ರಾತ್ರಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಬಿತ್ತು ಗೂಸಾ…!

ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿರೊ ವ್ಯಕ್ತಿಗೆ ಗೂಸಾ ಕೊಟ್ಟ ಘಟನೆ ಧಾರವಾಡದ ಗಣೇಶ ನಗರದ ಬಳಿ ಇರುವ ಅಕ್ಕಮಹಾದೇವಿ ಆಶ್ರಮದಲ್ಲಿ ನಡೆದಿದೆ.

ಆಶ್ರಮದಲ್ಲಿ ವಾರ್ಡ್‌ನ ಸರಳ ಎಂಬ ವಾರ್ಡ್‌ನ್ ಗಂಡ ಲಕ್ಷ್ಮಣನಿಂದ ಈ ಕೃತ್ಯ ನಡೆದಿದೆ. ಇದರಿಂದ ಸಾರ್ವಜನಿಕರಿಂದ ಲಕ್ಷ್ಮಣಗೆ ಗೂಸಾ ಬಿದ್ದಿದೆ.

ಲಕ್ಷ್ಮಣ ಚಿಕ್ಕ ಹೆಣ್ಣು ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತ ಕಿರುಕುಳ ನೀಡುತ್ತಿದ್ದ. ವಿವಿಧ ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕೆ ಬಂದಿರೋ ಮಕ್ಕಳಿಗೆ ಮಧ್ಯರಾತ್ರಿ ಎಬ್ಬಿಸಿ ಸೆಕ್ಸ್ ವಿಡಿಯೋ ತೋರಿಸಿ ಹಿಂಸೆ ಕೊಡುತ್ತಿದ್ದನು.

ಮಕ್ಕಳಿಗೆ ನೀಡುತ್ತಿದ್ದ ಕಿರುಕುಳಕ್ಕೆ ಸಾರ್ವಜನಿಕರು ಧರ್ಮದೇಟು ಕೊಟ್ಟಿದ್ದಾರೆ. ನಿನ್ನೆ ತಡರಾತ್ರಿ ಧರ್ಮದೇಟು ನೀಡಿದ ಸಾರ್ವಜನಿಕರು ಲಕ್ಷ್ಮಣನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights