ಫ್ಯಾಕ್ಟ್‌ಚೆಕ್ : ಹಸೆಮಣೆಯಿಂದಲೇ ಪ್ರಿಯಕರನೊಂದಿಗೆ ಪರಾರಿಯಾದ ವಧು ಎಂದು ನಾಟಕೀಯ ವಿಡಿಯೊ ಹಂಚಿಕೆ

ಮನೆಯವರು ಮುದುಕನಿಗೆ ಕೊಟ್ಟು ಮದುವೆ ಮಾಡುತ್ತಾರೆ ಎಂದು ನೊಂದ ವಧುವೊಬ್ಬಳು ಹಸೆಮಣೆಯಿಂದಲೇ ತನ್ನ ಪ್ರಿಯಕರನೊಂದಿಗೆ ಪರಾರಿಯಾಗುವ ದೃಶ್ಯಗಳು ಎಂದು ಹೇಳಿಕೊಳ್ಳುವ  ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಧುವಿನ ಹಣೆಯ ಮೇಲೆ ಹುಡುಗನೊಬ್ಬ ಸಿಂಧೂರವನ್ನು ಹಚ್ಚಿ ಮದುವೆ ಮನೆಯಿಂದ ಆಕೆಯನ್ನು ಕರೆದುಕೊಂಡು ಹೋಗುತ್ತಾನೆ. ಈ ಸಂದರ್ಭದಲ್ಲಿ ವರನು ಬೇರೆಯವರೊಂದಿಗೆ ಮಾತಿನಲ್ಲಿ ತೊಡಗಿರುವಾಗ ಈ ಘಟನೆ ನಡೆದಿದೆ ಎಂದು, ‘ABP’ ನಂತಹ ಸುದ್ದಿ ವೆಬ್‌ಸೈಟ್‌ಗಳು ಸಹ ಇದೇ ರೀತಿಯ ನಿರೂಪಣೆಯೊಂದಿಗೆ ವರದಿ ಮಾಡಿವೆ. ಈ ಘಟನೆ ಎಲ್ಲಿ ನಡೆದಿದೆ ಮತ್ತು ಇದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

View this post on Instagram

 

A post shared by ABP News (@abpnewstv)

ಫ್ಯಾಕ್ಟ್‌ಚೆಕ್ :

ವಿಡಿಯೊದ ಸ್ಕ್ರೀನ್‌ಶಾಟ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 08 ಜುಲೈ 2022 ರಂದು ದಿವ್ಯಾ ವಿಕ್ರಮ್ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು ಪ್ರಕಟಿಸಲಾಗಿದೆ. ದಿವ್ಯಾ ವಿಕ್ರಮ್ ತನ್ನ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಸ್ಕ್ರಿಪ್ಟ್ ಮಾಡಿದ ನಾಟಕಗಳನ್ನು ಪ್ರಕಟಿಸುವ ವೀಡಿಯೊ ರಚನೆಕಾರರಾಗಿದ್ದಾರೆ. ದಿವ್ಯಾ ವಿಕ್ರಮ್ ಅದೇ ನಾಟಕವನ್ನು ಚಿತ್ರಿಸುವ ಮತ್ತೊಂದು ವೀಡಿಯೊವನ್ನು ಪ್ರಕಟಿಸಿದರು ಆದರೆ ವಿಭಿನ್ನ ವಧುವನ್ನು ತೋರಿಸಿದರು.

ವೀಡಿಯೊದಲ್ಲಿ ತೋರಿಸಿರುವ ನಟರು ದಿವ್ಯಾ ವಿಕ್ರಮ್ ಅವರ ಫೇಸ್‌ಬುಕ್ ಮತ್ತು ಯೂಟ್ಯೂಬ್ ಹ್ಯಾಂಡಲ್‌ಗಳಲ್ಲಿ ಪ್ರಕಟವಾದ ಹಲವಾರು ಇತರ ಸ್ಕ್ರಿಪ್ಟ್ ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇವು ಮನರಂಜನೆ ಹಾಗೂ ಜಾಗೃತಿ ಉದ್ದೇಶಗಳಿಗಾಗಿ ಮಾಡಲಾಗಿರು ವಿಡಿಯೊಗಳು ಎಂದು ಕ್ಲೈಮ್ ಮಾಡಲಾಗಿದೆ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಸ್ಕ್ರಿಪ್ಟ್ ಮಾಡಲ್ಪಟ್ಟಿದೆ ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಸ್ಕ್ರಿಪ್ಟ್ ಮಾಡಲ್ಪಟ್ಟಿದ್ದು. ದಿವ್ಯಾ ವಿಕ್ರಮ್ ಎಂಬ ವಿಡಿಯೋ ಕ್ರಿಯೇಟರ್ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪ್ರಕಟಿಸಿದ್ದಾರೆ. ವಿಡಿಯೋದಲ್ಲಿ ಇರುವ ದೃಶ್ಯಗಳು ನೈಜ ಘಟನೆಯಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಕಾಫಿಗೆ ನಿಂಬೆ ರಸ ಬೆರೆಸಿ ಕುಡಿದರೆ ದೇಹದ ತೂಕ ಕಡಿಮೆ ಆಗುವುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights