ಕಲಬುರ್ಗಿ ಬಸ್ ನಿಲ್ದಾಣದಲ್ಲಿ ಸರ್ಕಾರಿ ನೌಕರನ ಬರ್ಬರ ಹತ್ಯೆ

ಕೊಲೆ ಯತ್ನದ ಆರೋಪ ಎದುರಿಸುತ್ತಿದ್ದ 26 ವರ್ಷದ ಯುವಕನನ್ನು ಗುರುವಾರ ಕಲಬುರ್ಗಿಯ ಸೆಂಟ್ರಲ್ ಬಸ್ ನಿಲ್ದಾಣದ ಆವರಣದಲ್ಲಿ ಕೊಲೆ ಮಾಡಲಾಗಿದೆ.

ಶಸ್ತ್ರಸಜ್ಜಿತ ತಂಡವೊಂದು ಯುವಕನನ್ನು ಹತ್ಯೆಗೈದಿದ್ದು, ಸಾವನ್ನಪ್ಪಿದ ಯುವಕನನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಈತ ಸರ್ಕಾರಿ ನೌಕರನಾಗಿದ್ದ ಎಂದು ವರದಿಯಾಗಿದೆ.

ದಾಳಿಕೋರರು ಆತನನ್ನು ಬಹಳ ದೂರದವರೆಗೆ ಅಟ್ಟಿಸಿಕೊಂಡು ಹೋಗಿ, ಕೊಲೆ ಮಾಡಿದ್ದಾರೆ ವರದಿಯಾಗಿದೆ.

ಕೊಲೆಯಾದ ಯುವಕನ ತಂದೆ ಚಂದ್ರಕಾಂತ್ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ಮುರ್ತುಜಾ, ಸಾಗರ್, ಆಕಾಶ್ ಅಲಿಯಾಸ್ ಆದರ್ಶ್ ಅಲಿಯಾಸ್ ಮಾಯಾಭಾಯಿ ಮತ್ತು ಶುಭಂ ಸಿತ್ನೂರ್ ಎಂಬುವರು ತನ್ನ ಮಗನನ್ನು ಕೊಲೆ ಮಾಡಿರುವ ಅನುಮಾನವಿದೆ ಎಂದು ಹೇಳಿದ್ದಾರೆ.

“ಸುಮಾರು ಒಂದೂವರೆ ವರ್ಷಗಳ ಹಿಂದೆ ಸಾಗರ್ ಭೈರಮಡಗಿ ಎಂಬಾತನ ಕೊಲೆಗೆ ಯತ್ನಿಸಿದ ಎಂಟು ಮಂದಿಯಲ್ಲಿ ನನ್ನ ಮಗನೂ ಒಬ್ಬ” ಎಂದು ಚಂದ್ರಕಾಂತ್ ಹೇಳಿದ್ದಾರೆ.

ಸಾಗರ್ ಮತ್ತು ಆತನ ಸ್ನೇಹಿತರು ಆರೋಪಿತ ಅಪರಾಧಕ್ಕಾಗಿ ಅಭಿಷೇಕ್‌ಗೆ ಬೆದರಿಕೆ ಹಾಕುತ್ತಿದ್ದರು ಎಂದು ಚಂದ್ರಕಾಂತ್ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಇಂಧನದ ಮೇಲಿನ ಅಬಕಾರಿ ಸುಂಕ ಕಡಿತ ಉಪಚುನಾವಣಾ ಫಲಿತಾಂಶದ ಉತ್ಪನ್ನ: ಪಿ ಚಿದಂಬರಂ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights