ಬಿಗ್ ಬ್ರೇಕಿಂಗ್ : ಇಂಧನ ಇಲಾಖೆಯಲ್ಲಿ ನಡೆದಿದೆ ಕೋಟಿ ಕೋಟಿ ಡೀಲ್…!

ಸಾವಿರಾರು ಗುತ್ತಿಗೆದಾರರು ನೀಡಬೇಕಿರುವ ಗುತ್ತಿಗೆ ಎರಡೇ ಕಂಪನಿಗೆ ಮೀಸಲು ಮಾಡಿ ಮೈತ್ರಿ ಸರ್ಕಾರ ಮಹಾ ಎಡವಟ್ಟು ಮಾಡಿದೆ. ಇದರಿಂದ ಇಂಧನ ಇಲಾಖೆಯಲ್ಲಿ ನಡೆದಿದೆ ಕೋಟಿ ಕೋಟಿ ಡೀಲ್ ಮಾಡಿಕೊಳ್ಳಲಾಗಿದೆ.

ಹೌದು.. ಇಲಾಖೆಯ ನಿಗಧಿತ ದರಕ್ಕಿಂತ 49 ರಿಂದ 53% ಹೆಚ್ಚು ಹಣಕ್ಕೆ ಟೆಂಡರ್ ಕರೆದ ಮೈತ್ರಿ ಸರ್ಕಾರ, ಅಧಿಕಾರಿಗಳು ರಾಜಕಾರಣಿಗಳ ನಡುವೆ ನಡೆದಿದೆ ಭಾರಿ ಒಳ‌ಒಪ್ಪಂದ ಮಾಡಿಕೊಂಡು, ಒಪ್ಪಂದದ ಹಿಂದಿದೆ ಕೋಟಿ‌ ಕೋಟಿ ಕಿಕ್ ಬ್ಯಾಕ್ ಆರೋಪ ಕೇಳಿಬರುತ್ತಿದೆ.


ಸಾವಿರಾರು ಗುತ್ತಿಗೆದಾರರಿಗೆ ನೀಡಬೇಕಿದ್ದ ಕೆಲಸ ಎರಡು ಕಂಪನಿಗೆ ಮೀಸಲಿಟ್ಟು, ಬರೋಬ್ಬರಿ 458 ಕೋಟಿ ಟೆಂಡರ್ ಎರಡೇ ಕಂಪನಿಗೆ ನೀಡಿದೆ.

ಅಷ್ಟೇ ಅಲ್ಲ ಆ ಎರಡು ಕಂಪನಿಗಳು 458ಕೋಟಿಗೆ 50% ಹೆಚ್ಚುವರಿಯಾಗಿ ಕೆಲಸ ಮಾಡಲಿವೆ. ಉದಾಹರಣೆಗೆ ಒಂದು ಟ್ರಾನ್ಸಫಾರ್ಮರ್ ಹಾಗೂ ಪಂಪ್‌ಸೆಟ್ ಅಳವಡಿಕೆಗೆ 2 ರಿಂದ 3 ಲಕ್ಷ ವೆಚ್ಚವಾಗುತ್ತದೆ. ಆದ್ರೆ ಆ ಎರಡು ಕಂಪನಿಗಳಿಗೆ ನೀಡಿರುವ ಟೆಂಡರ್ ಪ್ರಕಾರ 5 ರಿಂದ 7 ಲಕ್ಷದಲ್ಲಿ ಕೆಲಸ ನಡೆಯಲಿದೆ.

ಇಂಧನ ಇಲಾಖೆ ಒಂದು ಟ್ರಾನ್ಸಫಾರ್ಮರ್ ಹಾಗೂ ಪಂಪ್‌ಸೆಟ್ ಅಳವಡಿಕೆಗೆ ಬರೋಬ್ಬರಿ 4 ಲಕ್ಷ ಹೆಚ್ಚುವರಿ ನೀಡುತ್ತಿದೆ. ಈ ಇಂಧನ ಇಲಾಖೆ ಇದ್ದದ್ದು ಸಿಎಂ ಕುಮಾರಸ್ವಾಮಿ ಬಳಿ. ಕುಮಾರಸ್ವಾಮಿ ಸೂಚನೆಯಂತೆ ನಡೆದಿರುವ ಟೆಂಡರ್ ಪ್ರಕ್ರಿಯೆ ಇದಾಗಿದೆ.

ಸುರ್ವಣ ಇಂಡ್ರಸ್ಟ್ರೀಸ್, ಕೈಲಾಸ್ ಟ್ರಾನ್ಸ್‌ಫಾರ್ಮರ್ಸ್ ಎನ್ನುವ 2 ಕಂಪನಿಗಳಿಗೆ ಟೆಂಡರ್ ನೀಡಲಾಗಿದೆ. ಜೊತೆಗೆ ಈ ಕಂಪನಿಯ ಮಾಲೀಕರು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಕುಮಾರಸ್ವಾಮಿ ಆಪ್ತರು.

ಆಪ್ತರಿಗೆ ಲಾಭ ಮಾಡಿಕೊಡಲು ಹಾಗೂ ಕಿಕ್‌ಬ್ಯಾಕ್ ಪಡೆಯಲು ಟೆಂಡರ್ ಕರೆದಿರುವ ಆರೋಪ ಮಾಡಿದ ಅನುಮತಿ ಪಡೆದ ಗುತ್ತಿಗೆದಾರರು, ಈ ಟೆಂಡರ್ ಸಹ ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಗೆ ಮೀಸಲಿಡಲಾಗಿದೆ ಎಂದು ಆರೋಪಿಸಿದ್ದಾರೆ.

5 ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯಬೇಕಿರುವ ಕೆಲಸವನ್ನ ಎರಡೇ ಜಿಲ್ಲೆಗಳಿಗೆ ನೀಡಿರುವ ಅಣ್ತಮ್ಮಸ್ ಕೋಟಿ ಕೋಟಿ ಡೀಲ್ ಮಾಡಿಕೊಂಡಿದ್ದಾರೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯಾಪ್ತಿಯ ಬರುವ 5 ಜಿಲ್ಲೆಗಳು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳು ಸೆಸ್ಕ್ ವ್ಯಾಪ್ತಿಗೆ ಬರುಲಿವೆ.

ಆದ್ರೆ ಟೆಂಡರ್ ಮಾತ್ರ ಎರಡೇ ಜಿಲ್ಲೆಗೆ ಮೀಸಲು ಮಾಡಿರುವ ಇಂಧನ ಇಲಾಖೆ ಪ್ರಕ್ರಿಯೆ ಕುಮಾರಸ್ವಾಮಿ ಹಾಗೂ ಹೆಚ್.ಡಿ.ರೇವಣ್ಣರ ಅಣತಿಯಂತೆ ನಡೆದಿದೆ.  ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿಸಿರುವ ಆ ಎರಡು ಕಂಪನಿಗಳು, ಸರ್ಕಾರ ಬದಲಾವಣೆಯಾಗಿ ವರ್ಕ್ ಆರ್ಡರ್‌‌ಗಾಗಿ ಕಾಯುತ್ತಿವೆ.

ಈ ಟೆಂಡರ್ ರದ್ದುಪಡಿಸಿ ಮರು ಟೆಂಡರ್ ಕರೆಯುವಂತೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಆಗ್ರಹಿಸಿದೆ. ಟೆಂಡರ್ ರದ್ದು ಪಡಿಸದಿದ್ದರೆ ಕರ್ನಾಟಕ ಸಂಘದ ಸದಸ್ಯರಿಂದ ಹೋರಾಟದ ಎಚ್ಚರಿಕೆ ನೀಡಲಾಗಿದೆ.
ಸ್ಥಳಿಯ ಗುತ್ತಿಗೆದಾರರಿಗೆ ಅನ್ಯಾಯವಾಗಿರುವ ಅಳಲು ತೋಡಿಕೊಂಡ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು. ಟೆಂಡರ್‌ನಿಂದಾಗಿ ರಾಜ್ಯದ ಕೂಲಿ ಕಾರ್ಮಿಕರಿಗು ಅನ್ಯಾಯವಾಗಿದೆ. ಕೂಡಲೆ ಟೆಂಡರ್ ಪ್ರಕ್ರಿಯೆ ರದ್ದು ಪಡಿಸುವಂತೆ ಆಗ್ರಹಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights