ಸಿರಾ ಉಪಚುನಾವಣೆ ಟಿಕೆಟ್‌ಗೆ ಜೆಡಿಎಸ್‌ನಲ್ಲಿ‌ ಪೈಪೋಟಿ; ಸತ್ಯಪ್ರಕಾಶ್​ಗೆ ಸಿಗುತ್ತಾ ಟಿಕೆಟ್‌?

ಸಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಬಿ ಸತ್ಯನಾರಾಯಣ್‌ ಅವರು ಸಾವನ್ನಪ್ಪಿದ ನಂತರ, ಉಪಚುನಾವಣೆಗಾಗಿ ಕಸರತ್ತು ನಡೆಯುತ್ತಿದೆ. ಸದ್ಯ ಇನ್ನೂ ಉಪಚುನಾವಣೆ ಡೇಟ್‌ ಫಿಕ್ಸ್‌ ಆಗಿಲ್ಲದಿದ್ದರೂ, ಚುನಾವಣೆಗಾಗಿ ಮೂರು ಪಕ್ಷಗಳು ತಯಾರಿ ನಡೆಸುತ್ತಿವೆ. ಅದರಲ್ಲೂ ಜೆಡಿಎಸ್‌ನ ಹಾಲಿ ಶಾಸಕರೇ ಸಾವಿನ್ನಪ್ಪಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ.

ಕೆಲವು ದಿನಗಳ ಹಿಂದೆ ನಿಖಿಲ್‌ ಕುಮಾರಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹೆಚ್ಚಾಗಿತ್ತು. ತಾನು ಖಾಲಿ ಸೀಟ್‌ಗೆ ಜೋತುಬೀಳುವವನಲ್ಲ ಎಂದಿದ್ದ ನಿಖಿಲ್‌, ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದರು. ಇದಾದ ನಂತರ ಜೆಡಿಎಸ್‌ ಪಾಳಯದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಏರುತ್ತಿದೆ.

ಸದ್ಯ, ಬಿ.ಸತ್ಯನಾರಾಯಣ್ ಅವರ ಪುತ್ರ ಸತ್ಯಪ್ರಕಾಶ್, ಜಿಪಂ ಅಧ್ಯಕ್ಷೆ ಲತಾ ಅವರ ಪತಿ ಕಲ್ಕೆರೆ ರವಿ ಕುಮಾರ್, ಸಿ.ಆರ್ ಉಮೇಶ್ ಅವರು ಸ್ಪರ್ಧಿಸಲು ಟಿಕೆಟ್‌ಗಾಗಿ ಆಕ್ಷಾಂಕ್ಷೆ ವ್ಯಕ್ತಪಡಿಸಿದ್ದಾರೆ.

ಇವರಲ್ಲಿ ಸತ್ಯಪ್ರಕಾಶ್‌ಗೆ ಟಿಕೆಟ್‌ಸಿಗುವ ಸಾಧ್ಯತೆಗಳು ಹೇರಳವಾಗಿವೆ. ಬಿ ಸತ್ಯನಾಯರಾಣ್‌ ಅವರು ನಿಧನರಾದ ಸಂದರ್ಭದಲ್ಲಿ ಸಿರಾಗೆ ಭೇಟಿ ನೀಡಿದ್ದ ಜೆಡಿಎಸ್‌ ವರಿಷ್ಠ ಹೆಚ್‌ಡಿ ದೇವೇಗೌಡರು ಅವರ ಕುಟುಂಬದ ಕೈಬಿಡುವುದಿಲ್ಲ ಎಂದಿದ್ದರು. ಅಲ್ಲದೆ, ಕಳೆದವಾರ ತುರುವೇಕರೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕುಮಾರಸ್ವಾಮಿಯವರು ಇದೇ ಮಾತನ್ನು ಮತ್ತೆ ನೆನಪಿಸಿದ್ದರು.

ಅಲ್ಲದೆ, ಸತ್ಯನಾರಾಯಣ್ ಅವರ ಪುತ್ರ ಸತ್ಯಪ್ರಕಾಶ್​ಗೆ ರಾಜಕೀಯದ ಅನುಭವವಿದೆ. ತಾಪಂ ಸದಸ್ಯ, ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಮೇಲಾಗಿ ಕಾರ್ಯಕರ್ತರ ಜೊತೆಗೆ ಒಡನಾಟ ಉತ್ತಮವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ದೇವೇಗೌಡರ ಮೊಮ್ಮಕ್ಕಳು, ಜೆಡಿಎಸ್​ನ ಭವಿಷ್ಯದ ವರಿಷ್ಠರುಗಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರುಗಳೊಂದಿಗೆ ಭವಿಷ್ಯದಲ್ಲಿ ಪಕ್ಷ ಸಂಘಟನೆಗೆ ಸಾಥ್ ನೀಡಲು ಯುವ ನಾಯಕರುಗಳ ಅಗತ್ಯ ಜೆಡಿಎಸ್​ಗೆ ಇದೆ. ಇದೆಲ್ಲದರ ಜೊತೆಗೆ ಅನುಕಂಪದ ಅಲೆಯೂ ಕ್ಷೇತ್ರದಲ್ಲಿ ಸತ್ಯನಾರಾಯಣ್‌ಗೆ ಸಾಧನವಾಗಬಹುದು ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.


ಇದನ್ನೂ ಓದಿ:  GST ಪರಿಹಾರಕ್ಕೆ RBIನಿಂದ ಸಾಲ ಪಡೆಯಲು ಬಿಎಸ್‌ವೈ ನಿರ್ಧಾರ: ಸರ್ಕಾರದ ವಿರುದ್ಧ ಆಕ್ರೋಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights