TET exam : ಶಿಕ್ಷಕರ ಅರ್ಹತಾ ಪರೀಕ್ಷೆಗೆ ಮಹೂರ್ತ ಪಿಕ್ಸ್, ಜುಲೈ 5ಕ್ಕೆ ಪರೀಕ್ಷೆ…
ಶಿಕ್ಷಕರ ಅರ್ಹತಾ ಪರೀಕ್ಷೆ TET ಅನ್ನು ಮುಂದಿನ ತಿಂಗಳು ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. TET ಪರೀಕ್ಷೆಗಳು ಜುಲೈ 5ರಂದು ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ…

ಶಿಕ್ಷಣ ಇಲಾಖೆ ನಡೆಸುವ ಈ ಪರೀಕ್ಷೆಯನ್ನು ಜುಲೈ 5ರಂದು ನಡೆಸಲು ನಿರ್ಧರಿಸಲಾಗಿದೆ. ಪರಿಕ್ಷಾರ್ಥಿಗಳ ಅನುಕೂಲಕ್ಕೆಂದು ಮತ್ತೊಮ್ಮೆ ಪರೀಕ್ಷೆ ಬರೆಯು ಸಲುವಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ದುರೇಶ್ ಕುಮಾರ್ ತಿಳಿಸಿದ್ದಾರೆ..
ಕೊರೋನಾ ಮೇಲೆ ಹಿಡಿತ ಸಾಧಿಸಲು ಹೇರಲಾಗಿದ್ದ ಲಾಕ್ಡೌನ್ ಒಂದೊಂದೆ ಹಂತದಲ್ಲಿ ಸಡಿಲವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳಿಗೆ ಸಹ ಮತ್ತೆ ಚಾಲೆ ನೀಡಲಾಗುತ್ತಿದೆ. ಜೂನ್ ವೇಳೆಗೆ ಲಾಕ್ಡೌನ್ ಸಂಪೂರ್ಣವಾಗಿ ಇಲ್ಲವಾಗುವ ಆಶಯದಲ್ಲಿ ಜೂನ್ ತಿಂಗಳ 25ರಿಂದ SSLC ಪರೀಕ್ಷೆಗಳನ್ನು ನಡೆಸುವುದಾಗಿ ಶಿಕ್ಷಣ ಇಲಾಖೆ ಘೋಷಣೆ ಮಾಡಿದೆ.

ಅಲ್ಲದೇ ಬಾಕಿ ಉಳಿದಿರುವ ದ್ವಿತೀಯ ಪಿಯುಸಿಯ ಇಂಗ್ಲಿಷ್ ಭಾಷಾ ಪರೀಕ್ಷೆಯನ್ನು ಸಹ ನಡೆಸುವುದಾಗಿ ಈಗಾಗಲೇ ಘೋಷಿಸಲಾಗಿದೆ. ಇದೇ ವೇಳೆ CBSE 10 ಮತ್ತು 12ನೇ ತರಗತಿಯ ಪರೀಕ್ಷಗಳು ಜುಲೈ ಒಂದರಿಂದ 15ರವರೆಗೆ ನಡೆಯಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಘೋಷಿಸಿದ್ದಾರೆ.

ಪರೀಕ್ಷೆಗಳ ನಂತರ ಶಾಲಾ-ಕಾಲೇಜುಗಳ ಪುನಾರಂಬದ ಬಗ್ಗೆ ಈಗಾಗಲೇ ಪ್ರಾಥಮಿಕ ಹಂತದ ಸಮಾಲೋಚನೆಗಳು ನಡೆದಿದ್ದು ಸೆಪ್ಟೆಂಬರ್ ವೇಳೆಗೆ ಶಾಲೆಗಳು ತೆರೆಯುವ ಸಂಭವ ಇದೆ ಎನ್ನಲಾಗಿದೆ.

