ಫ್ಯಾಕ್ಟ್‌ಚೆಕ್: 1400 ವರ್ಷಗಳ ಹಿಂದೆಯೇ ಕಂಪ್ಯೂಟರ್ ಬಳಕೆ ಇತ್ತೆ? ವೈರಲ್ ಚಿತ್ರದ ಹಿಂದಿರುವ ವಾಸ್ತವವೇನು?!

“1400 ವರ್ಷಗಳ ಹಿಂದೆ ಪಲ್ಲವ ರಾಜ II ನರಸಿಂಹನು ನಿರ್ಮಿಸಿದ ತಾಳಗಿರಿ ದೇವಾಲಯದಲ್ಲಿ, ಶಿಲ್ಪ ಕಲಾ ಕೆತ್ತನೆಯ ಗೋಡೆಯ ಮೇಲೆ ಕಂಪ್ಯೂಟರ್ ಮತ್ತು ಕೀಬೋರ್ಡ್ ಇರುವ ಶಿಲ್ಪವಿದೆ. ವಿದ್ಯುತ್ ಇಲ್ಲದಿದ್ದಾಗ ಇದು ಹೇಗೆ ಸಾಧ್ಯ?  ಇವರು ವಿದ್ಯುತ್ ಬಳಸುತ್ತಿದ್ದರೋ  ಅಥವಾ ಸೌರಶಕ್ತಿಯನ್ನು ಬಳಸುತ್ತಿದ್ದರೋ” ? ಗೊತ್ತಿಲ್ಲ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅಂದರೆ 1400 ವರ್ಷಗಳ ಹಿಂದೆಯೇ ತಂತ್ರಜ್ಞಾನದ ಬಗ್ಗೆ ಅಧ್ಯಯನಗಳು ನಡೆದಿವೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಲವು ಫೇಸ್‌ಬುಕ್ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಅನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ವಾಟ್ಸಾಪ್‌ಗೆ ಮನವಿ ಸಂದೇಶಗಳು ಬಂದಿದ್ದು, ಪೋಸ್ಟ್‌ನ ಸತ್ಯಾಸತ್ಯೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಸೆಕೆಂಡ್ ಲೈಫ್ ಮಾರ್ಕೆಟ್‌ಪ್ಲೇಸ್ ಎಂಬ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಅದೇ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಈ ಫೋಟೋದಲ್ಲಿ ಆರ್ಟ್‌ವರ್ಕ್ ಡಿ ಮೆಕ್ಸಿಕೋ ಸಂಗ್ರಹದ ಭಾಗವಾಗಿದೆ ಎಂದು ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಸ್ಟ್ರೇಂಜ್ ಹಾರಿಜಾನ್ ಎನ್ನುವ ಮತ್ತೊಂದು ವೆಬ್‌ಸೈಟ್ ನಲ್ಲಿ ಅಕ್ಟೋಬರ್ 9, 2006 ರಂದು ಚಿತ್ರವನ್ನು ಅಪ್‌ಲೋಡ್ ಮಾಡಿದೆ. ಈ ಚಿತ್ರವು ರೌಲ್ ಕ್ರೂಜ್ ಮಾಡಿದ ಕಲಾಕೃತಿ ಎಂದು ಸೈಟ್ ಉಲ್ಲೇಖಿಸಿದೆ. 1983 ರಿಂದ ಮೆಕ್ಸಿಕೊದಲ್ಲಿ (ಫೆರ್ನಾಂಡೀಸ್ ಪಬ್ಲಿಷಿಂಗ್, ರಾಬರ್ಟೊ ಗೌಡೆಲ್ಲಿ, ಮಾಂಟೇಜ್ ಮತ್ತು ಹೆಚ್ಚಿನವು), US (ಮಾರ್ವೆಲ್ ಕಾಮಿಕ್ಸ್ ಮತ್ತು ನಿಯತಕಾಲಿಕೆಗಳು ಹೆವಿ) ವಿವಿಧ ಗ್ರಾಹಕರಿಗೆ ಸ್ವತಂತ್ರ ಸಚಿತ್ರಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಮೆಟಲ್ ಮತ್ತು ಸ್ಪೆಕ್ಟ್ರಮ್, ಇತರವುಗಳಲ್ಲಿ) ಮತ್ತು ಅರ್ಜೆಂಟೀನಾ (ಲುಮೆನ್ ಪಬ್ಲಿಷಿಂಗ್).”

ವೈರಲ್ ಚಿತ್ರವನ್ನು “ಕಾಸ್ಮೊಸ್ ಲ್ಯಾಟಿನೋಸ್, ಲ್ಯಾಟಿನ್ ಅಮೇರಿಕಾ ಮತ್ತು ಸ್ಪೇನ್‌ನಿಂದ ಸೈನ್ಸ್ ಫಿಕ್ಷನ್ ಆಂಥಾಲಜಿ” ಪುಸ್ತಕದ ಮುಖಪುಟದಲ್ಲಿ ಪ್ರಕಟಿಸಲಾಗಿದೆ. ಈ ಚಿತ್ರವನ್ನು ಬಳಸಿಕೊಂಡು 1400 ವರ್ಷಗಳ ಹಿಂದೆಯೇ ಕಂಪ್ಯೂಟರ್ ಪರಿಕಲ್ಪನೆ ಇತ್ತು ಎಂದು ವೈರಲ್ ಮಾಡಲಾಗಿದೆ. ವಾಸ್ತವವಾಗಿ 1822 ರಲ್ಲಿ, ಮೊದಲ ಕಂಪ್ಯೂಟರ್ ಯಂತ್ರವನ್ನು ಚಾರ್ಲ್ಸ್ ಬ್ಯಾಬೇಜ್ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ್ದರು.

 

ಒಟ್ಟಾರೆಯಾಗಿ ಹೇಳುವುದಾದರೆ, ಲೈಫ್ ಮಾರ್ಕೇಟ್ ಪ್ಲೇಸ್ ಎಂಬ ವೆಬ್‌ಸೈಟ್‌ ನಲ್ಲಿ ರಚಿಸಿದ  ಚಿತ್ರವಾಗಿದ್ದು 1400 ವರ್ಷಗಳಷ್ಟು ಹಿಂದೆಯೇ ತಾಳಗಿರಿ ದೇವಾಲಯದಲ್ಲಿ ಪಲ್ಲವ ರಾಜ II ನರಸಿಂಹನು ನಿರ್ಮಿಸಿದ ಶಿಲ್ಪಕಲೆಯ ಕೆತ್ತನೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.  ವಾಸ್ತವವಾಗಿ 1822 ರಲ್ಲಿ ಚಾರ್ಲ್ಸ್ ಬ್ಯಾಬೇಜ್ ಕಂಪ್ಯೂಟರ್‌ಅನ್ನು ಅಭಿವೃದ್ದಿಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್ ಮೊಬೈಲ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಭಾರತದ ರಾಷ್ಟ್ರಧ್ವಜವನ್ನು ಸುಡುತ್ತಿರುವ ಈ ವ್ಯಕ್ತಿಯ ಬಂಧನ ಇನ್ನೂ ಆಗಿಲ್ಲವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights