ಫ್ಯಾಕ್ಟ್‌ಚೆಕ್ : ಎರಡು ವರ್ಷದ ಹಿಂದಿನ ವಿಡಿಯೋವನ್ನು 75ನೇ ಸ್ವಾತಂತ್ರೋತ್ಸವದ ಸಂದರ್ಭದ್ದು ಎಂದು ತಪ್ಪಾಗಿ ಹಂಚಿಕೆ

75 ವರ್ಷಗಳ ಸ್ವಾತಂತ್ರ್ಯ ಸಂದರ್ಭದಲ್ಲಿ, “ಆಜಾದಿ ಕಾ ಅಮೃತ್ ಮಹೋತ್ಸವ” ಆಚರಣೆಯ ಭಾಗವಾಗಿ ಜಲಪಾತದಲ್ಲಿ ತ್ರಿವರ್ಣ ಧ್ವಜದ ರಂಗನ್ನು ಮೂಡಿಸುತ್ತಿರುವ ಇತ್ತೀಚಿನ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯ ದೃಶ್ಯಗಳು ಎಂದು ಹೇಳಿಕೊಂಡು ಕೆಲವು ಸಾಮಾಜಿಕ ಮಾಧ್ಯಮದ ಬಳಕೆದಾರರು ಅದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು  ‘ಹರ್ ಘರ್ ತಿರಂಗಾ‘ ಅಭಿಯಾನಕ್ಕೆ ಚಾಲನೆ ನೀಡಿದ್ದು, ದೇಶದ ಎಲ್ಲಾ ನಾಗರಿಕರು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರಾಷ್ಟ್ರ ಧ್ವಜವನ್ನು ತಮ್ಮ ಮನೆಗಳ ಮೇಲೆ  ಹಾರಿಸುವಂತೆ ಮನವಿ ಮಾಡಿದ್ದರು.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವೀಡಿಯೊದ ಸ್ಕ್ರೀನ್‌ಶಾಟ್ಅನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯಗಳನ್ನು ತೋರಿಸುವ ವೀಡಿಯೊಗಳನ್ನು ಆಗಸ್ಟ್ 2020 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಟ್ವಿಟರ್ ಬಳಕೆದಾರರು ಈ ವೀಡಿಯೊವನ್ನು 15 ಆಗಸ್ಟ್ 2020 ರಂದು ವಿವರಣೆಯೊಂದಿಗೆ ಹಂಚಿಕೊಂಡಿದ್ದಾರೆ. “ತುಂಬಾ ಸೃಜನಾತ್ಮಕವಾಗಿ ಜಲಪಾತದಲ್ಲಿ ತ್ರಿವರ್ಣವನ್ನು ರಚಿಸಿದ್ದರು ” 16 ಆಗಸ್ಟ್ 2020 ರಂದು ‘ಟೈಮ್ಸ್ ನೌ’ ಈ ಸುಂದರವಾದ ತ್ರಿವರ್ಣ ಜಲಪಾತದ ಬಗ್ಗೆ ವರದಿ ಮಾಡುವ ಲೇಖನವನ್ನು ಪ್ರಕಟಿಸಿತು.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು 16 ಆಗಸ್ಟ್ 2020 ರಂದು ‘ABP’ ಸುದ್ದಿ ವಾಹಿನಿ ಪ್ರಕಟಿಸಿದ್ದು ಕಂಡುಬಂದಿದೆ. ರಾಜಸ್ಥಾನದ ಜೋಧಪುರದಲ್ಲಿ “ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತ್ರಿವರ್ಣ ಧ್ವಜದೊಂದಿಗೆ ಜನರು ದೇಶಭಕ್ತಿಯ ಬಣ್ಣದಲ್ಲಿ ಕಾಣಿಸಿಕೊಂಡರು ಎಂದು ವೀಡಿಯೊದ ವಿವರಣೆಯಲ್ಲಿ ಹೇಳಲಾಗಿದೆ.  ಕೆಲವು ಉತ್ಸಾಹಿ ಯುವಕರು ಒಂದು ವಿಶಿಷ್ಟ ಪ್ರಯೋಗ ಮಾಡಿದ್ದು, ಇಬ್ಬರು ಯುವಕರು ನದಿ ಹರಿಯುತ್ತಿದ್ದ ತುದಿಗೆ ಹೋಗಿ, ಜಲಪಾತದ ಮೇಲಿನ ಎರಡೂ ಬದಿಗಳಿಂದ ಕೇಸರಿ ಮತ್ತು ಹಸಿರು ಬಣ್ಣವನ್ನು ಬೆರೆಸಲು ಪ್ರಾರಂಭಿಸಿದರು. ಆಗ ಬೆಟ್ಟದಿಂದ ಬೀಳುವ ಜಲಪಾತ ರಾಷ್ಟ್ರಧ್ವಜದ ಬಣ್ಣದಲ್ಲಿ ಬೀಳುತ್ತಿರುವಂತೆ  ಕಂಡು ಬಂತು”.

“ಈ ವಿಡಿಯೋ ಸುಮಾರು ಎರಡು ವರ್ಷಗಳಷ್ಟು ಹಳೆಯದು ಮತ್ತು ಜೋಧಪುರದಿಂದ ಸುಮಾರು 20 ರಿಂದ 25 ಕಿಮೀ ದೂರದಲ್ಲಿರುವ ಡೈಜರ್ ರಸ್ತೆಯಲ್ಲಿರುವ ಜಲಪಾತದ್ದು. ಸುಮಾರು ಎರಡು ವರ್ಷಗಳ ಹಿಂದೆ ಇಬ್ಬರು ಯುವಕರು ಜಲಪಾತದಲ್ಲಿ ಬಣ್ಣಗಳನ್ನು ಬೆರೆಸಿ ತ್ರಿವರ್ಣ ಧ್ವಜ ಬಣ್ಣ ಬರುವಂತೆ ಮಾಡಿದ್ದನ್ನು ಎಲ್ಲರೂ ಕಣ್ತುಂಬಿಕೊಂಡಿದ್ದರು”. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಹಳೆಯದು ಮತ್ತು ಉತ್ತರ ಪ್ರದೇಶಕ್ಕೆ ಸಂಬಂಧಿಸದ್ದಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ರಾಜಸ್ಥಾನದ ಜೋಧ್‌ಪುರದಲ್ಲಿ ಕೆಲವು ಪ್ರವಾಸಿಗರು ರಚಿಸಿದ ಮೋಡಿಮಾಡುವ ತ್ರಿವರ್ಣ ಜಲಪಾತದ ಹಳೆಯ ದೃಶ್ಯಗಳಾಗಿದ್ದು. ಈ ವೀಡಿಯೊವನ್ನು 15 ಆಗಸ್ಟ್ 2020 ರಂದು ಆಚರಿಸಲಾದ 73 ನೇ ಸ್ವಾತಂತ್ರ್ಯ ದಿನದಂದು ರೆಕಾರ್ಡ್ ಮಾಡಲಾಗಿದೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಹಳೆಯದಾಗಿದೆ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ ರೆಕಾರ್ಡ್ ಮಾಡಲಾಗಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬುರ್ಖಾ ಧರಿಸಿದ್ದ ವ್ಯಕ್ತಿಯಿಂದ ಮಗು ಅಪಹರಣ ವಿಡಿಯೊ ! ನಡೆದಿದ್ದೇನು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.