಸಂದೇಶವಿದೆ. ಇದನ್ನು ನಾನು ಖಂಡಿಸುತ್ತೆನೆ” ಎಂದು ಸುದೀರ್ಘವಾಗಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ” ನೆಲ, ಜಲ, ಭಾಷೆ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ವಿಚಾರದಲ್ಲಿ ರಾಜಿಯೂ ಇಲ್ಲ ರಾಜಕೀಯವೂ ಇಲ್ಲ. ಶಿವ ಸೇನೆಯಲ್ಲಿಲ್ಲ ಉದ್ದವ್ ಇಲ್ಲ ಸಿಎಂ ಸ್ಥಾನದಲ್ಲಿದ್ದೀರಾ, ನೋಡಿಕೊಂಡು ಮಾತನಾಡಬೇಕು. ಜವಬ್ದಾರಿಯುತ ಸಿಎಂ ಇದನ್ನ ಮರಿಯಬೇಡಿ. ಸಹನೆ, ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟಂತವರು ಕನ್ನಡಿಕರು ನಾವು ಇಂತಹವರ ಜೊತೆ ಮಾತನಾಡುವಾಗ ಎಚ್ಚರವಾಗಿರಬೇಕು” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸಚಿವ ಬಸವರಾಜ್ ಬೊಮ್ಮಾಯಿ ಮಾಧ್ಯಮದ ಮುಂದೆ ಮಾತನಾಡಿ, ” ಕರ್ನಾಟಕದ ಭೂಮಿಯನ್ನು ಒಂದು ಇಂಚು ಕೂಡ ಬಿಟ್ಟುಕೂಡ ಬಿಟ್ಟು ಕೊಡುವುದಿಲ್ಲ. ರಾಜಕೀಯ ತೆವಲನ್ನು ತೀರಿಸಿಕೊಳ್ಳಲು ಹೀಗೆ ಹೇಳಿದ್ದಾರೆ. ಅನ್ಯುನ್ಯತೆ ಇದ್ದವರನ್ನು ಕದಡಲು ಈ ರೀತಿ ಮಾಡುತ್ತಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.