ಉಸಿರಾಡಲು ತೊಂದರೆಯೆಂದು ಬಂದ ವ್ಯಕ್ತಿಯ ಮೂಗು ಪರೀಕ್ಷಿಸಿದ ವೈದ್ಯರು ಶಾಕ್..!

ಇಂದಿನ ಕಾಲದಲ್ಲಿ ನಡೆಯುವ ಘಟನೆಗಳು ಕೇಳುಗರಿಗೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತವೆ. ಹೀಗೊಂದು ವಿಸ್ಮಯ ಘಟನೆ ರಷ್ಯದಿಂದ ವರದಿಯಾಗಿದ್ದು ಉಸಿರಾಟದ ತೊಂದರೆ ಎಂದ ವ್ಯಕ್ತಿಯ ಮೂಗನ್ನು ಪರೀಕ್ಷಿಸಿದ ವೈದ್ಯರು ಶಾಕ್ ಆಗಿದ್ದಾರೆ. ಇದಕ್ಕೆ ಕಾರಣ ಏನು ಅನ್ನೋದನ್ನ ಕೇಳಿದ್ರೆ ನೀವು ಕೂಡ ಶಾಕ್ ಆಗೋದು ಗ್ಯಾರೆಂಟಿ.

59 ವರ್ಷದ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಇತ್ತು. ಈ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಅವರು ವೈದ್ಯರ ಬಳಿಗೆ ಹೋಗಿದ್ದಾರೆ. ಬಲಭಾಗದ ಮೂಗಿನಿಂದ ವ್ಯಕ್ತಿಗೆ ಉಸಿರಾಡಲು ಹೆಚ್ಚು ತೊಂದರೆಯಾಗುತ್ತಿರುವುದನ್ನ ಖಾತ್ರಿ ಪಡಿಸಿಕೊಂಡ ವೈದ್ಯರು ಪರೀಕ್ಷಿಸಿದಾಗ ಬಲ ಭಾಗದ ಮೂಗಿನಲ್ಲಿ ನಾಣ್ಯ ಇರುವುದು ಖಾತ್ರಿಯಾಗಿದೆ. ಈ ಸಮಯದಲ್ಲಿ ವೈದ್ಯರು ವ್ಯಕ್ತಿಯ ಮೂಗನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ವ್ಯಕ್ತಿಯ ಮೂಗಿನಲ್ಲಿ ಒಂದು ನಾಣ್ಯ ಸಿಕ್ಕಿಬಿದ್ದಿದ್ದು, ಹೀಗಾಗಿ ಅವರು ಉಸಿರಾಟದಿಂದ ಬಳಲುತ್ತಿದ್ದರು. ಅಷ್ಟಕ್ಕೂ ಈ ನಾಣ್ಯ ವ್ಯಕ್ತಿ ಮೂಗಿನಲ್ಲಿ ಹೇಗೆ ಬಂತು ಅನ್ನೋ ವಿಚಾರ ಕೇಳಿದ್ರೆ ನೀವಿನ್ನೂ ಗಾಬರಿಗೊಳ್ಳುತ್ತಿರಾ. ಎಸ್.. ವೈದ್ಯರು ಕೇಳಿದ ಪ್ರಶ್ನೆಗೆ ವ್ಯಕ್ತಿ ಕೊಟ್ಟ ಉತ್ತರ ಏನ್ ಗೊತ್ತಾ..? “ಅವನು ಆರು ವರ್ಷದವನಾಗಿದ್ದಾಗ, ಅವನು ಆಕಸ್ಮಿಕವಾಗಿ ಮೂಗಿನಲ್ಲಿ ನಾಣ್ಯವನ್ನು ಸಿಕ್ಕಿಹಾಕಿಕೊಂಡಿತಂತೆ. ತಾಯಿಗೆ ಗೊತ್ತಾದರೆ ಗದರಿಸುತ್ತಾರೆಂದು ಹೆದರಿ ಅವನು ತನ್ನ ತಾಯಿಯಿಂದ ಈ ವಿಚಾರ ಹೇಳಲಿಲ್ಲವಂತೆ. ನಾಣ್ಯವನ್ನು ಮೂಗಿನಲ್ಲಿ ಇಟ್ಟುಕೊಂಡ ವ್ಯಕ್ತಿ ಸುಮಾರು 50 ವರ್ಷಗಳಿಂದ ಯಾವುದೇ ತೊಂದರೆಯಿಲ್ಲದೆ ಉಸಿರಾಡುತ್ತಿದ್ದಾನೆ. ಸದ್ಯ ಉಸಿರಾಡಲು ತೊಂದರೆಯಾದಾಗ ವ್ಯಕ್ತಿಯು ವೈದ್ಯರ ಬಳಿಗೆ ಬಂದಿದ್ದಾನೆ. ಆಸ್ಪತ್ರೆಯ ವೈದ್ಯರು ಅವರ ಮೂಗನ್ನು ಸ್ಕ್ಯಾನ್ ಮಾಡಿದಾಗ ವ್ಯಕ್ತಿ ಮೂಗಲ್ಲಿ ನಾಣ್ಯ ಇರುವುದು ದೃಢಪಟ್ಟಿದೆ.

ನಂತರ ವೈದ್ಯರು ಬಹಳ ಎಚ್ಚರಿಕೆಯಿಂದ ಶಸ್ತ್ರಚಿಕಿತ್ಸೆ ಮಾಡಿ ನಾಣ್ಯವನ್ನು ಮೂಗಿನಿಂದ ಹೊರತೆಗೆದಿದ್ದಾರೆ. 53 ವರ್ಷಗಳ ನಂತರ ವ್ಯಕ್ತಿಯ ಮೂಗಿನಿಂದ ನಾಣ್ಯವನ್ನು ಹೊರತೆಗೆಯಲಾಯಿತು. ವ್ಯಕ್ತಿಯನ್ನು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, “ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ವ್ಯಕ್ತಿಯು ಈಗ ಆರಾಮವಾಗಿ ಉಸಿರಾಡಬಹುದು” ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.