ದೇಶದಲ್ಲಿ ಒಂದೇ ದಿನ 3,847 ಕೊರೊನಾ ಸೋಂಕಿತರು ಸಾವು : ತಮಿಳುನಾಡು, ಕೇರಳದಲ್ಲಿ ಹೆಚ್ಚು ಕೇಸ್!

ದೇಶದಲ್ಲಿ ಒಂದೇ ದಿನ 2.11 ಲಕ್ಷ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 3,847 ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ ತಮಿಳುನಾಡು, ಕೇರಳದಲ್ಲಿ ಹೆಚ್ಚು ಕೊರೊನಾ ಕೇಸ್ ದಾಖಲಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 2,11,298 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೈನಂದಿನ ಕೋವಿಡ್ -19 ಪ್ರಕರಣಗಳು ಮತ್ತೊಮ್ಮೆ ಸ್ವಲ್ಪಮಟ್ಟಿಗೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,000 ಕ್ಕಿಂತ ಕಡಿಮೆಯಾಗಿದೆ. 2,83,135 ಜನ ಗುಣಮುಖರಾಗಿದ್ದಾರೆ.

ಬುಧವಾರ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ ಐದು ರಾಜ್ಯಗಳಲ್ಲಿ ತಮಿಳುನಾಡು 33,764 ಪ್ರಕರಣಗಳು, ಕೇರಳ 28,798 ಪ್ರಕರಣಗಳು, ಕರ್ನಾಟಕ 26,811 ಪ್ರಕರಣಗಳು, ಮಹಾರಾಷ್ಟ್ರ 24,752  ಮತ್ತು ಆಂಧ್ರಪ್ರದೇಶ 18,285 ಪ್ರಕರಣಗಳು ದಾಖಲಾಗಿವೆ.

ಭಾರತ ಕಳೆದ 24 ಗಂಟೆಗಳಲ್ಲಿ 3,847 ಸಾವುಗಳನ್ನು ದಾಖಲಿಸಿದೆ. ಮಹಾರಾಷ್ಟ್ರದಲ್ಲಿ 992 ಸಾವುಗಳು ಸಂಭವಿಸಿವೆ. ಕರ್ನಾಟಕದಲ್ಲಿ 530 ಸಾವುಗಳು ಸಂಭವಿಸಿವೆ.

ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2,73,69,093 ಕ್ಕೆ ತಲುಪಿದೆ ಮತ್ತು ಸಾವಿನ ಸಂಖ್ಯೆ 3,15,235 ಕ್ಕೆ ತಲುಪಿದೆ. ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 2,46,33,951 ಕ್ಕೆ ತಲುಪಿದೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 24,19,907 ಆಗಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 18,85,805 ಲಸಿಕೆಯನ್ನು ನೀಡಲಾಗಿದ್ದು, ಈವರಗೆ ಒಟ್ಟು 20,26,95,874 ಲಸಿಕೆ ನೀಡಲಾಗಿದೆ.

Spread the love

Leave a Reply

Your email address will not be published. Required fields are marked *