ಫ್ಯಾಕ್ಟ್‌ಚೆಕ್ : ಬಾಡಿಗೆ ಮನೆಗಳಿಗೂ GST ವಿಧಿಸಿದಿಯೇ ಕೇಂದ್ರ ಸರ್ಕಾರ ? ಇಲ್ಲ ಎಂದ PIB

ಅಗತ್ಯ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ GST ಯಿಂದಾಗಿ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು, ದಿನಬಳಕೆಯ ಉತ್ಪನ್ನಗಳು ಮತ್ತು ಸರಕುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ನು ಮತ್ತೆ ಹೆಚ್ಚಿಸಿರುವುದರಿಂದ, ಮೂಲ ಅಗತ್ಯಗಳಾದ ಗೋಧಿ, ಅಕ್ಕಿ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್‌ಗಳು ಮತ್ತು ಇತರ ದೈನಂದಿನ ಅಗತ್ಯಗಳ ಬೆಲೆ ಏರಿಕೆಯ ಬಗ್ಗೆ ದೇಶದ ಜನ ಚಿಂತಿತರಾಗಿದ್ದಾರೆ. ಇದರ ಮದ್ಯಯೇ ಮನೆ ಬಾಡಿಗೆಯ ಮೇಲೂ GST ಯನ್ನು ವಿಧಿಸಿದೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಮೂಲಭೂತ ಅಗತ್ಯಗಳ ಹಲವಾರು ವಿಭಾಗಗಳಲ್ಲಿ ಬೆಲೆಗಳ ಏರಿಕೆಯ ಮಧ್ಯೆ, ಕೇಂದ್ರ ಸರ್ಕಾರವು ದೇಶಾದ್ಯಂತ ಬಾಡಿಗೆದಾರರ ಮನೆ ಬಾಡಿಗೆಗೆ 18 ಪ್ರತಿಶತ ಜಿಎಸ್‌ಟಿಯನ್ನು ವಿಧಿಸಲು ನಿರ್ಧರಿಸಿದೆ ಎನ್ನುವ ಸುದ್ದಿಯೊಂದು ಮಧ್ಯಮ ವರ್ಗದ ಜನಸಂಖ್ಯೆಯಲ್ಲಿ ಪ್ರಮುಖ ಆತಂಕವನ್ನು ಉಂಟುಮಾಡಿದೆ. ಜಿಎಸ್‌ಟಿ ಕುರಿತಂತೆ ಹಲವು ಗೊಂದಲಗಳು ಈ ನಡುವೆ ಕೇಳಿ ಬರುತ್ತಲೇ ಇದೆ. ಬ್ಯಾಂಕ್‌ ಚೆಕ್‌ ಪುಸ್ತಕದ ಮೇಲೆ ಜಿಎಸ್‌ಟಿ ವಿಧಿಸುವ ಕುರಿತು ಕೂಡ ಗೊಂದಲ ಉಂಟಾಗಿತ್ತು. ಈ ಬಗ್ಗೆ ಸ್ವತಃ ಆರ್ಥಿಕ ಸಚಿವ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದರು. ಹಾಗಿದ್ದರೆ ಮನೆ ಬಾಡಿಗೆ ಮೇಲೂ  ಶೇ18% GST ಯನ್ನು ವಿಧಿಸಿದಿಯೆ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಅನೇಕ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ವರದಿಗಳು ಭಾರತದಲ್ಲಿ ಆಸ್ತಿಯನ್ನು ಬಾಡಿಗೆಗೆ ಪಡೆಯುವ ಎಲ್ಲರೂ, ಅದು ವೈಯಕ್ತಿಕ ಬಳಕೆಗಾಗಿ ಪಡೆದರೂ ಬಾಡಿಗೆಗೆ 18 ಪ್ರತಿಶತ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ, ಇದು ಮಧ್ಯಮ ವರ್ಗದವರಿಗೆ ಹೊರೆಯಾಗುತ್ತದೆ ಎಂದು ಹೇಳಿದ್ದವು. ಪಿಐಬಿ ಪೋಸ್ಟ್ ಮಾಡಿದ ಟ್ವೀಟ್ ಪ್ರಕಾರ, ಮನೆ ಬಾಡಿಗೆಯ ಮೇಲೆ 18 ಪ್ರತಿಶತ ಜಿಎಸ್‌ಟಿ ಕುರಿತು ಮಾಧ್ಯಮ ವರದಿಗಳು ನಿಜವಲ್ಲ. ಪಿಐಬಿಯ ಫ್ಯಾಕ್ಟ್ ಚೆಕ್  ಕೂಡ ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ.

ಪಿಐಬಿ ಟ್ವೀಟ್ ಮಾಡಿದ್ದು, “ವಸತಿ ಕಟ್ಟಡವನ್ನು ವಾಣಿಜ್ಯ, ವ್ಯಾಪಾರ ಉದ್ದೇಶಕ್ಕೆ ಬಾಡಿಗೆಗೆ ನೀಡಿದಾಗ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗೆ ಬಾಡಿಗೆಗೆ ನೀಡಿದಾಗ ಜಿಎಸ್‌ಟಿ ಇರುವುದಿಲ್ಲ. ಸಂಸ್ಥೆಯ ಮಾಲೀಕರು ಅಥವಾ ಪಾಲುದಾರರು ವೈಯಕ್ತಿಕ ಬಳಕೆಗಾಗಿ ನಿವಾಸವನ್ನು ಬಾಡಿಗೆಗೆ ಪಡೆದರೂ ಸಹ ಯಾವುದೇ ಜಿಎಸ್‌ಟಿ ಇರುವುದಿಲ್ಲ.” ಎಂದು ಸ್ಪಷ್ಟನೆ ನೀಡಿದೆ.

ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳು, ಗೃಹೋಪಯೋಗಿ ವಸ್ತುಗಳು, ಚಾಕುಕತ್ತರಿಗಳು ಮತ್ತು ಇತರ ದೈನಂದಿನ ಅಗತ್ಯತೆಗಳಂತಹ ಹಲವಾರು ಮೂಲಭೂತ ಸರಕುಗಳ ಮೇಲಿನ ಬೆಲೆಗಳನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರತಿಪಕ್ಷಗಳು ವಿರೋಧಿಸಿವೆ. ಆದರೆ, ಜಿಎಸ್‌ಟಿ ಹೆಚ್ಚಳದಿಂದ ಜನಸಾಮಾನ್ಯರ ಮೇಲೆ ಹೊರೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ GST ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದ್ನು ಓದಿರಿ : ಫ್ಯಾಕ್ಟ್‌ಚೆಕ್: 1400 ವರ್ಷಗಳ ಹಿಂದೆಯೇ ಕಂಪ್ಯೂಟರ್ ಚಿತ್ರ ಕೆತ್ತನೆ ಮಾಡಲಾಗಿತ್ತೆ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights