ಯಡಿಯೂರಪ್ಪನ ಕೈಯಲ್ಲಿ ಆಗದ್ದು ಬೊಮ್ಮಯಿ ಕೈಲಾಗುತ್ತಾ..? – ಸಿದ್ದರಾಮಯ್ಯ ವಾಗ್ದಾಳಿ!

ರಾಜ್ಯದಲ್ಲಿ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದೇ ತಡ ಬಸವರಾಜ್ ಬೊಮ್ಮಾಯಿ ಸರ್ಕಾರ ಟೈಮ್ ಪಾಸ್ ಸರ್ಕಾರ ಎಂದು ವಿಪಕ್ಷ ನಾಯಕರ ಟೀಕೆಗೆ ಗುರಿಯಾಗಿದೆ.

ಮೈಸೂರು ವಿಭಾಗಿಯ ಸಮಾವೇಶದ ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬೊಮ್ಮಾಯಿ ಕೇಂದ್ರದಿಂದ ರಾಜ್ಯಕ್ಕೆ ತರುವ ಅನುದಾನದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಯಡಿಯೂರಪ್ಪನ ಕೈಯಲ್ಲಿ ಆಗದ್ದು ಬೊಮ್ಮಯಿ ಕೈಲಾಗುತ್ತಾ..? ಎಂದು ವಾಗ್ದಾಳಿ ಮಾಡಿದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, “ರಾಜ್ಯದ ಜನರಿಗೆ ಬಿಜೆಪಿ ದೊಡ್ಡ ಶಾಪ” ವಾಗಿದೆ ಎಂದು ದೂರಿದ್ದಾರೆ.

ಹೌದು… ರಾಜ್ಯದಲ್ಲಿ ನೆರೆಯಿಂದಾಗಿ ಜನರ ಗೋಳು ಕೇಳುವವರು ಇಲ್ಲದಂತಾಗಿದೆ. ಇನ್ನೂ ಕಳೆದ ಬಾರಿ ಪ್ರವಾಹದಿಂದಾಗಿ ಉಂಟಾದ ಹಾನಿಯಿಂದ ಚೇತರಿಸಿಕೊಳ್ಳಲು ಆಗದ ಜನರಿಗೆ ಕೊರೊನಾ ಗಾಯದ ಮೇಲೆ ಬರೆ ಎಳೆದಿದೆ. ಇದರ ಮಧ್ಯೆ ಮತ್ತೆ ಪ್ರವಾಹದ ಹೊಡೆತಕ್ಕೆ ಜನರ ಜೀವನ ಅಕ್ಷರಶ: ಬೀದಿ ಪಾಲಾಗಿದೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಸಮಸ್ಯೆಗಳನ್ನು ಕೇಳಲು ಸಚಿವರಿಲ್ಲ, ಸಿಎಂ ಇದ್ರು ಇಲ್ಲಂದಂತೆ ರಾಜ್ಯ ಅನಾಥವಾಗಿದೆ.

ಸಿಎಂ ಮಾತ್ರ ನೂತನ ಸಿಎಂ ಆಗಿ ಆಯ್ಕೆ ಮಾಡಿದ್ದಕ್ಕೆ ಹೈಕಮಾಂಡ್ ಗೆ ಧನ್ಯವಾದ ತಿಳಿಸಲು ದೆಹಲಿಗೆ ಹಾರಿದ್ದು ವಿಪಕ್ಷ ನಾಯಕರ ಕೆಂಗಣ್ಣಿಗೆ ಇದು ಗುರಿಯಾಗಿದೆ. ಧನ್ಯವಾದ ಹೇಳಲು ಸಮಯವಿತ್ತು. ರಾಜ್ಯದ ಜನ ಸಂಕಷ್ಟದಲ್ಲಿರುವಾಗ ಸಿಎಂ ದೆಹಲಿಗೆ ಹೋಗಿ ಧನ್ಯವಾದ ತಿಳಿಸುವುದು ಅವಶ್ಯಕತೆ ಇತ್ತಾ ಎಂದು ವಿಪಕ್ಷ ನಾಯಕರು ಕೆಂಡ ಕಾರಿದ್ದಾರೆ.

ವಿಪಕ್ಷ ನಾಯಕರ ಟೀಕೆಯ ಮಧ್ಯೆ ಇತ್ತ ದೆಹಲಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಬೇಕಾಗಿರುವ ಜಿ.ಎಸ್ ಟಿ ಪರಿಹಾರ ಬಿಡುಗಡೆ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಿದ್ದಾರೆನ್ನಲಾಗುತ್ತಿದೆ.

ಆದರೆ ಸಿಎಂ ಮನವಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅದ್ಯಾವಗ ಅನುದಾನ ಬಿಡುಗಡೆ ಮಾಡುತ್ತೋ..? ಅದ್ಯಾವಾಗ ರಾಜ್ಯದ ಜನತೆ ಕೈಸೇರುತ್ತೋ? ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ.

Spread the love

Leave a Reply

Your email address will not be published. Required fields are marked *