ಕೊರೊನಾ ಭೀತಿ : ಮುಂಗಾರು ಅಧಿವೇಶನ ಮುಂದಿನ ವಾರವೇ ಕೊನೆಗೊಳ್ಳುವ ಸಾಧ್ಯತೆ!

ಕೊರೋನಾ ಸೋಂಕು ಹರಡುವ ಭಿತಿಯಿಂದ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ನಿಗದಿಗಿಂತ ಮುನ್ನವೇ ಕತ್ತರಿ ಬಿಳುವ ಸಾಧ್ಯತೆ ದಟ್ಟವಾಗಿದೆ.ಅಧಿವೇಶನದಲ್ಲಿ ಪಾಲ್ಗೊಂಡ ಕೆಲವು ಎಂಪಿಗಳಲ್ಲಿ ಕೊರೋನಾ ವೈರಾಣು ಸೋಂಕು ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಅಧಿವೇಶನಕ್ಕೆ ಆರಂಭಕ್ಕೂ ಮುನ್ನ ಸೋಂಕು ತಗುಲಿಸಿಕೊಂಡವರೂ ಸೇರಿದಂತೆ ಈವರೆಗೆ ಸೋಂಕಿತ ಎಂಪಿಗಳ ಸಂಖ್ಯೆ 30 ದಾಟಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮುಂದಿನ ವಾರವೇ ಕೊನೆಗೊಳಿಸಲು ಸರಕಾರ ತುದಿಗಾಲ ಮೇಲೆ ನಿಂತಿದೆ. ಈ ಸಂಬಂಧ ಪ್ರತಿಪಕ್ಷಗಳ ಜೊತೆ ಸರಕಾರ ಮಾತುಕತೆ ನಡೆಸಿದ್ದು ಬರುವ ಬುಧವಾರ ಅಧಿವೇಶನ ಕೊನೆಯಾಗಬಹುದು ಎಂದು ಏಳಲಾಗಿದೆ.

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ 25 ಎಂಪಿಗಳಿಗೆ ಕೊರೋನಾ ಅಂಟಿಕೊಂಡಿತ್ತು.ಲೋಕಸಭೆಯ 17 ಹಾಗೂ ರಾಜ್ಯಸಭೆಯ 8 ಮಂದಿ ಸಂಸದರಿಗೆ ಕೊರೋನಾ ರೋಗ ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.

ಕಳೆದ ಸೋಮವಾರದಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಇದಕ್ಕೆ ಪೂರ್ವಭಾವಿಯಾಗಿ ಪರೀಕ್ಷೆ ನಡೆಸಲಾಗಿತ್ತು. ಶನಿವಾರ ಹಾಗೂ ಭಾನುವಾರ ಸಂಸದರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಸಚಿವಾಲಯ ಪ್ರಕಟಣೆ ತಿಳಿಸಿದೆ. ಕೊರೋನಾ ಬಾಧಿತರಲ್ಲಿ ಕರ್ನಾಟಕದ ಎಂಪಿ ಅನಂತ್ ಕುಮಾರ್‍ ಹೆಗಡೆ ಸಹಾ ಸೇರಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

ಕೊರೋನಾ ಸೋಂಕು ಹರಡುವ ಭಿತಿಯಿಂದ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ನಿಗದಿಗಿಂತ ಮುನ್ನವೇ ಕತ್ತರಿ ಬಿಳುವ ಸಾಧ್ಯತೆ ದಟ್ಟವಾಗಿದೆ.ಅಧಿವೇಶನದಲ್ಲಿ ಪಾಲ್ಗೊಂಡ ಕೆಲವು ಎಂಪಿಗಳಲ್ಲಿ ಕೊರೋನಾ ವೈರಾಣು ಸೋಂಕು ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಅಧಿವೇಶನಕ್ಕೆ ಆರಂಭಕ್ಕೂ ಮುನ್ನ ಸೋಂಕು ತಗುಲಿಸಿಕೊಂಡವರೂ ಸೇರಿದಂತೆ ಈವರೆಗೆ ಸೋಂಕಿತ ಎಂಪಿಗಳ ಸಂಖ್ಯೆ 30 ದಾಟಿದೆ.ಈ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮುಂದಿನ ವಾರವೇ ಕೊನೆಗೊಳಿಸಲು ಸರಕಾರ ತುದಿಗಾಲ ಮೇಲೆ ನಿಂತಿದೆ. ಈ ಸಂಬಂಧ ಪ್ರತಿಪಕ್ಷಗಳ ಜೊತೆ ಸರಕಾರ ಮಾತುಕತೆ ನಡೆಸಿದ್ದು ಬರುವ ಬುಧವಾರ ಅಧಿವೇಶನ ಕೊನೆಯಾಗಬಹುದು ಎಂದು ಹೇಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights