GST ಪರಿಹಾರಕ್ಕೆ RBIನಿಂದ ಸಾಲ ಪಡೆಯಲು ಬಿಎಸ್‌ವೈ ನಿರ್ಧಾರ: ಸರ್ಕಾರದ ವಿರುದ್ಧ ಆಕ್ರೋಶ!

ದೇಶದ ಜಿಡಿಪಿ ಶೇ.23.9ರಷ್ಟು ಕುಸಿತ ಕಂಡಿದೆ. ಆರ್ಥಿಕ ಕುಸಿತವು ದೇವರ ಆಟ ಎಂದಿರುವ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಜಿಎಸ್‌ಟಿ ಪಾಲನ್ನು ನೀಡಲಾಗುವುದಿಲ್ಲ ಎಂದು ಹೇಳಿದ್ದು, ಪರಿಹಾರದ ಹಣಕ್ಕಾಗಿ ರಾಜ್ಯಗಳು RBIನಿಂದ ಸಾಲದ ರೂಪದಲ್ಲಿ ಹಣ ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹಳಿದೆ. ಕೇಂದ್ರ ಸರ್ಕಾರದ ಸಲಹೆಯನ್ನು ಶಿರಸಾ ಪಾಲಿಸುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ ಸಾಲ ಪಡೆಯಲು ಮುಂದಾಗಿದ್ದು, ಸಾರ್ವಜನಿಕ ಟೀಕೆಗೆ ಗುರಿಯಾಗದೆ.

ಕರ್ನಾಟಕವು 18, 289 ಕೋಟಿ ರೂ.ಜಿಎಸ್‌ಟಿ ಪರಿಹಾರಕ್ಕೆ ಅರ್ಹವಾಗಿದೆ. ಇದರಲ್ಲಿ 6,969 ಕೋಟಿ ರೂ.ಸೆಸ್ ನಿಂದ ಬರಲಿದೆ. ಉಳಿದ 11,324 ಕೋಟಿ ರೂಪಾಯಿಗಳನ್ನು ವಿಶೇಷ ವಿಂಡೋ ಮೂಲಕ ಆರ್‌ಬಿಐನಿಂದ ಸಾಲ ಪಡೆಯಲು ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದು, ಅದರಂತೆ ಬಿಎಸ್‌ವೈ ನೇತೃತ್ವದ ರಾಜ್ಯ ಸರ್ಕಾರ ಆರ್‌ಬಿಐನಿಂದ ಸಾಲ ಪಡೆದುಕೊಳ್ಳಲು ಮುಂದಾಗಿದೆ.

ಅಲ್ಲದೆ, ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು, ರಾಜ್ಯಗಳಿಗೆ ಬರಬೇಕಿರುವ ಜಿಎಸ್‌ಟಿ ಪರಿಹಾರದ ಪಾಲಿಗಾಗಿ ಕೇಂದ್ರವೇ ಆರ್‌ಬಿಐನಿಂದ ಸಾಲ ಪಡೆದು ರಾಜ್ಯಗಳಿಗೆ ಹಂಚಲಿ, ಸಾಲದ ಹೊರೆಯನ್ನು ಕೇಂದ್ರವೇ ಹೊತ್ತುಕೊಳ್ಳಲಿ ಎಂದು ಒತ್ತಾಯಿಸಿವೆ. ಜಿಎಸ್‌ಟಿ ಪಾಲನ್ನು ಭರಿಸಬೇಕಾದ್ದು ಕೇಂದ್ರದ ಕರ್ತವ್ಯ ಅದಕ್ಕಾಗಿ ಕೇಂದ್ರವೇ ಸಾಲ ಮಾಡಲಿ, ರಾಜ್ಯಗಳು ಜಿಎಸ್‌ಟಿ ಪಾಲು ಕಳೆದುಕೊಳ್ಳುವುದಲ್ಲದೇ, ಸಾಲವನ್ನೂ ಹೊರಲು ಸಾಧ್ಯವಿಲ್ಲ ಎಂದು ಕೇಂದ್ರದ ಮಾತಿಗೆ ವಿರೋಧ ವ್ಯಕ್ತಪಡಿಸಿವೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕ ಸರ್ಕಾರ ಆರ್‌ಬಿಐನಿಂದ ತಾನೇ ಸಾಲ ಪಡೆಯಲು ನಿರ್ಧರಿದೆ.

ಇದು ಜನರ ಟೀಕೆಗೆ ಗುರಿಯಾಗಿದೆ. ಮಾನ್ಯ ಮುಖ್ಯಮಂತ್ರಿಗಳಾದ BS Yediyurappa ನವರೇ, ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲನ್ನು ಕೊಡದೇ ಮೋಸ ಮಾಡಿದೆ. ಇದನ್ನು ಕರ್ನಾಟಕ ಹೊರತುಪಡಿಸಿ ದಕ್ಷಿಣದ ಎಲ್ಲಾ ರಾಜ್ಯಗಳು ಕೇಂದ್ರ ಸರ್ಕಾರವೇ ಆರ್‌ಬಿಐನಿಂದ ಸಾಲ ಪಡೆದು ರಾಜ್ಯಗಳಿಗೆ ಹಂಚಲಿ ಎಂದು ಪಟ್ಟು ಹಿಡಿದಿವೆ. ತಾವು ಮಾತ್ರ ನಮ್ಮ ರಾಜ್ಯಕ್ಕೆ ಬರಬೇಕಿದ್ದ ಜಿಎಸ್‌ಟಿ ಬಾಬ್ತನ್ನು ಸಾಲದ ಮೂಲಕ ಪಡೆಯಲು ಹೊರಟಿದ್ದೀರಿ. ಈ ಮೂಲಕ ರಾಜ್ಯದ ಜನತೆಯ ತಲೆಗೆ ಸಾಲದ ಶೂಲೆ ಏರಿಸಿ, ರಾಜ್ಯವನ್ನು ದಿವಾಳಿ ಮಾಡಲು ಹೊರಟಿದ್ದೀರಿ. ನಿಮಗೆ ಸಾಲ ಪಡೆಯಲೇಬೇಕಿದ್ದರೆ, ಪ್ರತೀ ವರ್ಷ ಸರಾಸರಿ 125% ಕ್ಕೂ ಹೆಚ್ಚು ಅದಾಯ ಗಳಿಸುತ್ತಿರುವ, ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯಲ್ಲಿ 93%ಕ್ಕೂ ಹೆಚ್ಚಿನ ಪಾಲು ದೇಣಿಗೆ ಪಡೆಯುವ, ಸುಮಾರು 12,000 ಕೋಟಿಗೂ ಹೆಚ್ಚಿನ ಬ್ಯಾಂಕ್ ಠೇವಣಿ ಹೊಂದಿರಬಹುದಾದ, ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷ ಬಿಜೆಪಿಯಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದುಕೊಳ್ಳಿ, ವಿತ್ತ ಸಚಿವರೂ ಬಿಜೆಪಿಯವರೇ ಆಗಿದ್ದು, ಸಾಲ ದೊರೆಯುತ್ತದೆ ಎಂದು ದರ್ಶನ್‌ ಜೈನ್‌ ಎಂಬುವವರು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳಾದ BS Yediyurappa ನವರೇ, ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲನ್ನು ಕೊಡದೇ ಮೋಸ ಮಾಡಿದೆ….

Posted by Darshan Jain on Wednesday, September 2, 2020

ರಾಜ್ಯದ 25 ಬಿಜೆಪಿ ಸಂಸದರು ಎಲ್ಲಿದ್ದಾರೆ. ಎಲ್ಲರೂ ಕಾಣೆಯಾಗಿದ್ದಾರೆ. ಜಿಎಸ್‌ಟಿ ಪರಿಹಾರದ ಹಣ ಕೇಳಲು ಅವರಲ್ಲಿ ಧೈರ್ಯವಿಲ್ಲ ಎಂದು ಹಲವರು ಟೀಕಿಸಿದ್ದಾರೆ.


ಇದನ್ನೂ ಓದಿ:  ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights