ಸಾಕು ನಾಯಿಯನ್ನು ಆಕಾಶಬುಟ್ಟಿಗಳಿಗೆ ಕಟ್ಟಿ ಹಾರಿಸಿದ ಯೂಟ್ಯೂಬರ್ : ವಿಲವಿಲ ಒದ್ದಾಡಿದ ಮೂಕ ಪ್ರಾಣಿ!

ಸಾಕು ನಾಯಿಯನ್ನು ಆಕಾಶಬುಟ್ಟಿಗಳಿಗೆ ಕಟ್ಟಿ ಹಾರಿಸಿದ ದೆಹಲಿ ಯೂಟ್ಯೂಬರ್ ನನ್ನು ಬಂಧಿಸಲಾಗಿದೆ.

ಎಡೆಲ್ಹಿ ಮೂಲದ ಯೂಟ್ಯೂಬರ್ ಇತ್ತೀಚೆಗೆ ತನ್ನ ಸಾಕು ನಾಯಿಯನ್ನು ಹಲವಾರು ಹೈಡ್ರೋಜನ್ ಆಕಾಶಬುಟ್ಟಿಗಳಿಗೆ ಕಟ್ಟಿ ಹಾರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು. ಈಗ ವಿಡಿಯೋದಿಂದಾಗಿ ಆತನನ್ನು ಬಂಧಿಸಲಾಗಿದೆ.

ಆರೋಪಿ ಗೌರವ್ ಜಾನ್ ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ಈ ರೀತಿಯ ವಿಡಿಯೋ ಮಾಡಿದ್ದಾನೆ. ಅದರಲ್ಲಿ ದೆಹಲಿಯ ಉದ್ಯಾನವನವೊಂದರಲ್ಲಿ ತನ್ನ ಸಾಕು ನಾಯಿಗೆ ಹಲವಾರು ಆಕಾಶಬುಟ್ಟಿಗಳನ್ನು ಕಟ್ಟಿ ನಾಯಿಯನ್ನು ಹಾರಿಸಿದ್ದಾನೆ. ವೀಡಿಯೊದಲ್ಲಿ ನಾಯಿಯನ್ನು ಸ್ವಲ್ಪ ಸಮಯದವರಗೆ ಗಾಳಿಯಲ್ಲಿ ಹಾರಿಸಲಾಗಿದೆ. ಮೂಖ ಜೀವ ಕಟ್ಟಿದ ಹಗ್ಗದಿಂದ ಬಿಡಿಸಿಕೊಳ್ಳಲು ಒದ್ದಾಡುವುದು ಕಾಣಬಹುದು. ವೀಡಿಯೊದಿಂದ ಆಕ್ರೋಶಗೊಂಡ ಪ್ರಾಣಿ ಹಕ್ಕುಗಳ ಸಂಘಟನೆಗಳು, ಪೀಪಲ್ ಫಾರ್ ಅನಿಮಲ್ (ಪಿಎಫ್‌ಎ) ಸದಸ್ಯರು ದೆಹಲಿ ಯೂಟ್ಯೂಬರ್ ಗೌರವ್ ಜಾನ್ ವಿರುದ್ಧ ದೆಹಲಿಯ ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪ್ರಾಣಿಗಳ ಕ್ರೌರ್ಯ ಆರೋಪದಡಿ ಗೌರವ್ ಜಾನ್ ಮತ್ತು ಅವರ ತಾಯಿಯ ವಿರುದ್ಧ ಪ್ರಾಣಿಗಳ ಕ್ರೌರ್ಯ ಕಾಯ್ದೆಯ ಸೆಕ್ಷನ್ 188, 269, 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗೌರವ್ ಜಾನ್ ಮೂಲ ವೀಡಿಯೊವನ್ನು ಅಳಿಸಿ ನಂತರ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮತ್ತೊಂದು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಹಿಂದಿನ ವೀಡಿಯೊವನ್ನು ಏಕೆ ಅಳಿಸಬೇಕಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹೊಸ ವೀಡಿಯೊದಲ್ಲಿ, ಅವರು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ತನ್ನ ಸಾಕು ನಾಯಿ ಡಾಲರ್ ಅನ್ನು ತೋರಿಸುವ ವೀಡಿಯೊದಿಂದ ಬೇಸರವಾದವರಿಗೆ ಅವರು ಕ್ಷಮೆಯಾಚಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights