ಟೀಂ ಇಂಡಿಯಾದ ಮುಂದಿನ ನಾಯಕ ಯಾರು; ಮುಂಚೂಣಿಯಲ್ಲಿವೆ ಎರಡು ಹೆಸರುಗಳು!

ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ. ಯುಎಇಯಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿ ಮುಗಿದ ಬಳಿಕ ದ್ರಾವಿಡ್ ಅವರು ಟೀಂ ಇಂಡಿಯಾಗೆ ಮಾರ್ಗದರ್ಶಕರಾಗಿ ಫೀಲ್ಡ್‌ಗೆ ಇಳಿಯಲಿದ್ದಾರೆ. ಇದೇ ವೇಳಗೆ ವಿರಾಟ್‌ ಕೊಹ್ಲಿ ಟೀಂ ಇಂಡಿಯಾ ನಾಯಕತ್ವದಿಂದ ಕಳೆಗಿಯಲಿದ್ದಾರೆ. ಹೀಗಾಗಿ, ಭಾರತ ತಂಡಕ್ಕೆ ಮುಂದಿನ ನಾಯಕ ಯಾರು ಎಂಬ ಕುತೂಹಲ ಹುಟ್ಟಿಕೊಂಡಿದೆ.

ಹಲವಾರು ಕ್ರಿಕೆಟ್ ತಜ್ಞರ ಪ್ರಕಾರ ರೋಹಿತ್ ಶರ್ಮಾ ಅವರು ನಾಯಕತ್ವದ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ. ಇನ್ನೂ ಕೆಲವರು ಕನ್ನಡಿಗ ಕೆ.ಎಲ್.ರಾಹುಲ್ ಅಥವಾ ರಿಷಭ್ ಪಂತ್ ಅವರನ್ನು ನಾಯಕನಾಗಿ ನೇಮಿಸಬೇಕು ಎಂದು ಹೇಳುತ್ತಿದ್ದಾರೆ. ಸದ್ಯಕ್ಕೆ, ಬಿಸಿಸಿಐ ಮುಂದಿನ ನಾಯಕ ಯಾರು ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.

ಭಾರತ ತಂಡದ ಮುಂದಿನ ನಾಯಕ ಯಾರಾಗಬೇಕೆಂದು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಹುಲ್‌ ದ್ರಾವಿಡ್, ‘ರೋಹಿತ್ ಶರ್ಮಾ ನನ್ನ ಮೊದಲ ಆಯ್ಕೆ. ಇದರ ಹೊತರಾಗಿ ಕೆ.ಎಲ್.ರಾಹುಲ್ ನನ್ನ ಆಯ್ಕೆಯಾಗಿದ್ದಾರೆ’ ಎಂದು ಹೇಳಿದ್ದಾರೆ.

ಹೀಗಾಗಿ ಟೀಂ ಇಂಡಿಯಾದ ಮುಂದಿನ ನಾಯಕರಾಗಿ ರೋಹಿತ್‌ ಶರ್ಮಾ ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ, ರೋಹಿತ್ ನಾಯಕರಾದರೆ, ಕೆ.ಎಲ್.ರಾಹುಲ್‌ಗೆ ಉಪನಾಯಕನ ಸ್ಥಾನ ಸಿಗುವ ಸಾಧ್ಯತೆ ಇದೆ.

ಅಂತಿಮವಾಗಿ ಬಿಸಿಸಿಐ ಯಾರಿಗೆ ಮಣೆಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಇಡೀ ಭಾರತ ನಿನ್ನ ಹಿಂದೆ ಇದೆ’: ಸ್ಕಾಟ್ಲೆಂಡ್ ವಿಕೆಟ್‌ಕೀಪರ್‌ ಹೇಳಿಕೆಯ ವಿಡಿಯೋ ವೈರಲ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights