ಕೊರೊನಾ ಕಿಚ್ಚಿಗೆ ಬೇಯುತಿದೆ ಅಮೆರಿಕಾ..! ಒಂದು ಲಕ್ಷದತ್ತ ಸಾವಿನ ಸಂಖ್ಯೆ!

ಕಿಲ್ಲರ್ ಕೊರೊನಾಗೇ ಈಡೀ ವಿಶ್ವವೇ ಕಂಗಾಲಾಗಿ ಹೋಗಿದೆ. ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲೂ ವಿಶ್ವದ ದೊಡ್ಡಣ್ಣ ಅಮೆರಿಕಾ ಕೊರೊನಾ ಕಿಚ್ಚಿಗೆ ಬೆಂದು ಹೋಗುತ್ತಿದೆ. ಈವರೆಗೆ ಅಮೆರಿಕಾವೊಂದರಲ್ಲೇ ಸೋಂಕಿತರ ಸಂಖ್ಯೆ 1,550,959ರಷ್ಟಿದ್ದು, 93,406 ಜನ ಮೃತಪಟ್ಟಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿ, 12 ಲಕ್ಷ ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹೌದು… ಅಮೆರಿಕಾದಲ್ಲಿ ಕಳೆದ 24  ಗಂಟೆಗಳಲ್ಲಿ ಮತ್ತೆ 1,561 ಜನ ಡೆಡ್ಲಿ ಕೊರೊನಾಗೆ ಬಲಿಯಾಗಿದ್ದಾರೆಂದು ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ.

ಇನ್ನೂ ನ್ಯೂಯಾರ್ಕ್ ನಲ್ಲೇ​​ 3 ಲಕ್ಷಕ್ಕೂ ಹೆಚ್ಚಿನ ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಪೈಕಿ  28 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.

ಜಗತ್ತಿನೆಲ್ಲೆಡೆ ಬುಧವಾರದ ವೇಳೆಗೆ 5 ಮಿಲಿಯನ್ ಜನರು ಸೋಂಕಿಗೆ ತುತ್ತಾಗಿದ್ದಾರೆ.ಸುಮಾರು 3,25,000 ಜನರು ಮೃತಪಟ್ಟಿದ್ದು,  ಮಿಲಿಯನ್ ಗಟ್ಟಲೇ ಜನರು  ನಿರುದ್ಯೋಗಿಗಳಾಗಿದ್ದಾರೆ. ದುರಂತವೆಂದರೇ ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಲ್ಲಿ 1,06,000 ಲಕ್ಷ ಜನರು ವೈರಾಣು ಪೀಡಿತರಾಗಿದ್ದಾರೆ.

ಈ ಸೋಂಕು 1 ಮಿಲಿಯನ್  ಜನರಿಗೆ ಕೇವಲ 11 ದಿನದಲ್ಲಿ ಹರಡಿದ್ದು, ವೈರಸ್  ಅಟ್ಟಹಾಸಕ್ಕೆ ಅಕ್ಷರಶಃ ನಲುಗಿ ಹೋಗಿದ್ದ ಇಟಲಿ, ಸ್ಪೇನ್ ಮುಂತಾದ ಕಡೆ ನಿಧಾನವಾಗಿ ಲಾಕ್ ಡೌನ್ ಸಡಿಲಿಸಲಾಗಿದೆ.  ಆದರೂ ಏರಡನೇ ಹಂತದ ಸೋಂಕು ಹರಡುವ ಸಾಧ್ಯತೆ ಕಂಡುಬರುತ್ತಿದೆ. ಜಗತ್ತಿನೆಲ್ಲೆಡೆ 50 ಲಕ್ಷ ಜನರು ಸೋಂಕಿನಿಂದ ಬಳಲುತ್ತಿದ್ದು, ಇದು ನ್ಯೂಜಿಲ್ಯಾಂಡ್ ನ ಜನಸಂಖ್ಯೆಗೆ ಸಮಾನವಾಗಿದೆ ಎಂದು  ವಿಶ‍್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights