FACT CHECK | ಬಾಂಗ್ಲಾ ಮುಸ್ಲಿಮರು ಹಿಂದೂ ಮಹಿಳೆಯರನ್ನು ಹತ್ಯೆ ಮಾಡಿದ್ದಾರೆ ಎಂದು ಹತ್ರಾಸ್ ಕಾಲ್ತುಳಿತದ ವಿಡಿಯೋ ಹಂಚಿಕೆ

ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಹತ್ಯೆಯಾಗಿದೆ ಎಂದು ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್‌ನಲ್ಲಿ ಕಂಡುಬಂದ ಪೋಸ್ಟ್‌ನಲ್ಲಿ “ಬಾಂಗ್ಲಾದೇಶ ನಲ್ಲಿ ಅಲ್ಲಿನ ಮುಸ್ಲಿಂ ರಿಂದ ಹಿಂದುಗಳ ಮರಣ ಹೋಮ. ಇಂದು ನೀವು ಬಾಂಗ್ಲಾದೇಶಿ  ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ನಿಮ್ಮ ದೇಶದಿಂದ ಓಡಿಸದಿದ್ದರೆ, ನಾಳೆ ನಿಮಗೂ, ನಿಮ್ಮ ಮಕ್ಕಳಿಗೂ ಮತ್ತು ನಿಮ್ಮ ದೇಶಕ್ಕೂ ಇದೇ ಗತಿ…” ಎಂದಿದೆ.

ಫೇಸ್‌ಬುಕ್‌ ನಲ್ಲಿ ಹಂಚಿಕೊಂಡ ಅಂತಹ ಒಂದು ಪೋಸ್ಟ್‌ ನ ಶೀರ್ಷಿಕೆ ಹೀಗಿದೆ, “ಬಾಂಗ್ಲಾದೇಶ ನಲ್ಲಿ ಅಲ್ಲಿನ ಮುಸ್ಲಿಂ ರಿಂದ ಹಿಂದುಗಳ ಮರಣ ಹೋಮ. ಇಂದು ನೀವು ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ನಿಮ್ಮ ದೇಶದಿಂದ ಓಡಿಸದಿದ್ದರೆ, ನಾಳೆ ನಿಮಗೂ, ನಿಮ್ಮ ಮಕ್ಕಳಿಗೂ ಮತ್ತು ನಿಮ್ಮ ದೇಶಕ್ಕೂ ಇದೇ ಗತಿ.” ಅಂತಹ ಇತರ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು  ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ವಿಡಿಯೋ ಸುಮಾರು 1 ನಿಮಿಷದ್ದಾಗಿದ್ದು, ಇದರಲ್ಲಿ ಹಲವಾರು ಮಹಿಳೆಯರ ಮೃತ ದೇಹಗಳು ನೆಲದ ಮೇಲೆ ಬಿದ್ದಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಅವರ ಕುಟುಂಬ ಸದಸ್ಯರು ಕೆಲವು ಮೃತ ದೇಹಗಳ ಪಕ್ಕದಲ್ಲಿ ಕುಳಿತಿರುವುದು ಕಂಡುಬರುತ್ತದೆ. ಹಾಗಿದ್ದರೆ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ  ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,   ಜುಲೈ 3, 2024 ರಂದು ಯೂಟ್ಯೂಬ್ ಚಾನೆಲ್ ನಿಂದ  ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ.

ವಿಡಿಯೋದೊಂದಿಗೆ ನೀಡಲಾಗಿರುವ ಶೀರ್ಷಿಕೆ ಮತ್ತು ವಿವರಣೆಯಲ್ಲಿ, ಇದು ಉತ್ತರ ಪ್ರದೇಶದ ಹತ್ರಾಸ್‌ನವರೆಂದು ಹೇಳಲಾಗಿದೆ, ಅಲ್ಲಿ ಭೋಲೆ ಬಾಬಾರ ಸತ್ಸಂಗದ ನಂತರ ಉಂಟಾದ ಕಾಲ್ತುಳಿತದಿಂದಾಗಿ ಸುಮಾರು 122 ಜನರು ಸಾವನ್ನಪ್ಪಿದ್ದಾರೆ. ಹತ್ರಾಸ್ ಜಿಲ್ಲೆಯಿಂದ 27 ಕಿಲೋಮೀಟರ್ ದೂರದಲ್ಲಿರುವ ಫುಲ್ರೈ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವಿವರಣೆಯಲ್ಲಿದೆ.

ನಂತರ, ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ನಾವು ಹುಡುಕಾಟ ನಡೆಸಿದಾಗ, 3 ಜುಲೈ 2024 ರಂದು ಪ್ರಕಟಿಸಲಾದ ದೈನಿಕ್ ಭಾಸ್ಕರ್ ವರದಿಯನ್ನು ಕಂಡುಕೊಂಡಿದ್ದೇವೆ . ವೈರಲ್ ವೀಡಿಯೋವನ್ನು ಹೋಲುವ ದೃಶ್ಯಗಳು ಈ ವರದಿಯಲ್ಲಿಯೂ ಇದ್ದವು.

ಜುಲೈ 2, 2024 ರಂದು ಹತ್ರಾಸ್‌ನ ಫುಲ್ರೈ ಗ್ರಾಮದಲ್ಲಿ ಸೂರಜ್ ಪಾಲ್ ಅಲಿಯಾಸ್ ಭೋಲೆ ಬಾಬಾರ ಸತ್ಸಂಗವನ್ನು ಆಯೋಜಿಸಲಾಗಿತ್ತು ಎಂದು ವರದಿಯಲ್ಲಿದೆ. ಸತ್ಸಂಗದ ನಂತರ, ಸೂರಜ್ ಪಾಲ್ ಅವರ ಪಾದಗಳಿಂದ ಧೂಳನ್ನು ತೆಗೆದುಕೊಳ್ಳುವಾಗ, ಕಾಲ್ತುಳಿತ ಸಂಭವಿಸಿತು ಮತ್ತು ಜನರು ಒಬ್ಬರನ್ನೊಬ್ಬರು ತುಳಿಯಲು ಪ್ರಾರಂಭಿಸಿದರು. ಸುಮಾರು 122 ಜನರು ಸಾವನ್ನಪ್ಪಿದರು ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಅಪಘಾತ ಎಷ್ಟು ಭೀಕರವಾಗಿತ್ತು ಎಂದರೆ 10 ನಿಮಿಷಗಳಲ್ಲಿ ಸಮೀಪದ ಸಿಕಂದರಾವ್ ಸಿಎಚ್‌ಸಿಯಲ್ಲಿ ಮೃತದೇಹಗಳ ರಾಶಿ ನಿರ್ಮಾಣವಾಯಿತು.

ಇದಲ್ಲದೆ, ಇಂಡಿಯಾ ಟುಡೇ ವರದಿಯಲ್ಲಿ  ಈ ಘಟನೆಯ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿಗೆ ಆದೇಶಿಸಿದೆ ಎಂದು ಈ ವರದಿಯಲ್ಲಿದೆ.  ಈ ಘಟನೆಯ ಬಗ್ಗೆ ಸಂಘಟಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಂಡಿಯಾ ಟುಡೇ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯಲ್ಲಿರುವ ಚಿತ್ರವನ್ನು ನಾವು ಎಚ್ಚರಿಕೆಯಿಂದ ಗಮನಿಸಿದ್ದು, ವೈರಲ್ ವೀಡಿಯೋಗಳಿಗೆ ಸಾಮ್ಯತೆ ಹೊಂದಿರುವುದನ್ನು ಗಮನಿಸಬಹುದು.  ನೋಡಿದರೆ, ವೈರಲ್ ವೀಡಿಯೊದ ದೃಶ್ಯಗಳನ್ನು ಸಹ ನಾವು ನೋಡಬಹುದು, ಅದನ್ನು ಕೆಳಗಿನ ಚಿತ್ರದಿಂದ ಅರ್ಥಮಾಡಿಕೊಳ್ಳಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಜುಲೈ ತಿಂಗಳಲ್ಲಿ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತದಿಂದ ಸುಮಾರು 122 ಜನರು ಸಾವನ್ನಪ್ಪಿದ ಘಟನೆಯನ್ನು, ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಹತ್ಯೆ ಎಂದು ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತಮಿಳು ಚಿತ್ರ ನಟಿ ಜ್ಯೋತಿಕಾ ಅವರ ಈ ಅಶ್ಲೀಲ ಚಿತ್ರ ನಕಲಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights