ಫ್ಯಾಕ್ಟ್‌ಚೆಕ್: ನಿತೀಶ್ ಕುಮಾರ್‌ರವರ 8 ವರ್ಷಗಳ ಹಿಂದಿನ ವಿಡಿಯೊವನ್ನು ತಪ್ಪಾಗಿ ಹಂಚಿಕೊಂಡ BJP

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ 28 ಸೆಕೆಂಡುಗಳ ವೀಡಿಯೊವನ್ನು ಹಲವು BJP ನಾಯಕರು ಮತ್ತು ಪಕ್ಷದ ಬೆಂಬಲಿಗರು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು “ನಿಮ್ಮೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವುದು ಅಸಾಧ್ಯ” ಎಂದು ಹೇಳುತ್ತಿರುವುದನ್ನು ಕೇಳಬಹುದು.

ನಿತೀಶ್ ಕುಮಾರ್ NDA ಯಿಂದ ಹೊರಬಂದು ಆರ್‌ಜೆಡಿ ಬೆಂಬಲದೊಂದಿಗೆ ಹೊಸ ಸರ್ಕಾರ ರಚಿಸಿದ್ದಾರೆ. ಇದೇ ವೇಳೆ, ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಭಾಷಣ ಮಾಡಿದ ವಿಡಿಯೊವೊಂದು ವೈರಲ್ ಆಗಿದೆ. ‘ಇನ್ನು ಮುಂದೆ ಬೆಂಬಲ ಪಡೆಯುವುದಿಲ್ಲ, ಇದೇ ಕೊನೆ. ಮುಂದೆ ಎಂದೂ ಇದು ಸಾಧ್ಯವಾಗುವುದಿಲ್ಲ’ ಎಂದು ನಿತೀಶ್ ಅವರು ವಿಡಿಯೊದಲ್ಲಿ ಹೇಳಿದ್ದಾರೆ. ಈ ವಿಡಿಯೊವನ್ನು ಷೇರ್ ಮಾಡಿರುವ ಬಿಜೆಪಿಯ ಹಲವು ಮುಖಂಡರು ಹಾಗೂ ಪತ್ರಕರ್ತರು, ನಿತೀಶ್ ಅವರು ಆರ್‌ಜೆಡಿಯನ್ನು ಕುರಿತು ಈ ಮಾತುಗಳನ್ನು ಹೇಳಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ಆಗಿರುವ ವಿಡಿಯೊ ಎಂಟು ವರ್ಷ ಹಳೆಯದು ಎಂದು ಆಲ್ಟ್ ನ್ಯೂಸ್ ಹಾಗೂ ಲಾಜಿಕಲ್ ಇಂಡಿಯನ್ ವೆಬ್‌ಸೈಟ್‌ಗಳು ಫ್ಯಾಕ್ಟ್ ಚೆಕ್ ಪ್ರಕಟಿಸಿವೆ. 2014ರ ಫೆಬ್ರುವರಿ 18ರಂದು ಪ್ರಕಟವಾದ ದೈನಿಕ ಭಾಸ್ಕರ್, ದೈನಿಕ ಜಾಗರಣ್ ಮೊದಲಾದ ಪತ್ರಿಕೆಗಳಲ್ಲಿ ನಿತೀಶ್ ಭಾಷಣದ ವರದಿಗಳಿವೆ. ನಿತೀಶ್ ಅವರು ಬಿಜೆಪಿಯನ್ನು ಕುರಿತು ಈ ಮಾತುಗಳನ್ನು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ನಿತೀಶ್ ಅವರು ಆರ್‌ಜೆಡಿ ಜತೆ ಮತ್ತೆ ಕೈಜೋಡಿಸುವುದಿಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ವೆಬ್‌ಸೈಟ್‌ಗಳು ತಿಳಿಸಿವೆ.

Image Credit: Webscast.gov.in

1:20:13 ಅವಧಿಯ ವಿಡಿಯದಲ್ಲಿ ನಿತೀಶ್ ಕುಮಾರ್ ಮಾತನಾಡುತ್ತ, “ ನಾನು ಅಧಿಕಾರದಲ್ಲಿ ಇರಲಿ , ಇರದೆ ಇರಲಿ ಆದರೆ ನಿಮ್ಮೊಂದಿಗೆ ಇರಲು ಸಾಧ್ಯವಿಲ್ಲ, ಇದು ಮುಗಿದ ಅಧ್ಯಾಯ. ಭವಿಷ್ಯದಲ್ಲಿ ನಾವು ನಿಮ್ಮೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ನೀವು ನಮ್ಮ ನಂಬಿಕೆಯನ್ನು ಮುರಿದಿದ್ದರಿಂದ ಈ ಅಧ್ಯಾಯವು ಈಗ ಮುಗಿದಿದೆ” ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿಯೊಂದಿಗೆ ಸರ್ಕಾರ ರಚಿಸುವುದಿಲ್ಲ ಎಂದು BJP ಕುರಿತು ಮಾತನಾಡಿದ್ದ ನಿತೀಶ್ ಕುಮಾರ್ ಅವರ ಎಂಟು ವರ್ಷಗಳ ಹಳೆಯ ವೀಡಿಯೊವನ್ನು  ಬಿಜೆಪಿ ನಾಯಕರು RJD ವಿರುದ್ಧ ನಿತೀಶ್ ಕುಮಾರ್ ಹೇಳಿಕೆ ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ದೋನಿ ಇಸ್ಲಾಂಗೆ ಮತಾಂತರ ಎಂದು ಎಡಿಟ್ ಫೋಟೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights