FACT CHECK | ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಚಿತ ಸ್ಕೂಟಿ ಯೋಜನೆಯನ್ನು ಜಾರಿಗೆ ತಂದಿದೆಯೇ

ಪ್ರಧಾನಮಂತ್ರಿ ಉಚಿತ ಸ್ಕೂಟಿ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಯೋಜನೆಯಡಿ ಸರ್ಕಾರ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಸ್ಕೂಟರ್ ನೀಡುತ್ತಿದ್ದು, ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು ಎಂಬ ಹೇಳಲಾಗಿದೆ.

 

View this post on Instagram

 

A post shared by pmsahai (@pmsahai.in)

pmsahai.in ಎಂಬ ಇನ್​ಸ್ಟಾಗ್ರಾಮ್  ಖಾತೆಯೊಂದರಲ್ಲಿ ಡಿಸೆಂಬರ್ 11, 2024 ರಂದು ಈ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದು, “ಈಗ ಸರ್ಕಾರವು ಪ್ರತಿ ಹೆಣ್ಣು ಮಗುವಿಗೆ ಉಚಿತ ಸ್ಕೂಟಿ ನೀಡುತ್ತಿದೆ. ಅರ್ಜಿ ಸಲ್ಲಿಸಲು, khabarbazar.in ಸೈಟ್‌ಗೆ ಹೋಗಿ ಮತ್ತು ಫಾರ್ಮ್ ಅನ್ನು ಭರ್ತಿ ಮಾಡಿ” ಎಂದು ಬರೆಯಲಾಗಿದೆ.
ಹಾಗಿದ್ದರೆ ಕೇಂದ್ರ ಸರ್ಕಾರ ನಿಜವಾಗಿಯೂ ಪ್ರಧಾನಮಂತ್ರಿ ಉಚಿತ ಸ್ಕೂಟಿ ಯೋಜನೆಯನ್ನು ಜಾರಿಗೆ ತಂದು ಪ್ರತಿ ಹೆಣ್ಣು ಮಕ್ಕಳಿಗೆ ಉಚಿತ ಸ್ಕೂಟರ್ ನೀಡಲು ಮುಂದಾಗಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಕೀವರ್ಡ್‌ಗಳ ಸಹಾಯದಿಂದ ಗೂಗಲ್​ನಲ್ಲಿ ಸರ್ಚ್ ಮಾಡಿದಾಗ, ಈ ಯೋಜನೆಗೆ ಸಂಬಂಧೀಸಿದ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಲಭ್ಯವಾಗಿಲ್ಲ. ಆದರೆ ಈ ರೀತಿಯ ನಕಲಿ ಪೋಸ್ಟ್​ಗಳನ್ನು ಮಾಡಿದ ಅನೇಕ ನಕಲಿ ವೆಬ್‌ಸೈಟ್‌ಗಳು ಗೂಗಲ್​ನಲ್ಲಿ ಕಂಡುಬಂದಿವೆ.

ಮತ್ತಷ್ಟು ಮಾಹಿತಿಗಾಗಿ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಖಬರ್ ಬಜಾರ್ ವೆಬ್‌ಸೈಟ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದ್ದು, ವೆಬ್‌ಸೈಟ್‌ನಲ್ಲಿ ಉಚಿತ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅಥವಾ ಉಚಿತ ಮೊಬೈಲ್ ರೀಚಾರ್ಜ್ ಹೇಗೆ ಪಡೆಯುವುದು ಎಂದು ಹೇಳುವ ನಕಲಿ ವರದಿಗಳನ್ನು ಪ್ರಕಟಿಸಿರುವುದನ್ನು ಕಾಣಬಹುದಾಗಿದೆ.

ತನಿಖೆಯ ಸಮಯದಲ್ಲಿ, ಪಿ ಐ ಬಿ ಫ್ಯಾಕ್ಟ್ ಚೆಕ್‌ನ ಅಧಿಕೃತ ಎಕ್ಸ್ (ಹಿಂದೆ ಟ್ವಿಟ್ಟರ್) ಖಾತೆಯಲ್ಲಿ ವೈರಲ್ ಕ್ಲೈಮ್‌ಗೆ ಸಂಬಂಧಿಸಿದ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾನೆಯ  ನಕಲಿಯಾಗಿದೆ. ಅಂತಹ ಯಾವುದೇ ಯೋಜನೆಯನ್ನು ಭಾರತ ಸರ್ಕಾರ ಜಾರಿ ಮಾಡಿಲ್ಲ.

ಸೈಬರ್ ತಜ್ಞ, ಸೈಬರ್ ಅಪರಾಧ ಮತ್ತು ಸೈಬರ್ ಕಾನೂನಿನ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಅನುಜ್ ಅಗರ್ವಾಲ್ ಈ ಕುರಿತು ಹೇಳಿಕೆ ನೀಡಿರುವುದು ನಮಗೆ ಲಭ್ಯವಾಗಿದೆ. ಅವರು ಹೇಳಿರುವ ಪ್ರಕಾರ, ಇದು ಕ್ಲಿಕ್‌ಬೈಟ್ ಲಿಂಕ್ ಆಗಿದೆ. ಬಳಕೆದಾರರು ಈ ಮೂಲಕ ವೀವ್ಸ್ ಮತ್ತು ಲೈಕ್ಸ್ ಪಡೆಯಲು ಬಯಸುತ್ತಾರೆ, ಇದರಿಂದ ಅವರು ಹಣವನ್ನು ಗಳಿಸಬಹುದು ಎಂದಿದ್ದಾರೆ.ನಾವು ಈ ವೆಬ್‌ಸೈಟ್‌ನ ಬಗ್ಗೆ ಗೂಗಲ್‌ನಲ್ಲಿಯೂ ಹುಡುಕಿದ್ದೇವೆ. ಈ ವೆಬ್‌ಸೈಟ್ ಅಪಾಯಕಾರಿ ಮತ್ತು ಡೇಟಾ ಕದಿಯುವ ಸಾಧನ ಎಂದು ಸಿಸ್ಟಮ್ ನಮಗೆ ಎಚ್ಚರಿಕೆ ನೀಡಿದೆ.

2 ಜನರು ಮತ್ತು ಪಠ್ಯ ನ ಚಿತ್ರವಾಗಿರಬಹುದು

ಒಟ್ಟಾರೆಯಾಗಿ ಹೇಳುವುದಾರೆ, ಉಚಿತ ಸ್ಕೂಟಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂಬುದು ಸುಳ್ಳು.  ವಾಸ್ತವವಾಗಿ, ವೈರಲ್ ವೆಬ್‌ಸೈಟ್‌ನಲ್ಲಿ ಇದೇ ರೀತಿಯ ಕೆಲ ನಕಲಿ ಸುದ್ದಿ ವರದಿಯಾಗಿದೆ. ವೀವ್ಸ್ ಮತ್ತು ಲೈಕ್ಸ್​ ಪಡೆಯಲು ಕ್ಲಿಕ್‌ಬೈಟ್ ಲಿಂಕ್‌ಗಳು ಮತ್ತು ವಿಡಿಯೋಗಳನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇದೊಂದು ಹಣ ಗಳಿಸುವ ತಂತ್ರವಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಲಿಂಕ್‌ಗಳನ್ನು ಕ್ಲಿಕ್ ಮಾಡಿ ವಂಚನೆಗೊಳಗಾಗದಿರಿ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾ ಮುಸ್ಲಿಮರು ಹಿಂದೂ ಮಹಿಳೆಯರನ್ನು ಹತ್ಯೆ ಮಾಡಿದ್ದಾರೆ ಎಂದು ಹತ್ರಾಸ್ ಕಾಲ್ತುಳಿತದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights