ಗಡಿ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದು ಉದ್ಧವ್ ಟ್ವೀಟ್ : ಬೆಳಗಾವಿಯಲ್ಲಿ ಪ್ರತಿಭಟನೆ!

ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ಕ್ಯಾತೆ ತೆಗೆದಿದ್ದು, ಶಾಂತವಾಗಿದ್ದ ರಾಜ್ಯಲ್ಲಿ ಮತ್ತೆ ಕಿಡಿ ಹೊತ್ತಿಸಿದ್ದಾರೆ. ಉದ್ದವ್ ಠಾಕ್ರೆ ಟ್ವೀಟ್ ವಿರೋಧಿಸಿ ಬೆಳಗಾವಿ ಚೆನ್ನಮ್ಮ ಸರ್ಕಲ್ ನಲ್ಲಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಉಡಾಫೆ ಟ್ವಿಟ್ ಗೆ ಕನ್ನಡಿಗರು ಕೆಂಡವಾಗಿದ್ದಾರೆ. ‘ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವವರೆಗೂ ಹೋರಾಡೋಣ. ಬೆಳಗಾವಿ ಕರ್ನಾಟಕ ಆಕ್ರಮಿತ ಪ್ರದೇಶ’ ಎಂದು ಟ್ವೀಟ್ ಮಾಡಿದ್ದಾರೆ.

ಉದ್ಧವ್ ಠಾಕ್ರೆ ಟ್ವೀಟ್ ಗೆ ಪ್ರತಿಕ್ರಿಯಿಸಿದ ರಾಜ್ಯದ ಸಿಎಂ ಯಡಿಯೂರಪ್ಪ, ” ಕರ್ನಾಟಕದಲ್ಲಿ ಇರುವ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ.ಬಿಎಸ್ ವೈ ಟ್ವೀಟ್ ಮಾಡಿದ್ದು, ಶಾಂತವಾಗಿದ್ದ ಕರ್ನಾಟಕದಲ್ಲಿ ಗಡಿ ವಿಚಾರವನ್ನು ಮತ್ತೆ ತೆಗೆದಿದ್ದಾರೆ. ಇದು ಭಾರತೀಯರ ಸಂಪ್ರದಾಯವಲ್ಲ. ಸೌಹಾರ್ದಯುತ ವಾತಾವರಣವನ್ನು ಕೆಡಿಸುವಂತ ಕೆಲಸ ಉದ್ಧವ್ ಠಾಕ್ರೆ ಮಾಡಬಾರದು. ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಈರೀತಿ ಮಾಡಬಾರದು. ದೇಶದ ಒಕ್ಕೂಟದ ವ್ಯವಸ್ಥೆ ವಿರುದ್ಧ ಈ ಸಂದೇಶವಿದೆ. ಇದನ್ನು ನಾನು ಖಂಡಿಸುತ್ತೆನೆ” ಎಂದು ಸುದೀರ್ಘವಾಗಿ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ” ನೆಲ, ಜಲ, ಭಾಷೆ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ವಿಚಾರದಲ್ಲಿ ರಾಜಿಯೂ ಇಲ್ಲ ರಾಜಕೀಯವೂ ಇಲ್ಲ. ಶಿವ ಸೇನೆಯಲ್ಲಿಲ್ಲ ಉದ್ದವ್ ಇಲ್ಲ ಸಿಎಂ ಸ್ಥಾನದಲ್ಲಿದ್ದೀರಾ, ನೋಡಿಕೊಂಡು ಮಾತನಾಡಬೇಕು. ಜವಬ್ದಾರಿಯುತ ಸಿಎಂ ಇದನ್ನ ಮರಿಯಬೇಡಿ. ಸಹನೆ, ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟಂತವರು ಕನ್ನಡಿಕರು ನಾವು ಇಂತಹವರ ಜೊತೆ ಮಾತನಾಡುವಾಗ ಎಚ್ಚರವಾಗಿರಬೇಕು” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಚಿವ ಬಸವರಾಜ್ ಬೊಮ್ಮಾಯಿ ಮಾಧ್ಯಮದ ಮುಂದೆ ಮಾತನಾಡಿ, ” ಕರ್ನಾಟಕದ ಭೂಮಿಯನ್ನು ಒಂದು ಇಂಚು ಕೂಡ ಬಿಟ್ಟುಕೂಡ ಬಿಟ್ಟು ಕೊಡುವುದಿಲ್ಲ. ರಾಜಕೀಯ ತೆವಲನ್ನು ತೀರಿಸಿಕೊಳ್ಳಲು ಹೀಗೆ ಹೇಳಿದ್ದಾರೆ. ಅನ್ಯುನ್ಯತೆ ಇದ್ದವರನ್ನು ಕದಡಲು ಈ ರೀತಿ ಮಾಡುತ್ತಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights